ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚುತ್ತಾರೋ, ಆ ಮನೆಯಲ್ಲಿ ಶುಭಕಾರ್ಯಗಳು ಬಹಳ ಬೇಗ ಜರುಗುತ್ತವೆ, ಯಾರು ಕುಲದೇವತೆಗೆ ಕೊಬ್ಬರಿ ಎಣ್ಣೆಯನ್ನು ಹಾಕಿ ನಂದಾದೀಪ ಹಚ್ಚಿತ್ತಾರೋ ಅವರ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುತ್ತದೆ.
ಮದುವೆಯಾಗದ ಗಂಡು/ಹೆಣ್ಣು ಮಕ್ಕಳು ಕಾತ್ಯಾಯನೀ ಪೂಜೆ ಮಾಡುವಾಗ ದೇವರ ದೀಪಕ್ಕೆ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ವಿದರೆ ಶೀಘ್ರದಲ್ಲಿಯೇ ವಿವಾಹ ನಿಶ್ಚಯವು ಆಗುತ್ತದೆ.
ಮಂಗಳವಾರ ಶ್ರೀ ಸುಬ್ರಹ್ಮಣ್ಯ ಪೂಜಿಸುವಾಗ ಕೊಬ್ಬರಿ ಎಣ್ಣೆಯ ದೀಪ ಹಚ್ವಿದರೆ ಮಕ್ಕಳು ಇಲ್ಲದವರಿಗೆ ಸಂತಾನಭಾಗ್ಯವಾಗುತ್ತದೆ, (ಸರಿಯಾದ ಪೂಜಾ ವಿಧಾನ ತಿಳಿದು ಮಾಡಬೇಕು)
ಅಶ್ವಥ ಮರದ ಕೆಳಗೆ ಇರುವ ನಾಗರಕಲ್ಲಿಗೆ ತನಿ ಎರೆಯುವಾಗ ಶ್ರೀ ಅಶ್ವತ್ಥ ನಾರಾಯಣ ಸ್ವಾಮಿಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚಿದರೆ ದಾಂಪತ್ಯ ಕಲಹ ನಿವಾರಣೆಯಾಗುತ್ತದೆ. (ಅಷ್ಟೋತ್ತರ, ಸಂಕಲ್ಪ ಬೇರೆ ರೀತಿ ಇರುತ್ತದೆ)
ಜಾತಕದಲ್ಲಿ ಕುಜದೋಷ ಜಾಸ್ತಿ ಇರುವವರು ಮಂಗಳವಾರ ಅಥವಾ ಶುಕ್ರವಾರ ದೇವಿ ಪೂಜೆ ಮಾಡಿ “ಒಬ್ಬಟ್ಟು” ನೈವೇದ್ಯ ಮಾಡಿ, ಮೊರದ ಬಾಗಿನವನ್ನು ದಾನ ಮಾಡಿದರೆ ಕುಜದೋಷ ನಿವಾರಣೆಯಾಗುತ್ತದೆ. (ಪ್ರಾಯಶ್ಚಿತ್ತ ಸಂಕಲ್ಪ, ತಾಂಬೂಲದ ದಾನ ಮಾಡಬೇಕು)
ಹೋಮದ ಪೂರ್ಣಾಹುತಿಗೆ “ರೇಷ್ಮೆವಸ್ತ್ರ” ವನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಹೋಮಕುಂಡಕ್ಕೆ ಹಾಕಿದರೆ ಅಷ್ಟನಿಧಿ, ನವನಿಧಿ ಪ್ರಾಪ್ತಿಯಾಗುತ್ತದೆ. ಪ್ರೀತಿಸಿ ಮದುವೆಯಾಗಲು ಬಯಸುವ ಹುಡುಗ/ಹುಡುಗಿಗೆ ವಿಶೇಷ ಫಲ, ಇಷ್ಟಾರ್ಥ ಸಿದ್ಧಿಯಾಗುತ್ತದೆ. (ಪೂಜಾ ವಿಧಾನ ತಿಳಿಸಿಲ್ಲ)
ಪ್ರತೀ ಶನಿವಾರದ ದಿವಸ “ಶ್ರೀನಿವಾಸ” ದೇವರಿಗೆ ಮನೆಯಲ್ಲಿ ಯಾರು ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿ, ತುಳಸೀಹಾರ ಹಾಕಿ ಪೂಜಿಸುತ್ತಾರೋ ಅವರಿಗೆ ಜೀವಮಾನಪರ್ಯಂತ ಹಣದ ಸಮಸ್ಯೆ ಬರುವುದಿಲ್ಲ. (ವಿಶೇಷ ಸ್ತೋತ್ರ, ಸಂಕಲ್ಪ, ನೈವೇದ್ಯ ಮುಖ್ಯ)
ಹೆಣ್ಣು ಮಕ್ಕಳ ಮದುವೆಗೆ ಬೇಕಾದ ಹಣ ಒದಗಿ ಬರುತ್ತದೆ, ಪಿತೃಶ್ರಾದ್ಧದ ಸಮಯದಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು “ವಿಷ್ಣುಪಾದ” ದ ಮುಂದೆ ಹಚ್ಚಿಟ್ಟರೆ ಸಮಸ್ತ ಪಿತೃದೋಷ ನಿವಾರಣೆಯಾಗುತ್ತದೆ, ಸಾಲದ ಸಮಸ್ಯೆ ನಿವಾರಣೆ, ಹಣ ಕೊಡಬೇಕಾದವರು ತಾವಾಗಿಯೇ ಬಂದು ಕೊಡುತ್ತಾರೆ.