ಖಂಡಾಂತರ ಸೂರ್ಯಗ್ರಹಣ ನಾಳೆ 21ನೇ ತಾರೀಕು ನಡೆಯಲಿದ್ದು ಬೆಂಗಳೂರಿನಲ್ಲಿ ಬೆಳಗ್ಗೆ 10 ರಿಂದ 12 ಗಂಟೆಯ ಒಳಗೆ ಗ್ರಹಣ ಪ್ರವೇಶವಾಗಿ ಮಧ್ಯಾಹ್ನ 1.30 ರ ವರೆಗೂ ಬೆಂಗಳೂರಿನ ಜನರಿಗೆ ಗ್ರಹಣ ಗೋಚರವಾಗಲಿದೆ, ಶಾಸ್ತ್ರಗಳಲ್ಲಿ ಹೇಳುವಹಾಗೆ ಸೂರ್ಯಗ್ರಹಣ ಚಂದ್ರಗ್ರಹಣ ಗಳಲ್ಲಿ ಹೋಲಿಕೆ ಮಾಡಿದರೆ ಸೂರ್ಯಗ್ರಹಣ ಬಹಳ ಶ್ರೇಷ್ಠವಾದುದು.
ಅದರಲ್ಲೂ ಜೂನ್ 21ರಂದು ನಡೆಯಲಿರುವ ಈ ಸೂರ್ಯಗ್ರಹಣ ಇನ್ನೂ ಶ್ರೇಷ್ಠವಾಗಿದೆ, ಇದಕ್ಕೆ ಶಾಸ್ತ್ರಗಳಲ್ಲಿ ಚೂಡಾಮಣಿ ಸೂರ್ಯಗ್ರಹಣ ಎಂದು ಉಲ್ಲೇಖ ಮಾಡುತ್ತಾರೆ, ಚೂಡಾಮಣಿ ಗ್ರಹಣ ಎಂದರೆ ಸೂರ್ಯಗ್ರಹಣ ವೇನಾದರೂ ಭಾನುವಾರ ಬಂದರೆ ಹಾಗೂ ಚಂದ್ರಗ್ರಹಣ ವೇನಾದರೂ ಸೋಮವಾರ ಬಂದರೆ ಅದನ್ನು ಈ ರೀತಿಯ ಉಲ್ಲೇಖ ಮಾಡಿ ಕರೆಯುತ್ತಾರೆ.
ಅಷ್ಟೇ ಅಲ್ಲ ದಾನ ಮಾಡುವುದಕ್ಕೆ ಇದು ಶ್ರೇಷ್ಠವಾದ ಸಮಯ ಕಾರಣ ಈ ಸಮಯದಲ್ಲಿ ದಾನ ಮಾಡಿದರೆ ಅದು ಅನಂತ ಫಲ ನೀಡುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ, ಇನ್ನು ನಾಳೆ ಭಾನುವಾರ ಬರುವ ಈ ಗ್ರಹಣ ಮಿಥುನ ರಾಶಿ ಮೃಗಶಿರ ನಕ್ಷತ್ರದಲ್ಲಿ ಗ್ರಹಣ ವಾಗಲಿದೆ, ಆದ ಕಾರಣ ಮಿಥುನ ರಾಶಿಯ ಮೃಗಶಿರ ನಕ್ಷತ್ರಗಳಲ್ಲಿ ಹುಟ್ಟಿದವರಿಗೆ ಅನಿಷ್ಟ ಫಲ ದೊರೆಯುತ್ತದೆ, ಅಷ್ಟೇ ಅಲ್ಲದೆ ಮೃಗಶಿರ ನಕ್ಷತ್ರ ಜನ್ಮ ಧಾರೆ ಯಾವ ನಕ್ಷತ್ರಗಳಿಗೆ ಬರುತ್ತದೆಯೋ ಆ ನಕ್ಷತ್ರಗಳಿಗೂ ಅಶುಭವನ್ನು ತರುತ್ತದೆ, ಹಾಗಾದರೆ ಯಾವೆಲ್ಲ ರಾಶಿಗೆ ಶುಭಫಲ ಮತ್ತು ಯಾವ ರಾಶಿಗೆ ಅಶುಭ ಫಲ ತಪ್ಪದೆ ನೋಡಿ.
ಶುಭ ಫಲ : ಮೇಷ ರಾಶಿ, ಮಕರ ರಾಶಿ, ಸಿಂಹ ರಾಶಿ, ಕನ್ಯಾ ರಾಶಿ ಈ ರಾಶಿಗಳಿಗೆ ಅತ್ಯಂತ ಶುಭಪ್ರದವಾಗಿದೆ.
ಮಿಶ್ರಫಲ : ವೃಷಭ ರಾಶಿ, ಧನು ರಾಶಿ, ತುಲಾ ರಾಶಿ ಹಾಗೂ ಕುಂಭ ರಾಶಿಯವರಿಗೆ ಮಧ್ಯಮ ಫಲ ದೊರೆಯಲಿದೆ.
ಅಶುಭಫಲ : ಕರ್ಕ ರಾಶಿ, ಮಿಥುನ ರಾಶಿ, ವೃಶ್ಚಿಕ ಹಾಗೂ ಮೀನ ರಾಶಿ ಗಳಿಗೆ ಅಶುಭಫಲ ವಾಗಲಿದೆ.
ಗ್ರಹಣ ದೋಷ ನಿವಾರಿಸಿಕೊಳ್ಳುವುದು ಹೇಗೆ ? ಹೋಮ, ದಾನ, ದೇವರ ಜಪ, ಗಿಡಮೂಲಿಕೆಗಳನ್ನು ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದು ಹೀಗೆ ಮಾಡುವುದರಿಂದ ಗ್ರಹಣ ದೋಷ ಪರಿಹಾರವಾಗುತ್ತದೆ, ನಿಮ್ಮ ರಾಶಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕೆಳಗೆ ನೀಡಿರುವ ಗುರುಜಿ ಅವರ ನಂಬರಿಗೆ ನೇರವಾಗಿ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ.