ತಿರುಪತಿ ತಿಮ್ಮಪ್ಪನ ನಿಗೂಢ ರಹಸ್ಯಗಳು..!! ತಪ್ಪದೆ ಓದಿ.

0
2736

ಓಂ ಶ್ರೀ ವೆಂಕಟೇಶ್ವರಾಯ ನಮಃ ಗೋವಿಂದಾಯ ನಮಃ ಇದು ಎಲ್ಲ ಭಕ್ತರ ಎದೆಯೊಳಗಿಂದ ಉಕ್ಕಿ ಹರಿಯುವ ಪದ. ಕೇಳಿದ್ದನ್ನು ಕರುಣಿಸೋ ಕರುನಾಮಯಿಯ ದರ್ಶನಕ್ಕೆ ದೇಶ ವಿದೆಶಗಲಿಂದಲೂ ಸಾವಿರಾರು ಭಕ್ತರು ಬರುತ್ತಾರೆ.

ಹೌದು ಇದೆಲ್ಲ ಯಾಕೆ ಹೇಳ್ತಿವಿ ಅಂತಿರಾ ತಿರುಪತಿ ತಿರುಮಲ ವೆಂಕಟೇಶ್ವರನ ನಿಗೂಢವಾದ ರಹಸ್ಯ ಹೇಳ್ತಿವಿ ನೋಡಿ.. ದೇವಸ್ಥಾನದ ಪ್ರಾರಂಭ ಮಹಾದ್ವಾರದ ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಯ ತಲೆಯ ಮೇಲೆ ಅನಂತಾಳ್ವಾರ್ ಹೊಡೆದ ಗಾಯ ಇರುತ್ತದೆ, ಚಿಕ್ಕ ಮಗುವಿನ ರೂಪದಲ್ಲಿದ್ದ ಸ್ವಾಮಿಯನ್ನು ಆ ರಾಡಿನಲ್ಲಿ ಹೊಡೆದಿದ್ದರಿಂದ ಸ್ವಾಮಿಯ ಗಡ್ಡದ ಮೇಲೆ ಗಾಯವಾಗಿ ರಕ್ತ ಬರುತ್ತದೆ ಆ ಕಾರಣದಿಂದ ಸ್ವಾಮಿ ಗಡ್ಡದ ಮೇಲೆ ಗಂಧವನ್ನು ಹಚ್ಚುವ ಸಂಪ್ರದಾಯ ಬಂದಿದೆ.

ಶ್ರೀ ವೆಂಕಟೇಶ್ವರ ಸ್ವಾಮಿ ವಿಗ್ರಹದಲ್ಲಿ ತಲೆ ಕೂದಲು ಜುಟ್ಟು ಇರುತ್ತದೆ ಈ ಕೂದಲು ಯಾವಾಗಲು ಚಿಕ್ಕೆ ಹಿಡಿಯುವುದಿಲ್ಲ ಅಂತಾರೆ, ತಿರುಮಲ ದೇವಸ್ಥಾನದಿಂದ 23 ಕಿ.ಮೀ ದೂರದಲ್ಲಿ ಒಂದು ಗ್ರಾಮ ಇದೆ ಅಲ್ಲಿ ಅಲ್ಲಿನ ಗ್ರಾಮದವರಿಗೆ ಬಿಟ್ಟು ಬೇರೆಯವರಿಗೆ ಒಳಗಡೆ ಪ್ರವೇಶವಿಲ್ಲ, ಅಲ್ಲಿನ ಗ್ರಾಮಸ್ಥರಿಗೆ ತುಂಬಾ ಪದ್ದತಿಗಳನ್ನು ಅನುಸರಿಸಿಕೊಂಡು ಬಂದಿರುತ್ತಾರೆ, ಅಲ್ಲೇ ಇರುವ ತೋಟದ ಹೂವುಗಳನ್ನೂ ಪೂಜೆಗೆ ತರುತ್ತಾರೆ, ಗರ್ಭಗುಡಿಯಲ್ಲಿ ಇರುವ ಪ್ರತಿಯೊಂದು ಪೂಜಾ ಸಾಮಗ್ರಿಗಳನ್ನು ಆ ಗ್ರಾಮದಿಂದಲೇ ತರುತ್ತಾರೆ ಎನ್ನುತ್ತಾರೆ.

ಸ್ವಾಮಿಯ ಗರ್ಭಗುಡಿ ಮದ್ಯ ಭಾಗದಲ್ಲಿ ಇರುವಂತೆ ಕಾಣುತ್ತದೆ ಆದರೆ ಅದು ಗರ್ಭಗುಡಿಯ ಬಲಗಡೆ ಕಾರ್ನರ್ ನಲ್ಲಿ ಇರುತ್ತದೆ. ಹೊರಗಿಂದ ನೋಡಿದರೆ ತಿಳಿಯುತ್ತದೆ.

ಸ್ವಾಮಿಯನ್ನು ಪ್ರತಿದಿನ ಕೆಳಗೆ ಪಂಚೆ, ಮೇಲೆ ಸಿರೆಯಿಂದ ಅಲಂಕರಿಸುತ್ತಾರೆ, ಸುಮಾರು 50 ಸಾವಿರ ಖರೀದಿ ಮಾಡುವ ಸೇವೆ ಇರುತ್ತದೆ, ಈ ಸೇವೆಯಲ್ಲಿ ಪಾಲ್ಗೊಂಡ ದಂಪತಿಗಳಿಗೆ ಸೀರೆಯನ್ನು ಸ್ತ್ರೀಯರಿಗೆ, ಪಂಚೆಯನ್ನು ಪುರುಷರಿಗೆ ಕೊಡುತ್ತಾರೆ, ಈ ಸೇವೆಗೆ ತುಂಬಾ ಕಡಿಮೆ ಟಿಕೆಟ್ ಮಾಡಿರುತ್ತಾರೆ.

ಗರ್ಭಗುಡಿಯ ಸ್ವಾಮಿಯಿಂದ ತೆಗೆದ ಹೂಗಳನ್ನೂ ಎಂದಿಗೂ ಆಚೆಕಡೆ ಎಸೆಯೋದಿಲ್ಲ, ಸ್ವಾಮಿಯ ಹಿಂದೆ ಇದ್ದ ಜಲಪಾತದಲ್ಲಿ ಅರ್ಚಕರು ಹಿಂದೆ ನೋಡದೆ ಹೂಗಳನ್ನೂ ಜಲಪಾತಕ್ಕೆ ಎಸೆಯುತ್ತಾರೆ.

ಸ್ವಾಮಿಯವರ ಎದೆಯ ಮೇಲೆ ಶ್ರೀ ಲಕ್ಷ್ಮಿದೇವಿ ಇರುತ್ತಾಳೆ, ಪ್ರತೀ ಗುರುವಾರ ನಿಜರೂಪ ದರ್ಶನದ ವೇಳೆಯಲ್ಲಿ ಸ್ವಾಮಿಯವರಿಗೆ ಚಂದನದಿಂದ ಅಲಂಕರಿಸುತ್ತಾರೆ, ಅದು ತೆಗೆದುಹಾಕುವಾಗ ಲಕ್ಷ್ಮಿದೇವಿಯ ಅಚ್ಚು ಹಾಗೆ ಬರುತ್ತದೆ, ಅದನ್ನು ಮಾರುತ್ತಾರೆ.

ಸತ್ತ ಮೇಲೆ ಹಿಂದೆ ನೋಡದೆ ಹೇಗೆ ಸುಡುತ್ತಾರೋ, ಹಾಗೆ ಸ್ವಾಮಿಯವರಿಂದ ತೆಗೆದುಹಾಕಿದ ಹೂಗಳನ್ನು ಮತ್ತು ಎಲ್ಲಾ ಪದಾರ್ಥಗಳನ್ನು ಅದೇ ತರಃ ಹಿಂದೆ ತಿರುಗಿ ನೋಡದೆ ಸ್ವಾಮಿಯವರ ಹಿಂದೆ ಎಸೆಯುತ್ತಾರೆ, ಆ ದಿನವೆಲ್ಲಾ ಸ್ವಾಮಿಯವರ ಹಿಂದೆಗಡೆ ನೋಡುವುದಿಲ್ಲ ಎನ್ನುತ್ತಾರೆ, ಆ ಹೂಗಳು ಮತ್ತು ಪದಾರ್ಥಗಳು ಎಲ್ಲಾ ಕೂಡ ತಿರುಪತಿಯಿಂದ 20 ಕಿ.ಮಿ ದೂರದಲ್ಲಿರುವ ವರ್ಚೆಡು ( ಕಾಳಹಸ್ತಿಗೆ ಹೋಗುವ ದಾರಿಯಲ್ಲಿ ) ಹತ್ತಿರ ತೇಲುತ್ತದೆ.

ಸ್ವಾಮಿಯವರ ಮುಂದೆ ಬೆಳಗುವ ದೀಪಗಳು ಅವು ಎಷ್ಟು ವರ್ಷಗಳಿಂದ ಬೆಳಗುತ್ತಿವೆಯೋ ಕೂಡ ಯಾರಿಗೂ ಗೊತ್ತಿಲ್ಲ.

1800ರಲ್ಲಿ ದೇವಸ್ಥಾನವನ್ನು ಹನ್ನೆರಡು ವರ್ಷಗಳ ಕಾಲ ಮುಚ್ಚಲಾಗಿತ್ತಂತೆ, ಯಾರೋ ಒಂದು ದಿನ 12 ಮಂದಿಯನ್ನು ದೇವಸ್ಥಾನದ ಹತ್ತಿರ ತಪ್ಪು ಮಾಡಿದರೆಂದು ಬುದ್ದಿಹೇಳಿ ಹೊಡೆದು ಗೋಡೆಗೆ ನೆತಾಡಿಸಿದರಂತೆ, ಆ ಸಂಧರ್ಭದಲ್ಲಿ ವಿಮಾನದಲ್ಲಿ ವೆಂಕಟೇಶ್ವರ ಸ್ವಾಮಿ ನೆಲೆಸಿದ್ದಾರೆಂದು ಹೇಳುತ್ತಾರೆ.

ಬೆಟ್ಟವನ್ನು ದೂರದಿಂದ ನೋಡಿದಾಗ ಮಲಗಿದ ವ್ಯಕ್ತಿಯ ತಲೆಯ ಚಿತ್ರಣ ಕಾಣಸಿಗುತ್ತದೆ, ಇಲ್ಲಿ ಯಾವುದೇ ಜಾತಿ ಧರ್ಮದ ಬೇದವಿಲ್ಲ ಇಲ್ಲಿ ಎಲ್ಲಾ ಜಾತಿಯವರು ಬರುತ್ತಾರೆ, ತಿಮ್ಮಪ್ಪನ ಪಾದಕ್ಕೆ ಬಿದ್ದು ಆಶೀರ್ವಾದ ಪಡಿದುಕೊಳ್ಳುತ್ತಾರೆ.

LEAVE A REPLY

Please enter your comment!
Please enter your name here