ಜ್ವರವನ್ನು ನಿರ್ಲಕ್ಷ್ಯ ಮಾಡಬಾರದು, ಸಾಮಾನ್ಯ ಜ್ವರ ದಿಂದ ಪ್ರಾರಂಭವಾಗಿ ನಾವು ಸುಮ್ಮನಿದ್ದರೆ ಬೇರೆ ಬೇರೆ ರೀತಿಯ ಜ್ವರಗಳಿಗೆ ತಿರುಗುವ ಅವಕಾಶವುಂಟು, ಜ್ವರ ಬಂದ ಕೂಡಲೇ ನಾವು ಅನುಸರಿಸಬೇಕಾದ ಕೆಲವು ಸೂಚನೆಗಳಿವೆ.
ಪುಟ್ಟ ಮಕ್ಕಳಿಗೆ ಜ್ವರ ಬಂದರೆ ತುಳಸಿ ರಸಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸುವಂತೆ ಮಾಡಿದರೆ ಜ್ವರ ದೂರವಾಗುವುದು, ಹಾಗೆಯೇ ಕೆಮ್ಮಿಗೂ ಇದು ಒಳ್ಳೆಯ ಔಷಧಿ.
ಜ್ವರ ಬಂದಾಗ ಹಣೆಯ ಮೇಲೆ ತಣ್ಣೀರು ಬಟ್ಟೆ ಹಾಕಬೇಕು, ಜ್ವರ ಬಂದಾಗ ರಗ್ಗು ಹೊದ್ದು ಮಲಗಬಾರದು, ಶರೀರಕ್ಕೆ ತಂಪಾದ ಗಾಳಿ ತಗುಲಿದರೆ ಒಳ್ಳೆಯದು, ಕಾರ, ಎಣ್ಣೆ ಪದಾರ್ಥಗಳನ್ನು ಸೇವಿಸಬಾರದು, ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು.

ದಂಟಿನ ಸೊಪ್ಪಿನ ರಸವನ್ನು ಸೇವಿಸುವುದರಿಂದ, ಜ್ವರದ ತಾಪ ಕಡಿಮೆಯಾಗುವುದು, ಮೆಣಸಿನ ಕಷಾಯ ಮಾಡಿ ಕುಡಿಯುವುದರಿಂದ ಜ್ವರವನ್ನು ಹತೋಟಿಗೆ ತರಬಹುದು.
ಕೊತ್ತಂಬರಿಸೊಪ್ಪಿನ ಕಷಾಯವನ್ನು ಮಾಡಿ ಕುಡಿಯುವುದರಿಂದ ಜ್ವರ ದೂರವಾಗುತ್ತದೆ, ತಾಜಾ ಹಣ್ಣಿನ ರಸ ಕುಡಿಯಬೇಕು, ಗಟ್ಟಿಯಾದ ಪದಾರ್ಥಗಳನ್ನು ಸೇವಿಸಬಾರದು, ಕಾರಣ ಹೀಗೆ ಮಾಡಿದರೆ ತಿಂದ ಆಹಾರ ಜೀರ್ಣವಾಗುವುದಿಲ್ಲ.
ಶರೀರದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು, ಜ್ವರ ಬಂದ ಸಮಯದಲ್ಲಿ ಅತಿಯಾದ ಬಾಯಾರಿಕೆ ಉಂಟಾದರೆ ಕಾಯಿಸಿ ಆರಿಸಿದ ನೀರಿಗೆ ಒಂದೆರಡು ಚಮಚ ನಿಂಬೆರಸ ಮತ್ತು ಸ್ವಲ್ಪ ಸಕ್ಕರೆ ಬೆರೆಸಿ ಕುಡಿಯಬೇಕು, ಆಗ ಜ್ವರದ ತಾಪ ಕಡಿಮೆಯಾಗುವುದು.
ಗಮನಿಸಿ : ಜ್ವರ ಸಾಮಾನ್ಯ ಕಾಯಿಲೆ ಎಂದು ನಿರ್ಲಕ್ಷ ಮಾಡಬಾರದು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು, ಸರಳ ಆಹಾರ ಸೇವನೆ ತುಂಬಾ ಒಳ್ಳೆಯದು.