ಯಾವ ದೇವರಿಗೆ ಯಾವ ಬಣ್ಣದ ಯಾವ ಹೂನಿಂದ ಅರ್ಚನೆ ಮಾಡಿದರೆ ತಕ್ಷಣ ಫಲ ನೋಡಿ

0
2188

ಭಾವನಾತ್ಮಕತೆ : ದೇವರ ಪೂಜೆ ಎನ್ನುವುದು ನಮ್ಮ ಮನಸ್ಸಿಗೆ ಮುದ, ಸಂತೋಷ, ಸಂತೃಪ್ತಿ ನೀಡುವ ಕೆಲಸ, ಆರಾಧನೆ, ದೇವರಮನೆ ಪ್ರತಿನಿತ್ಯ ಸ್ವಚ್ಛ ಪಡಿಸಿ, ಸಾರಿ ಸಿ, ರಂಗೋಲಿ ಮತ್ತು ಕೆಮ್ಮಣ್ಣು ಲೇಪಿಸಿ ಸುಂದರ ತಾಜಾ ಹೂಗಳಿಂದ ಅಲಂಕಾರ ಮಾಡುವುದರಿಂದ, ನೀಲಾಂಜನ ದಲ್ಲಿ ದೀಪ ಹಚ್ಚಿ ಸುತ್ತಲೂ ಮಂದ ಬೆಳಕು ಹರಡುವುದರಿಂದ ಒಂದು ಬಗೆಯ ಕಾಂತಿ ಸುತ್ತಲೂ ಹರಡುತ್ತದೆ.

ಆದರೆ ನಮ್ಮ ಪ್ರಾಚೀನ ಶಾಸ್ತ್ರ ಪ್ರತಿಯೊಂದು ದೇವರಿಗೂ ಒಂದೊಂದು ಬಗೆಯ ಹೂ ಎಂದು ಹಾಕಿ ಅರ್ಚನೆ ಮಾಡಿ ಎಂದು ಕಾರಣ ಸಹಿತ ಉಲ್ಲೇಖ ಮಾಡಿದೆ, ಆಯ ಹೂಗಳು ಭಗವಂತನ ಅಧಿಕ ಪ್ರೀತಿಗೆ ಕಾರಣ ಆಗುತ್ತದೆ. ಸೂರ್ಯದೇವ ಮತ್ತು ಗಣಪತಿಗೆ ಕೆಂಪು ಹೂಗಳನ್ನು ಹಾಕಿ ಅರ್ಚನೆ ಮಾಡಬೇಕು, ಆಂಜನೇಯನಿಗೆ ದೇವ ಕಾಂಚನ ಪುಷ್ಪಗಳಿಂದ ಅರ್ಚನೆ ಮಾಡಿ, ದಾಸವಾಳದ ಹೂ ಗಳಿಂದ ಲಲಿತಾ, ದುರ್ಗೆ, ಚಾಮುಂಡೇಶ್ವರಿ ಆರಾಧನೆ ಮಾಡಿ, ಶಿವ, ಮಹಾಲಕ್ಷ್ಮಿ ಗೆ ನಂದಿ ವರ್ದನ, ನಾಗ ಮಲ್ಲಿಗೆ, ಮಲ್ಲಿಗೆ, ಮಾಲತಿ ಮುಂತಾದವುಗಳಿಂದ ಅರ್ಚನೆ ಮಾಡಿ, ಈ ಹೂಗಳು ಬಿಳಿ ಬಣ್ಣದಲ್ಲಿ ಇರುತ್ತದೆ.

ಶ್ರೀ ಮಹಾಲಕ್ಷ್ಮಿಗೆ ಸಂಪಿಗೆ ಹೂವು ತುಂಬಾ ಪ್ರೀತಿ ಪಾತ್ರ, ಕೃಷ್ಣ ಹಾಗೂ ಪಾರ್ವತಿ ದೇವಿಗೆ ಬಿಳಿ ಬಣ್ಣದ ಹೂಗಳಿಂದ ಆರಾಧನೆ ಮಾಡಬೇಕು, ಕಾಳಿ, ದುರ್ಗೆ, ಲಲಿತೆಗೆ ಕದಂಬ ಹೂವುಗಳನ್ನು ಅರ್ಪಿಸಿ.

ವಾಸ್ತವಿಕತೆ : ನಮ್ಮ ಪ್ರಕೃತಿ ನಮ್ಮ ಪಾಲಿನ ದೇವರು, ಪ್ರಕೃತಿಯಲ್ಲಿ ಸಿಗುವ ಹೂವುಗಳು, ಗರಿಕೆ ಹುಲ್ಲುಗಳು, ಪತ್ರೆಗಳನ್ನು ದೇವರಿಗೆ ಅರ್ಪಿಸುವುದು ವಾಡಿಕೆ, ಋತುಗಳು, ಕಾಲಮಾನ ಗಳಿಗೆ ಅನುಸಾರವಾಗಿ ಹೂಗಳು ಅರಳುತ್ತವೆ, ಆಯಾ ದೇವರುಗಳಿಗೆ ಇಂತಹ ಪುಷ್ಪಗಳು ಎಂದು ಉಲ್ಲೇಖ ಮಾಡಿರುವುದರಿಂದ ಸಿಗುವ ಹೂಗಳಲ್ಲಿ ಮುಖ್ಯ ಯಾವುದು ಎಂದು ತಿಳಿದು ಪೂಜಿಸುವುದರಿಂದ ದೇವರು ಸಂಪ್ರೀತನಾಗುತ್ತಾನೆ. ಬಿಳಿ ಬಣ್ಣ ಶಾಂತಿ ಪ್ರತಿಕ, ಕೆಂಪು ಬಣ್ಣ ನೋಡಲು ಆಕರ್ಷಕ, ಸಂಪಿಗೆ ಬಣ್ಣ ಶ್ರಾವಣ ಮಾಸದಲ್ಲಿ ಅರಳುತ್ತದೆ, ಈ ಉ ಶ್ರಾವಣ ಮಾಸದಲ್ಲಿ ದೇವರಿಗೆ ಅರ್ಚನೆ ಮಾಡುವುದರಿಂದ ತಾಯಿ ಸಂಭ್ರಮಿಸುತ್ತಾಳೆ, ಶ್ರಾವಣ ಮಾಸ ತಾಯಿಗೆ ಬಹಳ ಮುಖ್ಯವಾದ ಕಾಲ.

LEAVE A REPLY

Please enter your comment!
Please enter your name here