ದಿನಕ್ಕೆ ಎರಡು ಮೂರೂ ಖರ್ಜುರ ತಿನ್ನೋದ್ರಿಂದ ಸಿಗುವ ಅರೋಗ್ಯ ಲಾಭ ನೋಡಿ

0
1473

ಕೆಲವರು ಖರ್ಜುರವನ್ನು ಹಾಗೆಯೇ ತಿನ್ನುತ್ತಾರೆ ಆದರೆ ಕೆಲವರು ತುಪ್ಪದಲ್ಲಿ ರಾತ್ರಿ ನೆನೆಹಾಕಿ ತಿಂದರೆ ಇನ್ನು ಕೆಲವರು ನೀರಿನಲ್ಲಿ ನೆನೆಹಾಕಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ, ಖರ್ಜುರದ ಹಲವಾರು ಆರೋಗ್ಯಕಾರಿ ವಿಶೇಷತೆಗಳು ನಿಮಗೆ ತಿಳಿದಿಲ್ಲವೆಂದರೆ ಇಲ್ಲಿದೆ ನೋಡಿ ನಿಮ್ಮ ಹಲವಾರು ದೈಹಿಕ ಸಮಸ್ಯೆಗಳನ್ನೂ ಹೋಗಲಾಡಿಸಲು ಈ ಖರ್ಜುರ ಉತ್ತಮವಾಗಿ ಕೆಲಸ ಮಾಡುತ್ತದೆ.

ಖರ್ಜೂರದ ತೀನೋದ್ರಿಂದ ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ ಹಾಗು ಇದರಲ್ಲಿರುವ ಕರಗುವ ನಾರು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ, ಕೆಲವು ಖರ್ಜೂರಗಳನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಈ ನೀರನ್ನು ಮತ್ತು ಖರ್ಜೂರವನ್ನು ಸೇವಿಸುವುದರಿಂದ ಮಲಬದ್ಧತೆಯಿಂದ ರಕ್ಷಿಸುತ್ತದೆ.

ಖರ್ಜೂರದಲ್ಲಿ ಉತ್ತಮ ಪ್ರಮಾಣದ ಕಬ್ಬಿಣ ಇರುವ ಕಾರಣ ರಕ್ತದ ಕೆಂಪುಕಣಗಳ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತವೆ. ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಇದು ಉತ್ತಮವಾಗಿದೆ. ಬಾಣಂತಿಯರಿಗೆ ಮತ್ತು ಮಾಸಿಕ ದಿನಗಳಲ್ಲಿ ಮಹಿಳೆಯರಿಗೆ ಖರ್ಜೂರದ ಸೇವನೆ ಮಾಡುವುದು ಒಳ್ಳೆಯದು.

ನಿಮ್ಮಲ್ಲಿ ಎಷ್ಟೇ ವ್ಯಾಯಾಮ ಹಾಗು ಕಸರತ್ತುಗಳನ್ನು ಮಾಡಿದರು ಹೋಗದೆ ಇರುವ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ ಕೆಲವು ಖರ್ಜೂರಗಳನ್ನು ಕೊಂಚ ಹಾಲಿನಲ್ಲಿ ಗೊಟಾಯಿಸಿ ಕೊಂಚ ಜೇನು ಸೇರಿಸಿ ಕುಡಿದರೆ ತಕ್ಷಣ ದೇಹದಲ್ಲಿ ಶಕ್ತಿ ಸಂಚಾರವಾಗುತ್ತದೆ.

ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ನಿತ್ಯವೂ ಮೂರರಿಂದ ನಾಲ್ಕು ಖರ್ಜೂರಗಳನ್ನು ತಿನ್ನುವ ಮೂಲಕ ನಿಧಾನವಾಗಿ ಆರೋಗ್ಯಕರ ಮಟ್ಟಕ್ಕೆ ಇಳಿಯಲು ನೆರವಾಗುತ್ತದೆ.

ಕೂದಲ ಆರೋಗ್ಯಕ್ಕೆ ಇದರಲ್ಲಿರುವ ವಿಟಮಿನ್ ಬಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲಿಗೂ ಉತ್ತಮ ಪೋಷಣೆ ದೊರೆತು ಆರೋಗ್ಯಕರವಾಗುತ್ತದೆ. ಇದು ನಿಮ್ಮ ಕೂದಲನ್ನು ಉದ್ದ ಮತ್ತು ಆರೋಗ್ಯಕರವಾಗಿಸುತ್ತದೆ.

LEAVE A REPLY

Please enter your comment!
Please enter your name here