ಪಾಪ ಆ ಹೆಣ್ಣು ಮಗುವಿಗೆ ಕರೋನಾ ನೆಗೆಟಿವ್! ಆದರೂ ಸ’ತ್ತ ಬಳಿಕ ತಾಯಿಗೆ ಮುಖ ತೋರಿಸಲಿಲ್ಲ.

0
1944

ಕರೋನಾ ಭೀತಿ ದೇಶದಲ್ಲಿ ಹೆಚ್ಚಾಗುತ್ತಿದ್ದಂತೆ ಖಾಸಗಿ ಆಸ್ಪತ್ರೆಗಳ ಎಡವಟ್ಟು ಕೂಡ ಮಿತಿಮೀರುತ್ತಿದೆ ಪ್ರತಿದಿನ ಒಂದಲ್ಲ ಒಂದು ಕ’ರುಣಾಜನಕ ಘಟನೆಗಳು ನಡೆಯುತ್ತಿದ್ದು ಈ ಬಾರಿ ಚಿಕ್ಕಮಂಗಳೂರಿನಲ್ಲಿ ನಡೆದಿರುವ ಈ ಘಟನೆ ನಿಜವಾಗಿಯೂ ಮನಸ್ಸಿಗೆ ಆಘಾ’ತ ನೀಡುವಂತಿದೆ, ಹುಟ್ಟುತ್ತಾ ತನ್ನ ಯಾವುದೇ ತಪ್ಪಿಲ್ಲದೆ ವಿಕಲಚೇತನೆ ಯಾಗಿ ಭೂಮಿಯ ಕಾಲಿಟ್ಟ ಈ ಮಗು ತಾಯಿಯ ಪ್ರೀತಿ ಹಾರೈಕೆಯಿಂದ ತನ್ನ ಜೀವನವನ್ನು ಕಳೆಯುತ್ತಿತ್ತು ಅದಾಗಿಯೂ ಬಿಕಾಂ ಓದುತ್ತಿದ್ದ ಈ ವಿದ್ಯಾರ್ಥಿ ಕರುನಾ ಇಲ್ಲದಿದ್ದರೂ ಕರುಣಾ ಹೆಸರಿನಲ್ಲಿ ಬ’ಲಿಯಾಗಿದ್ದಾಳೆ.

ಹೌದು ಚಿಕ್ಕಮಂಗಳೂರಿನ ಗೌರಿ ಕಾಲುವೆ ಎಲ್ಲಿ ವಾಸವಾಗಿದ್ದ ನಫಿಯಾಳಿ ಎನ್ನುವ ಮಗೂ ಜುಲೈ 24ರಂದು ಜ್ವರ ಹಾಗೂ ಗಂಟಲು ನೋವಿನಿಂದ ನರಳಲು ಶುರುಮಾಡಿದ್ದಾಳೆ, ತಕ್ಷಣವೇ ಹಾಗೆಯೇ ತಾಯಿ ಸೀಮಾ ನಗರದಲ್ಲಿರುವ 3 ದೊಡ್ಡ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದ್ದಾರೆ ಆದರೆ ಎಲ್ಲ ಆಸ್ಪತ್ರೆಗಳಲ್ಲಿ ಕರೋನಾ ಪರೀಕ್ಷೆ ಮಾಡಿಸಲೇಬೇಕು, ವೆಂಟಿಲೇಟರ್ ಹಾಕಬೇಕು ಎಂದು ಹೇಳಿ ಹಿಂತಿರುಗಿಸಿ ಕಳುಹಿಸಿದ್ದಾರೆ.

ಈ ಮೂರು ಆಸ್ಪತ್ರೆಗಳನ್ನು ಭೇಟಿ ಮಾಡಿ ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ನರಳಾಡಿ ಹೆಣ್ಣು ಮಗು ಕಣ್ಣು ಮುಚ್ಚಿದೆ, ನಂತರ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಗಳು ಈ ಮಗು ಕರೋನಾ ದಿಂದ ಮೃ’ತ ಪಟ್ಟಿದೆ ಎಂದು ಹೇಳಿ ತಾಯಿಗೆ ಹಾಗೂ ಸಂಬಂಧಿಕರಿಗೆ ಮುಖ ತೋರಿಸದೆ ಅಂತ್ಯ’ಸಂಸ್ಕಾರ ಮಾಡಿ ಮುಗಿಸಿದ್ದಾರೆ, ಆದರೆ ಇದಾದ ಬಳಿಕ ಈಕೆಯ ಕರೋನಾ ರಿಪೋರ್ಟ್ ಬಂದಿದ್ದು ಅದರಲ್ಲಿ ನೆಗೆಟಿವ್ ಇದೆ, ಈ ವಿಷಯ ತಿಳಿದ ತಾಯಿಯ ಹೃದಯ ಹೊಡೆದಿದೆ, ನನ್ನ ಮಗು ಮಣ್ಣಿನಲ್ಲಿ ಮಲಗಿ ನನ್ನನ್ನು ಕೂಗುತ್ತಿದ್ದಾಳೆ ಮಳೆಯಲ್ಲಿ ನೆನೆಯುತ್ತಿದ್ದಾಳೆ ಎಂಬ ಭಾವ ಉಂಟಾಗುತ್ತಿದೆ ಎಂದು ಮರುಗುತ್ತಿದ್ದಾರೆ.

LEAVE A REPLY

Please enter your comment!
Please enter your name here