ತನ್ನ ಹೆಂಡತಿಯಿಂದಲೇ ಶಾಪ ಪಡೆದ ಶನಿದೇವ! ಶ್ರೀ ಶನಿ ಶಾಪದ ಕಥೆಯನ್ನು ಒಮ್ಮೆ ಓದಿ ಶನಿಯ ವಕ್ರದೃಷ್ಟಿಯಿಂದ ಪಾರಾಗಿ.

0
2667

ಶನಿಯ ವಕ್ರದೃಷ್ಟಿ ಅಂದರೆ ಮಾನವಕುಲ ಅಷ್ಟೇ ಅಲ್ಲದೆ ದೈವ ಕುಲವು ಕೂಡ ಹೆದರುತ್ತದೆ, ಹರಿಹರ ಬ್ರಹ್ಮಾದಿಗಳನ್ನು ನಡುಗಿಸಿದ್ದ ಶಕ್ತಿ ಶನಿಯ ವಕ್ರದೃಷ್ಟಿ ಯಲ್ಲಿದೆ, ಹಾಗಾದರೆ ಪುರಾಣಗಳು ಹೇಳುವ ಪ್ರಕಾರ ಶನಿಗೆ ಈ ಶಕ್ತಿ ಹೇಗೆ ಬಂತು, ಇದು ಶಕ್ತಿಯೋ ಅಥವಾ ಶಾಪವೋ ಎನ್ನುವ ಉಲ್ಲೇಖ ಇರುವ ಕಥೆಯನ್ನು ಇಂದು ನಾವು ನಿಮಗೆ ಬಿಡಿಸಿ ಹೇಳುತ್ತೇವೆ, ಸೂರ್ಯ ಪುತ್ರನಾದ ಶನಿಯು ಚಿಕ್ಕ ವಯಸ್ಸಿನಿಂದಲೂ ಬಹಳ ಕಷ್ಟವನ್ನು ಪಟ್ಟಿರುತ್ತಾನೆ, ದೊಡ್ಡವನಾದ ನಂತರವೂ ಶನಿಗೆ ಕಷ್ಟಗಳು ತಪ್ಪಿದ್ದಲ್ಲ ಏನೇ ಆದರೂ ಶನಿ ತನ್ನ ಸತ್ಯನಿಷ್ಠೆಯನ್ನು ಬಿಡಲಿಲ್ಲ, ಅದರಲ್ಲೂ ಶನಿಮಹಾತ್ಮ ಚಿಕ್ಕ ವಯಸ್ಸಿನಿಂದಲೂ ಶ್ರೀಕೃಷ್ಣನ ಪರಮಭಕ್ತ ಆಗಾಗ ಶ್ರೀಕೃಷ್ಣ ತಪಸ್ಸು ಮಾಡಲು ಕೂರುತ್ತಿದ್ದ ಉಲ್ಲೇಖ ಬಹಳಷ್ಟಿದೆ.

ಇನ್ನು ಶನಿಮಹಾತ್ಮ ನಿಗೆ ಒಟ್ಟು ಎಂಟು ಜನ ಹೆಂಡತಿಯರು ದ್ವಾಜಿನಿ, ಧಾಮಿನಿ, ಕಂಕಲಿ, ಕಲಹಪ್ರಿಯೆ, ಕಂಟಕಿ, ತುರಂಗಿ, ಮಹಿಷಿ ಮತ್ತು ಅಜ. ಇನ್ನು ಸಿನಿ ಮಹಾತ್ಮನಿಗೆ ಲೋಕದೃಷ್ಟಿ ಬರಲು ಶ್ರೀ ಮಹಾತ್ಮನ ಹೆಂಡತಿಯಾದ ದಾಮಿನಿ ಯೇ ಕಾರಣ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ, ಆ ಕತೆಯ ಭಾಗವನ್ನು ಕೆಳಗೆ ಹೇಳಲಾಗಿದೆ, ಒಮ್ಮೆ ಸಂಪೂರ್ಣವಾಗಿ ಓದಿ ಮರೆಯದೆ ಈ ಕತೆಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕಥೆ : ಶನಿದೇವನ ಹೆಂಡತಿಯಾದ ದಾಮಿನಿಗೆ ಹುಟ್ಟಿನಿಂದಲೇ ಕೆಲವು ದೈವಿಕ ಶಕ್ತಿಗಳು ಬಂದಿರುತ್ತವೆ, ಹಾಗೂ ದಾಮಿನಿ ಬಹಳಷ್ಟು ಸುಂದರವಾಗಿದ್ದಳು, ಒಂದು ದಿನ ಆಕೆಯ ತಲೆಗೆ ತಕ್ಷಣ ಒಂದು ಆಲೋಚನೆ ಬರುತ್ತದೆ, ಅದೇನೆಂದರೆ ತನಗೆ ಸುಂದರವಾದ ಗಂಡು ಮಗು ಒಂದು ಬೇಕು ಎಂದು, ಈ ತನ್ನ ಆಲೋಚನೆಯನ್ನು ತನ್ನ ಗಂಡನೊಂದಿಗೆ ಹಂಚಿಕೊಳ್ಳಲು ಶನಿಯ ಬಳಿ ಓಡಿ ಬರುತ್ತಾಳೆ, ಆದರೆ ಶನಿದೇವನು ಶ್ರೀ ಕೃಷ್ಣನ ಧ್ಯಾನದಲ್ಲಿ ಕುಳಿತಿರುತ್ತಾನೆ, ಅದರಲ್ಲೂ ಯಾರು ತನ್ನನ್ನು ಎಚ್ಚರ ಕುಡಿಸಬಾರದು ಎಂಬ ಇಚ್ಚೆಯಿಂದಲೇ ಧ್ಯಾನಕ್ಕೆ ಕುಳಿತಿರುವಾಗ ಪತ್ನಿ ದಾಮಿನಿ ಪತಿಯನ್ನು ಎಷ್ಟೇ ಎಚ್ಚರ ಪಡಿಸಲು ಪ್ರಯತ್ನಪಟ್ಟರು ಆಗುವುದಿಲ್ಲ, ತನ್ನ ಮನದಾಸೆಯನ್ನು ಗಂಡನೊಂದಿಗೆ ಹಂಚಿಕೊಳ್ಳಲು ಬಂದಾಗ ತನ್ನ ಗಂಡ ಅದಕ್ಕೆ ಪ್ರತಿಕ್ರಿಯಿಸಿದ ಕಾರಣ ಹುಟ್ಟುತ್ತಲೇ ದೈವ ಶಕ್ತಿಯನ್ನು ಪಡೆದಿದ್ದ ದಾಮಿನಿ ತನ್ನ ಪತಿಗೆ ನೀನು ಯಾರನ್ನು ವಕ್ರದೃಷ್ಟಿಯಿಂದ ನೋಡುತ್ತೇಯೋ ಅವರು ಸುಟ್ಟು ಹೋಗಲಿ ಎಂದು ಶಪಿಸಿ ಬಿಡುತ್ತಾಳೆ.

ಅಂದಿನಿಂದ ಶನಿಯ ವಕ್ರದೃಷ್ಟಿ ಎಂದರೆ ಎಲ್ಲರೂ ಭಯಪಡುತ್ತಾರೆ ಹಾಗೂ ಆತನ ವಕ್ರದೃಷ್ಟಿಯಿಂದ ಪಾರಾಗಲು ಅನೇಕ ಉಪಾಯಗಳನ್ನು ಮಾಡುತ್ತಾರೆ, ಶನಿ ಪುರಾಣದ ವಿಭಾಗ ಕಥೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮುಕಾಂತರ ನೀವು ಸಹ ಶನಿ ವಕ್ತ್ರದೃಷ್ಟಿ ಇಂದ ಪಾರಾಗಿ ಮತ್ತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here