ನೀವು ಮಾಡುವ ಈ ತಪ್ಪುಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡುವುದು!

0
1632

ಹೌದು ಪ್ರಸ್ತುತ ದಿನಗಳಲ್ಲಿ ಹಲವಾರು ಜನರು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತ ಸಮಸ್ಯೆಯಿಂದ ಹಲವು ಫಜೀತಿ ಪಡುವುದುಂಟು ಈ ಸಮಸ್ಯೆಗೆ ಕೆಲವೊಂದು ಟಿಪ್ಸ್ ಇಲ್ಲಿದೆ ನೋಡಿ ಇದನ್ನು ಅನುಸರಿಸುವುದರಿಂದ ಗ್ಯಾಸ್ಟ್ರಿಕ್ ನಿಂದ ದೂರ ಉಳಿಯಬಹುದು.

ನೀವು ಪ್ರತಿನಿತ್ಯ ಸೇವಿಸುವಂತ ಆಹಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಈ ಸಮಸ್ಯೆ ಕಾಣುತ್ತದೆ ಮಿತವಾಗಿ ಹಾಗೂ ನಿಯಮಿತ ಸಮಯದಲ್ಲಿ ಆಹಾರ ಸೇವಿಸುವುದು ಉತ್ತಮ.

ನೀವು ಕೆಲಸದ ಸಮಯದಲ್ಲಿ ಅಥವಾ ಬೇರೆ ಯಾವುದೇ ಸಮಯದಲ್ಲಿ ಹೊರಗೆ ತಿನ್ನುವಾಗ ಹಸಿ ಪದಾರ್ಥಗಳಾದ ಮಜ್ಜಿಗೆ, ಹೆಚ್ಚಿದ ತರಕಾರಿಗಳನ್ನು ಎಚ್ಚರಿಕೆಯಿಂದ ಸೇವಿಸಬೇಕು.

ನೀವು ಊಟವಾದ ಕೂಡಲೇ ಬಗ್ಗುವುದು, ಭಾರ ಎತ್ತುವುದು, ಮಲಗುವುದು ಮಾಡಬಾರದು ಹಾಗೆ ಮಾಡಿದರೆ ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ನೀವು ಸೇವಿಸುವಂತ ಆಹಾರ ಪದಾರ್ಥಗಳು ಖಾರ ಮಸಾಲೆ ಕಡಿಮೆ ಹೊಂದಿರಬೇಕು ಹಾಗು ಅತಿ ಹೆಚ್ಚಿನ ಮಾಂಸಾಹಾರ ಸೇವನೆ ಅಭ್ಯಾಸ ಇದ್ದಾರೆ ಬಿಟ್ಟು ಬಿಡುವುದು ಒಳ್ಳೆಯದು ಮಾಂಸಾಹಾರ ಸೇವನೆ ಮಿತವಾಗಿ ಸೇವಿಸಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಇರಿ.

ಕೆಲವೊಂದು ಚಟಗಳಿಂದ ದೂರ ಉಳಿಯುವುದು ಒಳ್ಳೆಯದು, ಯಾಕೆಂದರೆ ಧೂಮಪಾನ, ಮದ್ಯಪಾನದಿಂದ ಅನಾರೋಗ್ಯ ಉಂಟಾಗುತ್ತದೆ ಇದರಿಂದ ದೂರವಿರುವುದು ಉತ್ತಮ.

ನೀವು ಸೇವಿಸುವಂತ ಆಹಾರ ಪಚನವಾಗದೇ ಹೊಟ್ಟೆಯುಬ್ಬರವಿದ್ದಲ್ಲಿ, ಜೀರಿಗೆ, ಒಣದ್ರಾಕ್ಷಿ, ಓಮದಕಾಳುಗಳನ್ನು ಜಜ್ಜಿ ಸೇವಿಸಬಹುದು.

ನಿಮ್ಮಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಡಿದಾಗ ಹುಳಿಯಿಲ್ಲದ ಮಜ್ಜಿಗೆ ಸೇವನೆ ಮಾಡುವುದು ಒಳ್ಳೆಯದು. ನೈಸರ್ಗಿಕವಾಗಿ ನಿಮಗೆ ಸುಲಭವಾಗಿ ಸಿಗುವಂತ ನೆಲ್ಲಿಕಾಯಿ ಪುಡಿಯನ್ನು ಮಜ್ಜಿಗೆಯಲ್ಲಿ ಸೇರಿಸಿ ಕುಡಿಯಿರಿ.ಇವುಗಳನ್ನು ಮಾಡುವುದರಿಂದ ಈ ಸಮಸ್ಯೆಯಿಂದ ದೂರ ಉಳಿಯಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here