ಮನೆಮುಂದೆ ನೆಡ ಬೇಕಾದ ತುಳಸಿ ಯಾವುದು ಶ್ರೀ ಕೃಷ್ಣ ತುಳಸಿ ಅಥವಾ ಶ್ರೀ ತುಳಸಿ ?

0
1999

ನೀವು ವಾಸಿಸುವ ನಿಮ್ಮ ನೆಚ್ಚಿನ ಮನೆಯಾಗಲಿ ಅಥವಾ ಆರ್ಥಿಕವಾಗಿ ಪ್ರಗತಿ ಯಾಗಲು ದುಡಿಯುವ ಜಾಗವಾಗಲಿ ವಾಸ್ತು ಎಂಬುದು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ, ವಾಸ್ತುದೋಷವೇನಾದರೂ ಇದ್ದರೆ ನಿಮ್ಮ ಏಳಿಗೆ ಕುಂಟಿತವಾಗುತ್ತದೆ ಎಂಬುವ ಆತಂಕ ದಿಂದಲೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಾಸ್ತು ದೋಷಗಳ ಬಗ್ಗೆ ಎಲ್ಲರೂ ತಲೆಕೆಡಿಸಿಕೊಳ್ಳಲು ಶುರುಮಾಡಿದ್ದಾರೆ, ಹಿಂದೆಲ್ಲಾ ಮನೆ ಕಟ್ಟುವಾಗಲೇ ವಾಸ್ತು ಶಾಸ್ತ್ರವು ಬಳಕೆಯಾಗುತ್ತಿತ್ತು, ಅದೇನೇ ಇರಲಿ ಈಗಿನ ನಿಮ್ಮ ಮನೆಯಲ್ಲಿ ಇರುವ ವಾಸ್ತು ದೋಷಗಳನ್ನು ನೀಗಿಸಲು ಇಂದು ನಾವು ತಿಳಿಸುವ ಒಂದು ಗಿಡವನ್ನು ಬೆಳೆಸಿದರೆ ಸಾಕು.

ತುಳಸಿ ಗಿಡದ ಬಗ್ಗೆ ಸಾಮಾನ್ಯವಾಗಿ ನಾವೆಲ್ಲರೂ ತಿಳಿದುಕೊಂಡಿರುತ್ತೇವೆ, ತುಳಸಿ ಗಿಡದಲ್ಲಿ ಮೂರು ವಿಧಗಳಿವೆ ಮೊದಲನೆಯದು ಶ್ರೀ ಕೃಷ್ಣ ತುಳಸಿ, ಶ್ರೀ ತುಳಸಿ ಮತ್ತು ಕಾಡು ತುಳಸಿ, ಮನೆಯ ಮುಂದೆ ಮೂರು ತುಳಸಿಗಳಲ್ಲಿ ಯಾವ ತುಳಸಿಯು ಶ್ರೇಷ್ಠ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಮೂಡುತ್ತದೆ, ತುಳಸಿ ಗಿಡ ಎಂದರೆ ಸಾಕು ಅದರ ಸ್ಪರ್ಶದಿಂದಲೇ ಪಾಪಗಳು ನಾಶವಾಗುತ್ತವೆ, ಮನೆಯಲ್ಲಿ ವಾಸ್ತುದೋಷವೇ ಏನಾದರೂ ಇದ್ದರೆ ಶಮನವಾಗುತ್ತದೆ.

ವಾಸ್ತು ದೋಷ ನಿವಾರಣೆಗೆ : ನಗರದ ಕೆಲವು ಮನೆಗಳನ್ನು ಬಿಟ್ಟರೆ ಸಾಮಾನ್ಯವಾಗಿ ಎಲ್ಲರ ಮನೆ ಮುಂದೆ ನಾವು ತುಳಸಿ ಗಿಡವನ್ನು ಕಾಣುತ್ತೇವೆ, ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ತುಳಸಿ ಗಿಡದ ದರ್ಶನ ಮಾಡುವುದರಿಂದ ಪಾಪ ನಿವಾರಣೆಯಾಗುತ್ತದೆ ಎಂದು, ಗಿಡದ ಸ್ಪರ್ಶ ಮಾಡುವುದರಿಂದ ಪವಿತ್ರತೆ ದೊರೆಯುತ್ತದೆ ಎಂದು, ಕೈಮುಗಿದು ಬೇಡಿಕೊಳ್ಳುವುದರಿಂದ ರೋಗ ಪರಿಹಾರವಾಗುತ್ತದೆ ಎಂದು, ಹಾಗೂ ತುಳಸೀ ತೀರ್ಥ ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಆಯಸ್ಸು ಹೆಚ್ಚುತ್ತದೆ ಎಂದು ನಮ್ಮ ಹಿರಿಯರು ಈ ಗಿಡಗಳನ್ನು ಮನೆಯ ಮುಂದೆ ನೆಡುತ್ತಿದ್ದರು.

ಶ್ರೀಕೃಷ್ಣ ತುಳಸಿಯನ್ನು ಮನೆಯ ಮುಂದೆ ನೆಡುವುದರಿಂದ ಮನೆಗೆ ಶ್ರೀ ಕೃಷ್ಣನ ಸನ್ನಿಧಿ ಲಭ್ಯವಾಗುತ್ತದೆ, ಶ್ರೀ ತುಳಸಿ ಪೂಜೆ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ ತುಂಬಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವುದು ಸನಾತನ ಧರ್ಮದ ಅಭಿಪ್ರಾಯ, ಉಳಿದ ಗಿಡಗಳಿಗೆ ಹೋಲಿಕೆ ಮಾಡಿದರೆ ತುಳಸಿ ಗಿಡವು ಅತಿ ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುವುದರಿಂದ ಮನೆಯಲ್ಲಿನ ದುಷ್ಟಶಕ್ತಿಗಳು ನಿವಾರಣೆಯಾಗುತ್ತದೆ ಇದೇ ಕಾರಣಕ್ಕಾಗಿಯೇ ಮನೆಯ ಮುಖ್ಯದ್ವಾರದಲ್ಲಿ ನಾವು ತುಳಸಿ ಗಿಡವನ್ನು ಬೆಳೆಸುವುದು ಒಳ್ಳೆಯದು.

LEAVE A REPLY

Please enter your comment!
Please enter your name here