ಹಿಂದೂ ಧರ್ಮದಲ್ಲಿ ತುಳಸಿಗೆ ದೇವರಸ್ಥಾನ ನೀಡಲಾಗಿದೆ, ವಿಷ್ಣುವಿನ ಪತ್ನಿ ತುಳಸಿಯೆಂದು ಪೂಜೆ ಮಾಡಲಾಗುತ್ತದೆ, ಮನೆಯಲ್ಲಿ ತುಳಸಿಗಿಡ ನೆಡುವುದು ಮಂಗಳಕರ ಎಂದು ಪರಿಗಣಿಸಲಾಗಿದೆ. ಇದರಿಂದ ಮನೆಯ ವಾತಾವರಣ ಪವಿತ್ರವಾಗಿರುತ್ತದೆ.
ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕುವುದ್ರಿಂದ ದೇವಿಕೃಪೆಗೆ ಪಾತ್ರರಾಗಬಹುದು, ಮನೆಯಲ್ಲಿ ತುಳಸಿ ಗಿಡ ನೆಡುವುದು ಸುಲಭ, ಆದ್ರೆ ಅದನ್ನು ಕಾಪಾಡಿಕೊಳ್ಳುವುದು ಕಷ್ಟ. ತುಳಸಿಗಿಡ ಬಹುಬೇಗ ಒಣಗಲು ಶುರುವಾಗುತ್ತದೆ. ಕುಟುಂಬದಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ, ತುಳಸಿ ಗಿಡ ನೆಡುವ ಮೊದಲು ಅದ್ರ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.
ತುಳಸಿಯನ್ನು ಸೂರ್ಯಗ್ರಹಣ, ಚಂದ್ರ ಗ್ರಹಣ ಹಾಗೂ ಏಕಾದಶಿ ದಿನ ಮುಟ್ಟಬಾರದು. ಗ್ರಹಣ ಮುಗಿದ ನಂತ್ರವೂ ತುಳಸಿ ಎಲೆಯನ್ನು ಕೀಳಬಾರದು. ಇದು ತುಳಸಿಗಿಡ ಒಣಗಲು ಕಾರಣವಾಗುತ್ತದೆ.
ಪ್ರತಿ ದಿನ ಸಂಜೆ ತುಳಸಿ ಗಿಡದ ಕೆಳಗೆ ತುಪ್ಪದ ದೀಪ ಹಚ್ಚಬೇಕು, ಪ್ರತಿದಿನ ತಪ್ಪದೆ ಆರತಿ ಮಾಡಬೇಕು.
ತುಳಸಿ ಗಿಡ ಒಣಗಲು ಶುರುವಾದ್ರೆ ಅದನ್ನು ಕಸಕ್ಕೆ ಹಾಕಬೇಡಿ. ಪವಿತ್ರ ನದಿಗೆ ತುಳಸಿಗಿಡವನ್ನು ಹಾಕಿ. ಜೊತೆಗೆ ತುಳಸಿ ಮಾತೆಯ ಕ್ಷಮೆ ಕೇಳಿ.
ಮನೆಯಲ್ಲಿ ತುಳಸಿ ಗಿಡ ಒಣಗುವುದು ಶುಭಕರವಲ್ಲ. ಮನೆಯಲ್ಲಿ ದೊಡ್ಡದುರ್ಘಟನೆ ನಡೆಯುವ ಸಂಕೇತವನ್ನು ಇದು ನೀಡುತ್ತದೆ. ತುಳಸಿ ಗಿಡ ಒಣಗುತ್ತಿದ್ದರೆ ತಕ್ಷಣ ಬೇರೆ ಗಿಡವನ್ನು ತಂದು ನೆಡಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.