ಲಂಚ ಕೊಡದೆ ಕೇವಲ 15 ನಿಮಿಷದಲ್ಲಿಯೇ ಜಾತಿ ಮತ್ತು ಆದಾಯ ಪ್ರಮಾಣ ಪಾತ್ರ ಪಡೆಯುವ ಸುಲಭ ಮಾರ್ಗ ಇಲ್ಲಿದೆ ನೋಡಿ!

0
1635

ಮೊದಲೆಲ್ಲ ಸರ್ಕಾರಿ ಕೆಲಸ ಅಥವ ಸರ್ಕಾರದಿಂದ ಯಾವುದೇ ದಾಖಲಾತಿ ಪಡೆಯಲು ತಿಂಗಳುಗಳ ಗಟ್ಟಲೆ ಕಾಯಬೇಕಿತ್ತು ಹಾಗು ಅಧಿಕಾರಿಗಳಿಗೆ ಕೊಂಚ ಹಣ ಪೋಲುಮಾಡಬೇಕಿತ್ತು, ಇನ್ನು ಇಷ್ಟೆಲ್ಲಾ ಮಾಡಿದರು ಸಮಯಕ್ಕೆ ಸರಿಯಾಗಿ ಆ ದಾಖಲೆಗಳೂ ಕೂಡ ಕೈ ಸೇರುತ್ತಿರಲ್ಲಿಲ್ಲ, ಈ ಸಮಸ್ಯೆಗಳಿಗೆಲ್ಲ ಈಗ ಬ್ರೇಕ್ ಬೀಳಲಿದ್ದು ಎಲ್ಲವು ದಿಜಿಟಲೀಕರಣಗೊಳ್ಳುತ್ತಿದೆ.

ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಲು ಇನ್ನು ಮುಂದೆ ಕಛೇರಿಗಳ ಮುಂದೆ ಕ್ಯು ನಿಲ್ಲಬೇಕಿಲ್ಲ, ಲಂಚ ಕೊಡಬೇಕಿಲ್ಲ, ಎಲ್ಲೂ ಅಲೆಯಬೇಕಿಲ್ಲ ಹಾಗು ಸಮಯಕ್ಕೆ ಸರಿಯಾಗಿ ನಿಮ್ಮ ಕೈ ತಲುಪುವ ವ್ಯವಸ್ಥೆ ಜಾರಿಯಾಗಿದೆ. ಅದೆಗಪ್ಪ ಅಂತೀರಾ ಈಗ ಮೊಬೈಲ್ ಅಥವಾ ಆನ್ಲೈನ್ ಮೂಲಕ ಕೇವಲ ರೂ. 20 ಪಾವತಿಸಿ 5-10 ನಿಮಿಷಗಳಲ್ಲಿಯೇ ಜಾತಿ / ಆದಾಯ ಪ್ರಮಾಣ ಪತ್ರಗಳನ್ನು ಪಡೆಯಬಹುದು, ನೋಡಿ ಹೇಗೆ ಅಂತ.

ನಿಮ್ಮ ಮೊಬೈಲ್ ಅಥವ ಆನ್ಲೈನ್ ನಲ್ಲಿ ಮೊದಲು ನಾಡ ಕಚೇರಿ ವೆಬ್-ಸೈಟ್ ಗೆ www.nadakacheri.karnataka.gov.in ಭೇಟಿ ನೀಡಿ, ಆನ್-ಲೈನ್ ಅರ್ಜಿ ಸ್ವೀಕೃತಿ ವಿಭಾಗದಲ್ಲಿನ ಆನ್-ಲೈನ್ ಅರ್ಜಿ ಆಯ್ಕೆ ಮಾಡಿ. ವೆಬ್-ಸೈಟ್ ಗೆ ಪ್ರವೇಶಿಸುವ ಮೊದಲ ಹಂತದಲ್ಲಿ ನಿಮ್ಮ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮುಂದುವರೆಯಬೇಕು.

ನಾಡ ಕಚೇರಿ ವೆಬ್-ಸೈಟ್ ಗೆ ಪ್ರವೇಶಿಸಿದ ನಂತರ ಜಾತಿ ಅಥವಾ ಆದಾಯ ಪ್ರಮಾಣಪತ್ರ ಪಡೆಯಬೇಕೆಂದರೆ ನ್ಯೂ ರಿಕ್ವೆಸ್ಟ್ (New Request) ವಿಧಾನ ಆಯ್ಕೆ ಮಾಡಬೇಕು. ಅದರಲ್ಲಿ ಹಲವು ಆಯ್ಕೆಗಳಿರುತ್ತವೆ, ನಿಮಗೆ ಆದಾಯ ಪತ್ರ ಬೇಕಿದ್ದರೆ Income Certificate ಮೇಲೆ ಮತ್ತು ಜಾತಿ ಪತ್ರ ಬೇಕಿದ್ದರೆ ಕಾಸ್ಟ ಸರ್ಟಿಫಿಕೇಟ್ ಮೇಲೆ ಒತ್ತಿ.

ಇದಾದ ನಂತರ ಭಾಷೆಯ ಆಯ್ಕೆ ತೆರೆದುಕೊಳ್ಳುತ್ತದೆ. ನಿಮಗೆ ಕನ್ನಡದಲ್ಲಿ ಬೇಕಿದ್ದರೆ “ಕನ್ನಡ” ಮೇಲೆ ಕ್ಲಿಕ್ ಮಾಡಿ. ಕೆಳಗಡೆ ಕೆಂಪು ಅಕ್ಷರಗಳಲ್ಲಿ ನೀಡಿರುವ ಆದಾಯ ಪ್ರಮಾಣಪತ್ರವನ್ನು ಆಯ್ಕೆ ಮಾಡಿ ನಂತರ ನಿಮ್ಮ ವೈಯಕ್ತಿಕ ವಿವರಗಳಾದ ಪಡಿತರ ಸಂಖ್ಯೆ, ಆಧಾರ್ ಸಂಖ್ಯೆ, ವಿಳಾಸ ಇತ್ಯಾದಿಗಳನ್ನು ಭರ್ತಿ ಮಾಡಿ ಮುಂದುವರೆಯಿರಿ.

ನಿಗದಿಪಡಿಸಿರುವ ಶುಲ್ಕ 20 ರೂ ಪಾವತಿ ಮಾಡಬೇಕಾಗಿದೆ. ಇದಕ್ಕೆ ಆನ್​ಲೈನ್ ಅವಕಾಶ ಮಾಡಿಕೊಡಲಾಗಿದೆ. ಇದಲ್ಲದೇ ನೀವು ಸಲ್ಲಿಸಿರುವ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ಕೂಡ ನೋಡಬಹುದಾಗಿದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here