ಕಡೆಲೆಕಾಯಿ ಬೀಜ ತಿಂದೊಡನೆ ನೀರು ಕುಡಿಯ ಬಾರದು ಏಕೆ ನೋಡಿ

0
1290

ಕಡಲೇಕಾಯಿ ಬೀಜ ಬಡವರ ಬಾದಾಮಿ ಕಾರಣ ಇದರಲ್ಲಿ ಪ್ರೊಟೀನ್, ಉತ್ತಮ ಕೊಬ್ಬು, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿ ಇರುತ್ತದೆ, ಮೈಯಲ್ಲಿನ ಮೂಳೆಗಳನ್ನು ಬಲಪಡಿಸಲು ಮತ್ತು ನೀವು ಫಿಟ್ ಆಗಿ ಕಾಣುವಂತೆ ಮಾಡಲು ಕಡಲೆಬೀಜ ಬಹಳಷ್ಟು ಸಹಕಾರಿ, ಇನ್ನೂ ಸುಲಭವಾಗಿ ಹೇಳಬೇಕಾದರೆ ಯೌವನದ ಗುಟ್ಟು ಕಡಲೆ ಕಾಯಿ ಬೀಜದ ಲ್ಲಿದೆ ಎಂದರೆ ತಪ್ಪಾಗಲಾರದು.

ಕಡಲೆಕಾಯಿ ಬೀಜ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ, ಇದರಲ್ಲಿ ಒಮೆಗಾ 6 ಕೊಬ್ಬಿನಂಶ ಇರುವುದರಿಂದ ಚರ್ಮದ ಕಾಂತಿಗೆ ಬಹಳ ಸಹಕಾರಿ, ವಾರದಲ್ಲಿ ಎರಡರಿಂದ ಮೂರು ದಿನ ಕಡಲೆ ಕಾಯಿ ಸೇವನೆ ಮಾಡಿದರೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರುವುದಿಲ್ಲ, ರಕ್ತ ಹೀನತೆ ಇದ್ದವರು ಮರೆಯದೆ ಕಡಲೆಕಾಯಿ ಬೀಜವನ್ನು ತಿನ್ನಬೇಕು, ಇಷ್ಟೆಲ್ಲಾ ಆರೋಗ್ಯ ಉಪಯೋಗವನ್ನು ಹೊಂದಿರುವ ಕಡಲೆಕಾಯಿ ಬೀಜವನ್ನು ತಿಂದ ಕೂಡಲೇ ಯಾವ ಕಾರಣಕ್ಕೂ ನೀರನ್ನು ಕುಡಿಯಬಾರದು, ಕಾರಣ ಏನೆಂಬುದನ್ನು ಮುಂದೆ ತಿಳಿಸಿದ್ದೇವೆ ಓದಿ.

ಆರೋಗ್ಯದ ದೃಷ್ಟಿಯಲ್ಲಿ ನೋಡಿದರೆ ಕಡಲೆಬೀಜ ತಿನ್ನುವುದು ಒಳ್ಳೆಯದೇ ಆದರೆ ತಿಂದ ಕೂಡಲೇ ನೀರು ಕುಡಿಯಬಾರದು ಇದರಿಂದ ನಿಮ್ಮ ಹೊಟ್ಟೆಯಲ್ಲಿ ಬೊಜ್ಜು ಬೆಳೆಯುತ್ತದೆ, ಕಾರಣ ಕಡಲೆಕಾಯಿ ಬೀಜದಲ್ಲಿ ಎಣ್ಣೆ ಅಂಶ ಹೆಚ್ಚಾಗಿರುತ್ತದೆ, ಇದನ್ನು ತಿಂದು ತಕ್ಷಣ ನೀರು ಕುಡಿದರೆ ಅನ್ನನಾಳದಲ್ಲಿ ಎಣ್ಣೆಯಂಶ ಸೇರಿಕೊಂಡು ದೇಹದಲ್ಲಿ ಬೊಜ್ಜು ಬೆಳೆಯಲು ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟಂತಾಗುತ್ತದೆ.

ದೇಹದ ಬೊಜ್ಜು ಅಷ್ಟೇ ಅಲ್ಲದೆ ನೆಗಡಿ ಶೀತ ಮುಂತಾದ ಸಮಸ್ಯೆಗಳು ಬರಬಹುದು ಎಂದು ಕೆಲವು ಅಧ್ಯಯನಗಳು ತಿಳಿಸಿವೆ, ಅಜೀರ್ಣದ ಸಮಸ್ಯೆ ಸಹ ಕಾಡಲಿದ್ದು ಇದೇ ಕಾರಣಕ್ಕಾಗಿ ಕಡಲೆಕಾಯಿ ಬೀಜವನ್ನು ತಿಂದ ನಂತರ ಯಾವುದೇ ಕಾರಣಕ್ಕೂ ಹತ್ತರಿಂದ ಹದಿನೈದು ನಿಮಿಷದವರೆಗೆ ನೀರನ್ನು ಕುಡಿಯಬೇಡಿ, 15 ನಿಮಿಷ ಬಿಟ್ಟು ಕುಡಿದರು ತಣ್ಣಗಿನ ನೀರಿನ ಬದಲು ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿಯುವುದು ಒಳ್ಳೆಯದು.

LEAVE A REPLY

Please enter your comment!
Please enter your name here