ಇದು ಕೊರೊನ ಸಮಯ ಎಲ್ಲೆಡೆ ಎಲ್ಲರು ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಆದರೆ ಮದ್ಯದ ಅಂಗಡಿಗಳ ಮುಂದೆ ಎದೆಕೊ ಎಡವಟ್ಟು ಆಗುತ್ತಿದೆ ಅದೇ ಕಾರಣಕ್ಕೆ ಲಾಕ್ ಡೌನ್ ಸಮಯ ಇದು ಇಂತಹ ಸಮಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಎಕ್ರಿ ಕೊಟ್ರಿ ಅಂತ ದೇಶದ ಕೆಲವು ರಾಜ್ಯಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ್ದವು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್.ಗವಾಯಿ ಅವರ ನೇತೃತ್ವದ ನ್ಯಾಯ ಪೀಠವು ಪ್ರಕರಣವನ್ನು ಆಲಿಸಿದೆ.
ನಂತರ ಯಾವುದೇ ಕಾರಣಕ್ಕೂ ಮದ್ಯ ಮಾರಾಟ ನಿಲ್ಲಿಸಲು ಆದೇಶ ಕೊಡಲ್ಲ ಆದರೆ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕಿದೆ ಆದ ಕಾರಣ ರಾಜ್ಯ ಸರ್ಕಾರಗಳು ಸ್ವಲ್ಪ ಮುತುವರ್ಜಿ ವಹಿಸಿ ಮದ್ಯವನ್ನು ಹೋಂ ಡೆಲಿವರಿ ಮಾಡಬುದು ಎಂದಿದೆ.
ಯಾವುದೇ ಕಾರಣಕ್ಕೂ ಮದ್ಯ ಮಾರಾಟದ ನಿಲ್ಲಿಸಲು ಸಾಧ್ಯವಿಲ್ಲ ಹಾಗು ಮದ್ಯದಂಗಡಿಯ ಮುಂದೆ ಜನಸಂದಣಿಯನ್ನು ಕಡಿಮೆ ಮಾಡಲು ಹಾಗು ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕಿರುವುದರಿಂದ ಆನ್ಲೈನ್ ನಲ್ಲಿ ಮನೆಗಳಿಗೆ ನೇರವಾಗಿ ಡೆಲಿವರಿ ಮಾಡುವ ಬಗ್ಗೆ ಈಗಾಗಲೇ ಚಿಂತನೆ ಕೂಡ ನೆಡೆಸಿದ್ದು ಇಷ್ಟು ದಿನ ದಿನಸಿ ಪದಾರ್ಥಗಳನ್ನೂ ಡೆಲಿವರಿ ಮಾಡುತ್ತಿದ್ದ ಝೋಮೋಟೋ (ಮೊದಲು ಆಹಾರ ಪದಾರ್ಥ ಡೆಲಿವರಿ ಮಾಡುತ್ತಿತ್ತು ನಂತರ ಲಾಕ್ ಡೌನ್ ನಿಂದಾಗಿ ದಿನಸಿ ಪಾದಾರ್ಥ ಡೆಲಿವರಿ ಮಾಡುತ್ತಿದೆ) ಇದೀಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮದ್ಯ ಮಾರಾಟ ಮಾಡಲು ನಿರ್ದರಿಸಿದೆಯಂತೆ.
ಸುಪ್ರೀಂ ಕೋರ್ಟಿನ ಈ ಹೊಸ ಯೋಚನೆ ಮತ್ತು ಸಲಹೆ ನಿಜವಾಗಿಯೂ ಉಪಯೋಗಕ್ಕೆ ಬರುತ್ತಾ ನಿಮ್ಮ ಅನಿಸಿಕೆ ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.