ತ್ವಚೆ ಅಂದ ಕೆಡಿಸುವ ಅಲರ್ಜಿ ಸಮಸ್ಯೆಗೆ ಜಸ್ಟ್ ಹೀಗೆ ಮಾಡಿ ಸಾಕು

0
1824

ನಗರದಲ್ಲಿ ಪ್ರತಿ ದಿನ ಮಾಲಿನ್ಯ ಹೆಚ್ಚಾಗುತ್ತಲೇ ಇದ್ದು, ಎಷ್ಟೇ ಎಚ್ಚರ ವಹಿಸಿದರು ನಾನಾ ರೀತಿಯ ಕಾಯಿಲೆಗಳು ಹರಡುತ್ತಲೇ ಇದೆ, ಅದರಂತೆ ತತ್ವಚೆಯ ಆರೋಗ್ಯವು ಬಹಳಷ್ಟು ಅದಗೆಡುತ್ತಿದೆ ಹಾಗು ನಾನಾ ರೀತಿಯ ಅಲರ್ಜಿಗಳು ಕಾಡಲು ಶೂ ಮಾಡಿದೆ.

ತ್ವಚೆಯನ್ನು ಹಾಳುಮಾಡುವಂತ ಅಲರ್ಜಿಯಾಗುವುದಕ್ಕೆ ಹಲವು ಕಾರಣಗಳಿವೆ, ಆದರೆ ಅವುಗಳ ನಿವಾರಣೆಗೆ ಇಲ್ಲಿದೆ ಸಿಂಪಲ್ ಔಷಧಿ, ತಣ್ಣೀರಿನಲ್ಲಿ ಸ್ನಾನ ಮಾಡುವುದು ಅಲರ್ಜಿ ಸಮಸ್ಯೆ ನಿವಾರಣೆಗೆ ಮತ್ತು ಆರೋಗ್ಯಕ್ಕೆ ಒಳ್ಳೆಯದು.

ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಮೇಗೆ ಹಚ್ಚಿ ಒಂದು ರಾತ್ರಿ ಬಿಡಬೇಕು, ನಂತರ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು, ಈ ರೀತಿ ಎಣ್ಣೆ ಹಚ್ಚಿದಾಗ ಕಾಟನ್ ಬಟ್ಟೆ ಧರಿಸುವುದು ಒಳ್ಳೆಯದು.

ನಿಂಬೆ ರಸ ಮತ್ತು ತೆಂಗಿನೆಣ್ಣೆ : ನಿಂಬೆ ರಸ ಮತ್ತು ತೆಂಗಿನೆಣ್ಣೆಯನ್ನು ಮಿಶ್ರ ಮಾಡಿ ರಾತ್ರಿಯಲ್ಲಿ ಮೈಗೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಬೇಕು, ಈ ರೀತಿ ಮಾಡುತ್ತಿದ್ದರೆ ಅಲರ್ಜಿ ಸಮಸ್ಯೆ ನಿವಾರಣೆಯಾಗುವುದು.

ಕಹಿ ಬೇವಿನ ಪೇಸ್ಟ್ : ಕಹಿ ಬೇವಿನ ಎಲೆಯನ್ನು ಅರೆದು ಮೈಗೆ ಹಚ್ಚಿ ಅರ್ಧ ಗಂಟೆ ಬಳಿಕ ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ಅಲರ್ಜಿ ಇದ್ದರೂ, ಇಲ್ಲದಿದ್ದರೂ ಕಹಿ ಬೇವಿನ ಎಲೆಯನ್ನು ಸ್ನಾನ ಮಾಡುವ ನೀರಿಗೆ ಹಾಕುವುದು ಒಳ್ಳೆಯದು.

ಗಸೆಗಸೆ ಮತ್ತು ನಿಂಬೆ ರಸ : ಅಲರ್ಜಿಯಿಂದ ಉಂಟಾಗಿರುವ ಗಾಯವನ್ನು ಒಣಗಿಸಲು ಗಸೆಗಸೆಯನ್ನು ಅರೆದು ಅದಕ್ಕೆ ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ಅಲರ್ಜಿಯಿಂದ ಉಂಟಾದ ಗಾಯಕ್ಕೆ ಹಚ್ಚುವುದು ಒಳ್ಳೆಯದು.

ತಣ್ಣೀರು ಸ್ನಾನ : ತ್ವಚೆ ಅಲರ್ಜಿ ಉಂಟಾಗಿದ್ದರೆ ಬಿಸಿ ನೀರಿನಲ್ಲಿ ಸ್ನಾನ ಮಾಡದಿರುವುದು ಒಳ್ಳೆಯದು, ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಗಾಯದ ಉರಿ ಹೆಚ್ಚಾಗುತ್ತದೆ.

LEAVE A REPLY

Please enter your comment!
Please enter your name here