ನಿಮಗೆ ತಿಳಿದಿರಬಹುದು ಮೊದಲೆಲ್ಲಾ ನೀರಿನ ಜೊತೆ ತುಂಡು ಬೆಲ್ಲವನ್ನು ಕೊಡುವ ಸಂಪ್ರದಾಯ ನಮ್ಮ ಹಿರಿಯರು ರೂಡಿಸಿಕೊಂಡಿದ್ದರು, ಬೆಲ್ಲ ತಿಂದರೆ ಅದ್ಭುತವಾದ ಆರೋಗ್ಯಕರ ಗುಣಗಳನ್ನು ಪಡೆಯಬಹುದೆಂದು ತಿಳಿದಿದ್ದರು, ಸಣ್ಣ ರೋಗಗಳಷ್ಟೇ ಅಲ್ಲದೆ ದೊಡ್ಡ ರೋಗಗಳನ್ನು ದೇಹದಿಂದ ದೂರವಿಡುತ್ತದೆ ತುಂಡು ಬೆಲ್ಲ, ಬೆಲ್ಲದಲ್ಲಿರುವ ಆರೋಗ್ಯಕರ ಗುಣಗಳೇನೆ ಎಂದು ನೋಡೋಣ.
ಈ ಬೆಲ್ಲದ ಸಿಹಿ ರಕ್ತವನ್ನು ಶುದ್ಧೀಕರಿಸುತ್ತದೆ. ಆದ್ದರಿಂದ ದಿನಾ ಸ್ವಲ್ಪ ಬೆಲ್ಲವನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಜೀರ್ಣಕ್ರಿಯೆಗೆ ಒಳ್ಳೆಯದು ಇದು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ, ಅಜೀರ್ಣವಾದಾಗ ಸ್ವಲ್ಪ ಬೆಲ್ಲವನ್ನು ಈರುಳ್ಳಿ ಜೊತೆ ತಿಂದರೆ ಒಳ್ಳೆಯದು.
ಒಂದು ತುಂಡು ಬೆಲ್ಲವನ್ನು ಬಾಯಿಗೆ ಹಾಕಿಕೊಂಡರೆ ಹೊಟ್ಟೆಯನ್ನು ತಂಪಾಗಿಸುತ್ತದೆ.
ರಕ್ತ ಹೀನತೆ ಇರುವವರಿಗೆ ಅತ್ಯುತ್ತಮವಾದ ಮನೆಮದ್ದು ಇದಾಗಿದೆ, ಇದರಲ್ಲಿ ಕಬ್ಬಿಣಾಂಶ ಅತ್ಯಧಿಕವಾಗಿದೆ.
ಹದಿಹರೆಯದ ಹೆಣ್ಣು ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರು ಬೆಲ್ಲವನ್ನು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆ ತಡೆಗಟ್ಟಬಹುದು.
ತ್ವಚೆಗೆ ತುಂಬಾ ಒಳ್ಳೆಯದು ಬೆಲ್ಲ. ಮೊಡವೆ ಇದ್ದರೆ ಬೆಲ್ಲವನ್ನು ತಿನ್ನಿ, ಮೊಡವೆಯನ್ನು ನಿಯಂತ್ರಿಸಿ ಕಮ್ಮಿಗೊಳಿಸುತ್ತದೆ, ಇದು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.
ಗಂಟಲು ಕೆರೆತ ಕೆಮ್ಮು ಕಾಣಿಸಿದರೆ ಈರುಳ್ಳಿ ಅಥವಾ ಬೆಳ್ಳಿಯನ್ನು ಸುಟ್ಟು ಅದನ್ನು ಬೆಲ್ಲದ ಜೊತೆ ತಿನ್ನುವುದು ಒಳ್ಳೆಯದು.
ನಿಯಮಿತವಾದ ಬೆಲ್ಲದ ಸೇವನೆ ಸಂಧಿ ನೋವನ್ನು ಕಡಿಮೆ ಮಾಡುತ್ತದೆ, ಮಂಡಿನೋವು ಕೈಕಾಲು ನೋವುಗಳನ್ನು ಕಮ್ಮಿ ಮಾಡುವಲ್ಲಿ ಬೆಲ್ಲ ಪ್ರಯೋಜನಕಾರಿ ಮೈಗ್ರೇನ್(ಅರ್ಧತಲೆಶೂಲೆ) ಕಾಯಿಲೆಯನ್ನು ಗುಣಪಡಿಸುವಲ್ಲಿ ಕೂಡ ಬೆಲ್ಲ ಸಹಾಯ ಮಾಡುತ್ತದೆ, ತಲೆನೋವು ಕಾಣಿಸಿಕೊಂಡಾಗ ಒಂದು ಚೂರು ಬೆಲ್ಲ ತಿಂದು ಆರಾಮವಾಗಿರಿ.
ಮುಟ್ಟಿನ ಸಮಯದಲ್ಲಿ ಅಧಿಕ ನೋವು ಕಾಣಿಸಿದರೆ ಮಾತ್ರೆ ತೆಗೆದುಕೊಳ್ಳುವ ಬದಲು ಬೆಲ್ಲ ಸೇವಿಸುವುದರಿಂದ ನೋವು ಕಡಿಮೆಯಾಗುತ್ತದೆ, ಬೆಲ್ಲವನ್ನು ಸೇವಿಸಿ ಉತ್ತಮ ಆರೋಗ್ಯ ಪಡೆಯಿರಿ, ಸಕ್ಕರೆಗಿಂತ ಬೆಲ್ಲ ಎಲ್ಲ ರೀತಿಯಿಂದಲೂ ಉತ್ತಮ.
ರಾತ್ರಿ ತಳಪಾದಕ್ಕೆ ಈರುಳ್ಳಿ ಕಟ್ಟಿ ಮಲಗಿದರೆ ಏನಾಗುತ್ತೆ ಗೊತ್ತಾ ?
ನ್ಯಾಷನಲ್ ಆನಿಯನ್ ಅಸೋಸಿಯೇಷನ್ ಪ್ರಕಾರ, ಈ ಪರಿಹಾರವು 1500 ರ ದಶಕದಷ್ಟು ಹಿಂದೆಯೇ ಹುಟ್ಟಿಕೊಂಡಿದೆ, ಈರುಳ್ಳಿಗಳು ಸಲ್ಫ್ಯೂರಿಕ್ ಕಾಂಪೌಂಡ್ಸ್ಗಳಲ್ಲಿ ಸಮೃದ್ಧವಾಗಿದ್ದು, ಕಾಲುಗೆ ಕಟ್ಟಿ ಮಲಗಿದರೆ ಳು ತಮ್ಮ ಕಟುವಾದ ವಾಸನೆಯಿಂದ ಸಂಯುಕ್ತಗಳು ದೇಹವನ್ನು ನುಸುಳುತ್ತವೆ ನಂತರ ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ಕೊಂದು ರಕ್ತವನ್ನು ಶುದ್ಧೀಕರಿಸುತ್ತದೆ. ಕೋಣೆಗಳ ಮೂಲೆಯಲ್ಲಿ ಈರುಳ್ಳಿ ಇಡುವುದರಿಂದ ವೈರಸ್ಗಳು, ಜೀವಾಣು, ಮತ್ತು ರಾಸಾಯನಿಕಗಳ ಗಾಳಿಯನ್ನು ವಿಮುಕ್ತಿಗೊಳಿಸುತ್ತದೆ.
ತಳಪಾದಕ್ಕೆ ಈರುಳ್ಳಿ ಕಟ್ಟಿ ಮಲಗಿದರೆ ಏನೆಲ್ಲಾ ಲಾಭಗಳಿವೆ : ಈರುಳ್ಳಿಯನ್ನು ತಳಪಾದಕ್ಕೆ ವೃತ್ತಾಕಾರವಾಗಿ ಕತ್ತರಿಸಿ ಕಟ್ಟಿಕೊಂಡರೆ ದೇಹದೊಳಗೆ ವಿಷಕಾರಿ ಅಂಶ ಪ್ರವೇಶಿಸುವುದಿಲ್ಲ, ಈ ಉಪಾಯದಿಂದ ಶೀತ ಕೂಡ ಕಡಿಮೆಯಾಗುತ್ತದೆ.
ರಾತ್ರಿ ಈ ಉಪಾಯ ಮಾಡಿದರೆ ಕಿವಿನೋವು ಶಮನವಾಗುತ್ತದೆ, ಈ ಉಪಾಯದಿಂದ ಹೊಟ್ಟೆಯೊಳಗಿನ ಆಮ್ಲ ತೆಗೆದು ಹಾಕುತ್ತದೆ, ಇದರಿಂದ ಊದಿಕೊಂಡಿರುವ ಗ್ರಂಥಿಯು ಮೊದಲಿನ ಸ್ಥಿತಿಗೆ ಬರುತ್ತದೆ, ಕಾಲಿನ ದುರ್ವಾಸನೆ ನಿವಾರಣೆಗೂ ಇದು ಉತ್ತಮ.
ಹೊಟ್ಟೆ ಸೋಂಕು, ಮೂತ್ರಪಿಂಡದ ಕಲ್ಲು ನಿವಾರಣೆಯಾಗುತ್ತದೆ, ಶೇರ್ ಮಾಡಿ ಇತರರಿಗೂ ಉಪಯೋಗವಾಗಲಿ.
ಪ್ರತಿದಿನ ಹಸಿ ಈರುಳ್ಳಿ ಸೇವಿಸಿದರೆ ಏನಾಗತ್ತೆ ಗೊತ್ತಾ?
ಹಸಿ ಈರುಳ್ಳಿಯಲ್ಲಿ ನೀವು ತಿಳಿಯದ ಹಲವು ಆರೋಗ್ಯಕಾರಿ ಲಾಭಗಳಿವೆ. ಪ್ರತಿ ದಿನ ಒಂದು ಹಸಿ ಈರುಳ್ಳಿ ಸೇವನೆ ಮಾಡಿದರೆ ಈ ಆರೋಗ್ಯಕಾರಿ ಲಾಭಗಳು ನಿಮ್ಮದಾಗುತ್ತವೆ. ಹಾಗಾದರೆ ಯಾವೆಲ್ಲ ರೀತಿಯಲ್ಲಿ ನಮ್ಮ ದೇಹಕ್ಕೆ ಹಸಿ ಈರುಳ್ಳಿ ಸಹಾಯಕವಾಗಿದೆ ಅನ್ನೋದನ್ನ ತಿಳಿಯೋಣ ಬನ್ನಿ.
ಮೊದಲನೆಯದಾಗಿ ಹಸಿ ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಎನ್ನುವ ರಾಸಾಯನಿಕ ಇರುತ್ತದೆ. ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಯುದ್ಧಮಾಡಿ ಹೊರಡುವಷ್ಟು ಶಕ್ತಿಶಾಲಿ. ವಿಜ್ಞಾನಿಗಳು ಹಸಿ ಈರುಳ್ಳಿಯನ್ನು ತಿನ್ನುವ ಅಭ್ಯಾಸ ಇರುವವರಿಗೆ ಕ್ಯಾನ್ಸರ್ ಕಾಡುವ ಸಂದರ್ಭಗಳು ಕಡಿಮೆ ಎಂದಿದ್ದಾರೆ. ಅಲ್ಲದೆ ಹಸಿ ಈರುಳ್ಳಿ ದೇಹದ ಆರೋಗ್ಯಕ್ಕೆ ಶಕ್ತಿ ಕೊಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.
ಬೇಯಿಸಿದ ಅಥವಾ ಹುರಿದ ಈರುಳ್ಳಿಗಿಂತ ಹಸಿ ಈರುಳ್ಳಿಯಲ್ಲಿ ಆರ್ಗಾನಿಕ್ ಸಲ್ಫರ್ ಪ್ರಮಾಣ ಜಾಸ್ತಿ ಇರುತ್ತದೆ. ಅಲ್ಲದೇ ಯಾವುದೇ ಕ್ಯಾಲರಿ ಇಲ್ಲದೇ ಇರೋದ್ರಿಂದ ಎಲ್ಲಾ ವಯಸ್ಸಿನವರುಗೂ ಹಾಗೂ ಎಲ್ಲ ಬಗೆಯ ಜನರಿಗೂ ಇದು ಸೂಕ್ತವಾಗಿದೆ. ಹಸಿ ಈರುಳ್ಳಿಯನ್ನು ಪ್ರತಿದಿನ ಊಟದ ಜೊತೆ ತಿನ್ನುವ ಅಭ್ಯಾಸವಿರುವ ಅನೇಕರಿಗೆ ಬೊಜ್ಜಿನ ಸಮಸ್ಯೆ ಇರುವುದಿಲ್ಲ.
ಈರುಳ್ಳಿ ನಮ್ಮ ದೇಹದ ಆರೋಗ್ಯಕ್ಕೆ ಮಾತ್ರವನ್ನ ನಮ್ಮ ತ್ವಚೆಯ ಸೌಂದರ್ಯ ಹಾಗೂ ಕೂದಲ ಸೌಂದರ್ಯಕ್ಕೂ ಬಹಳ ಸಹಾಯಕ. ಹಸಿ ಈರುಳ್ಳಿಯಲ್ಲಿರುವ ಸತ್ವಾಂಶಗಳು ರಕ್ತನಾಳದಲ್ಲಿ ಕೊಬ್ಬು ಶೇಖರಣೆಯಾಗದಂತೆ ತಡೆಯುತ್ತವೆ. ಹಾಗಾಗಿ ಹೃದ್ರೋಗದಿಂದ ದೂರ ಇರಿಸುವಲ್ಲಿ ಇವುಗಳ ಪಾತ್ರ ನಿಜಕ್ಕೂ ದೊಡ್ಡದೇ. ಇನ್ನು ದೇಹದ ರೋಗನಿರೋಧಕ ಶಕ್ತಿಯನ್ನು ಮತ್ತಷ್ಟು ಬಲಪಡಿಸುವುದರಿಂದ ಸಣ್ಣ ಪುಟ್ಟ ಸೋಂಕುಗಳು ದೇಹದ ಹತ್ತಿರವೂ ಸುಳಿಯದಂತೆ ಈರುಳ್ಳಿಯ ಗುಣಗಳು ದೇಹವನ್ನು ಸುರಕ್ಷಿತವಾಗಿಡುತ್ತದೆ.
ಸಕ್ಕರೆ ಕಾಯಿಲೆ ಇದ್ದವರು ದಪ್ಪ ಈರುಳ್ಳಿಯನ್ನು ಈ ರೀತಿ ಬಳಸಿದರೆ ಬಹಳ ಒಳ್ಳೆಯದು.
ಪ್ರಪಂಚದಲ್ಲಿ ಎಲ್ಲೇ ಹೋದರು ನಿಮಗೆ ಈರುಳ್ಳಿ ಸಿಗಬಹುದು, ಅಷ್ಟು ಚಿರಪರಿಚಿತ ತರಕಾರಿಯಲ್ಲಿ ಈರುಳ್ಳಿ ಸಹ ಒಂದು, ಅದರಲ್ಲೂ ನಿಮಗೆ ಅಚ್ಚರಿ ಮೂಡಿಸುವ ವಿಷಯವೆಂದರೆ ಈರುಳ್ಳಿಯಲ್ಲಿ ೩೦೦ರಕ್ಕೂ ಅಧಿಕ ಪ್ರಭೇದಗಳಿವೆ, ಇನ್ನು ಹಿತಿಹಾಸದಲ್ಲೂ ಈರುಳ್ಳಿಯನ್ನ ಕಾಣಬಹುದು ಗರುಡ ಪುರಾಣದಲ್ಲಿ ಇದರ ಉಲ್ಲೇಖವಿದೆ ಹಾಗು ಸಂಸ್ಕೃತದಲ್ಲಿ ಈರುಳ್ಳಿಯನ್ನು ಪಲಾಂಡು ಎನ್ನುತ್ತಾರೆ, ಮನುಷ್ಯ ತೀರ ಪ್ರಾಚೀನ ಕಾಲದಿಂದಲೂ ಬೆಟ್ಟ ಗುಡ್ಡ ಕಾಡುಗಳಿಂದ ಹಲವು ಬಗೆಯ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬಳಸುತ್ತಿದ್ದ ಆದರೆ ಸ್ವತಃ ಬೆಳೆಸಿ, ಬಳಸತೊಡಗಿದ ಮೊದಮೊದಲ ಗಿಡಮೂಲಿಕೆಗಳ ಪೈಕೆ ಈರುಳ್ಳಿಯೂ ಒಂದು.
ಈರುಳ್ಳಿಯ ಪ್ರಬಲ ರಾಸಾಯನಿಕವು ಅದನ್ನು ಹಸಿಯಗಿ ತಿಂದಾಗ ಹೆಚ್ಚಿನ ಪ್ರಮಾಣದಲ್ಲಿ ದೇಹದಲ್ಲಿ ಉಳಿದು ಕೊಳ್ಳುತ್ತದೆ, ಸಣ್ಣ ಈರುಳ್ಳಿಯಲ್ಲಿ ಪೋಷಕಾಂಶ ಅಧಿಕ ಆದರೆ ನಾರಿನಾಂಶ ಕಡಿಮೆ ಇರುತ್ತದೆ.
ಇನ್ನು ಸಕ್ಕರೆ ಕಾಯಿಲೆ ಇದ್ದವರು ಪ್ರತಿದಿನ ನಿಮ್ಮ ಅಡುಗೆಯಲ್ಲಿ ತಪ್ಪದೆ ದಪ್ಪ ಈರುಳ್ಳಿಯನ್ನು ಬಳಸಬೇಕು ಅಥವಾ ಆಹಾರ ಸೇವನೆ ಮಾಡುವಾಗ ಜೊತೆಯಲ್ಲಿ ಹಸಿ ಈರುಳ್ಳಿಯನ್ನು ತಿನ್ನಬೇಕು.
ಕೆಂಪಾಗಿರುವ ದಪ್ಪ ಈರುಳ್ಳಿಯಲ್ಲಿ ನಾರಿನಂಶ ಅಧಿಕವಾಗಿದ್ದು, ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ, ಹಾಗಂತ ಸ್ಪ್ರಿಂಗ್ ಆನಿಯನ್ ಸೇವಿಸಿ ಪ್ರಯೋಜನವಿಲ್ಲ, ಯಾಕೆಂದರೆ ಇದರಲ್ಲಿ ನಾರಿನಂಶ ಕಡಿಮೆ.
ಅಷ್ಟೇ ಅಲ್ಲ ಈರುಳ್ಳಿಯಲ್ಲಿರುವ ಗ್ಲೈಕೆಮಿಕ್ ಅಂಶ ಸಕ್ಕರೆ ಕಾಯಿಲೆ ಇದ್ದವರಿಗೆ ಅಗತ್ಯವಾದಷ್ಟೇ ಇದೆ, ಈ ಅಂಶ ಆಹಾರದಲ್ಲಿರುವ ಗ್ಲುಕೋಸ್ ಅಂಶ ರಕ್ತಕ್ಕೆ ಸೇರ್ಪಡೆಯಾಗುವುದನ್ನು ನಿಧಾನಗೊಳಿಸುತ್ತದೆ, ಆದ್ದರಿಂದ ಸಕ್ಕರೆ ಕಾಯಿಲೆ ಇದ್ದವರಿಗೆ ಸಲಾಡ್ ರೂಪದಲ್ಲಿಯೋ, ಸ್ಯಾಂಡ್ ವಿಚ್ ರೂಪದಲ್ಲಿಯೋ ಈರುಳ್ಳಿ ಹೇರಳವಾಗಿ ಸೇವಿಸುವುದು ಒಳ್ಳೆಯದು.