ಈಗಾಗಲೇ ಕೊರೊನ ಅಟ್ಟಹಾಸದಿಂದ ಸಾಕಾಗಿರುವ ದೇಶಕ್ಕೆ ಹಾಗು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿನ ಜನತೆ ವಿಷಾನಿಲ ಸೋರಿಕೆ ನಿಜವಾಗಿಯೂ ಪ್ರೆಜ್ಞೆ ತಪ್ಪಿ ರಸ್ತೆಯಲ್ಲಿ ಬೀಳುವಂತಾಗಿದೆ, ಅಬ್ಬಬ್ಬಾ ಈ ರೀತಿಯ ಪರಿಸ್ಥಿತಿ ಪ್ರಪಂಚದ ಯಾವ ದೇಶದ ಪ್ರಜೆಗಳಿಗೂ ಬೇಡ, ಮೂಕಪ್ರಾಣಿಗಳು ಚಿಕ್ಕ ಮಕ್ಕಳು ವಯಸ್ಸಾದವರು ಉಸಿರಾಡಲು ಹಿಂಸೆ ಪಡುತ್ತಾ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ದೃಶ್ಯ ಕಣ್ಣಿನಲ್ಲಿ ನೀರು ಬರುವಂತೆ ಮಾಡಿದೆ, ವಿಶಾಖಪಟ್ಟಣದಲ್ಲಿ ಇರುವ ಪ್ಲಾಸ್ಟಿಕ್ ಉತ್ಪಾದನೆ ಮಾಡುವ ಎಲ್ ಜಿ ಪಾಲಿಮರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ರಾಸಾಯನಿಕ ಕಾರ್ಖಾನೆಯಿಂದ ಸ್ಟೈರೀನ್ ಎಂಬುವ ವಿಷಾನಿಲ ಸೋರಿಕೆಯಾಗಿದೆ.
ಇದರ ಪ್ರಭಾವ ಎಷ್ಟಿದೆ ಎಂದರೆ ಸುತ್ತಲಿನ ಐದು ಕಿಲೋಮೀಟರ್ ವರೆಗೂ ಅನಿಲ ಗಾಳಿಯಲ್ಲಿ ಬೆರೆತು ಬಿಟ್ಟಿದೆ, ಈ ಅನಿಲವನ್ನು ಸಿಂಥೆಟಿಕ್ ರಬ್ಬರ್ ಮತ್ತು ಪಾಲಿಸ್ಟೈರೀನ್ ರಾಳಗಳನ್ನು ತಯಾರಿಸಲು ಬಳಕೆ ಮಾಡಲಾಗುತ್ತದೆ, ಈ ಅನಿಲಕ್ಕೆ ಯಾವುದೇ ಬಣ್ಣ ಇರುವುದಿಲ್ಲ ಆದರೆ ಇದು ಸಿಹಿಯಾದ ವಾಸನೆಯಂತೆ ಬರುತ್ತದೆ, ಇದನ್ನು ಸೇವಿಸಿದರೆ ಮಾತ್ರ ಕೆಟ್ಟ ಪರಿಣಾಮಗಳನ್ನು ಲಕ್ಷಣ ದೇಹದಲ್ಲಿ ಉಂಟುಮಾಡುತ್ತದೆ, ಇದರ ಬಗ್ಗೆ ಒಂದು ಸಣ್ಣ ಡೀಟೇಲ್ ಇಲ್ಲಿದೆ ನೋಡಿ.
ಭಾರೀ ಪ್ರಮಾಣದಲ್ಲಿ ಸ್ಟೈರೀನ್ ಅನಿಲವನ್ನು ದೇಹಸೇರುವುದರಿಂದ ಮೊದಲಿಗೆ ಕಣ್ಣು, ಮೂಗು ವಿಪರೀತ ಉರಿಯಲು ಶುರುವಾಗುತ್ತೆ. ನಂತರ ಗಂಟಲು ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಉಸಿರಾಟಕ್ಕೆ ತೀವ್ರವಾದ ತೊಂದರೆಯಾಗುತ್ತದೆ. ಒಂದು ವೇಳೆ ಈ ಅನಿಲವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ತಲೆನೋವು, ಸುಸ್ತು, ನಿಶ್ಯಕ್ತಿ, ಕಿವುಡು, ಖಿನ್ನತೆ ನೋವುಗಳು ಕಾಣಿಸಬಹುದು. ಇದರ ಜೊತೆ ಕಿಡ್ನಿ, ಲಿವರ್ ಸಮಸ್ಯೆಯಾಗುತ್ತದೆ. ಭಾರೀ ಪ್ರಮಾಣದಲ್ಲಿ ದೇಹ ಸೇರಿದರೆ ದೀರ್ಘಕಾಲದವರೆಗೆ ನರಮಂಡಲಕ್ಕೆ ಹಾನಿಯಾಗುವ ಸಾಧ್ಯತೆಯಿದೆ.