ಉಬ್ಬಸ ನಿವಾರಣೆಗೆ : ಅರಿಶಿಣ, ಉದ್ದಿನಕಾಳು ಮತ್ತು ಹುರಿಗಡಲೆ ಈ ಮೂರನ್ನು ಸಮತೂಕ ಬೆರೆಸಿ ನುಣ್ಣಗೆ ಪುಡಿ ಮಾಡಿಕೊಂಡು ಬೆಂಕಿಯ ಮೇಲೆ ಹಾಕಿ ಒಗೆ ತೆಗೆದುಕೊಳ್ಳುವುದರಿಂದ ಉಬ್ಬಸ ರೋಗ ನಿವಾರಣೆಯಾಗುತ್ತದೆ.
ಈರುಳ್ಳಿ ರಸ 250 ವಿುಲಿ, ಹಸಿಯ ಬೆಳ್ಳುಳ್ಳಿಯ ರಸ 250 ವಿುಲಿ, ಲೋಳೆಸರದ ರಸ 250 ವಿುಲಿ, ಜೇನು 250 ವಿುಲಿ ಇವುಗಳನ್ನೆಲ್ಲ ಒಂದು ಜಾಡಿಯಲ್ಲಿ ಹಾಕಿ ಒಂದು ವಾರದ ನಂತರ ನಿತ್ಯ ಬೆಳಗ್ಗೆ ಮೂರು ಗ್ರಾಮ ಅಂತ ಒಂದು ತಿಂಗಳು ಸೇವಿಸಿದರೆ ಉಬ್ಬಸ ನಿವಾರಣೆಯಾಗುತ್ತದೆ.
ಹೊತ್ತಿಗೆ 36 ಗ್ರಾಂ ಹಾಗಲಸಿಪ್ಪೆಯ ಸೊಪ್ಪಿನರಸ ಅದರ ಸಮಪಾಲು ಹೆಮ್ಮೆಯ ಮೊಸರು ಸೇರಿಸಿ ಚೆನ್ನಾಗಿ ಕಲಕಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸೇವಿಸುತ್ತಿದ್ದರೆ ಉಬ್ಬಸ ನಿಯಂತ್ರಣಕ್ಕೆ ಬರುತ್ತದೆ ಹೀಗೆ ಕನಿಷ್ಠ ಎರಡರಿಂದ ಮೂರು ವಾರ.12 ಗ್ರಾಂ ಬೂದುಗುಂಬಳದ ಬೇರಿನ ರಸ ಅಥವಾ ಚೂರ್ಣವನ್ನು ಪ್ರತಿನಿತ್ಯ ಬಿಸಿ ನೀರಿನಲ್ಲಿ ಕದಡಿ ಸೇವಿಸುವುದು ಹೀಗೆ ಪ್ರತಿನಿತ್ಯ ಎರಡು ವೇಳೆಯಂತೆ ಮೂರರಿಂದ ನಾಲ್ಕು ಮಾಡಿದಲ್ಲಿ ಉಬ್ಬಸ ದಮ್ಮು ಪರಿಹಾರ.
ಒಂದು ದೊಡ್ಡ ಲೋಟ ಬಿಸಿ ನೀರಿಗೆ 4 ಚಮಚ ಶುದ್ಧ ಜೇನುತುಪ್ಪ ಹಾಕಿ ಚೆನ್ನಾಗಿ ಕಲಕಿ ಮೇಲಿಂದ ಮೇಲೆ ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಉಬ್ಬಸ ಕಡಿಮೆಯಾಗುತ್ತದೆ ಹೀಗೆ ದಿನದಲ್ಲಿ ನಾಲ್ಕಾರು ಬಾರಿ ಅಂತೆ ಅಗತ್ಯ ಕಂಡಷ್ಟು ದಿನ ಮಾಡಬಹುದು
ದತ್ತೂರಿಯ ಒಣಗಿದ ಕಷ್ಟವನ್ನು ನುಣ್ಣಗೆ ಚೂರ್ಣ ಮಾಡಿ ಚಿಲುಮೇಲಿಟ್ಟು ಸೇದಿದರೆ ಉಬ್ಬಸ ಪರಿಹಾರವಾಗುತ್ತದೆ ಈ ಚಿಕಿತ್ಸೆಯನ್ನು ದಮ್ಮು ಸಂಪೂರ್ಣ ಪರಿಹಾರವಾಗುವವರೆಗೆ ಮುಂದುವರಿಸಲು ಅಡ್ಡಿಇಲ್ಲ.
ಬಾಯಿಹುಣ್ಣು ನಿವಾರಣೆಗೆ : ಕೊತ್ತಂಬರಿ ಬೀಜವನ್ನು ನುಣ್ಣಗೆ ಅರೆದು ಆ ಪುಡಿಯನ್ನು ಸ್ವಲ್ಪ ಸ್ವಲ್ಪವಾಗಿ ಮಕ್ಕಳ ನಾಲಿಗೆಯ ಮೇಲೆ ತೆಳುವಾಗಿ ಸವರುವುದರಿಂದ ಮಕ್ಕಳ ಬಾಯಿ ಹುಣ್ಣು ನಿವಾರಣೆಯಾಗುತ್ತದೆ ಹೀಗೆ ಮೂರರಿಂದ ನಾಲ್ಕು ದಿನ ನಿತ್ಯವೂ ಮೂರ್ನಾಲ್ಕು ಬಾರಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.