ಚಂದನ್ ಶೆಟ್ಟಿ ಹೊಸ ಹಾಡಿಗೆ ಮಲೈ ಮಹದೇಶ್ವರ ಸ್ವಾಮಿಯ ಭಕ್ತರು ಗರಂ. ಆದರೆ ಅಸಲಿಯತ್ತು ಏನು ಗೊತ್ತಾ.

0
951

ಚಂದನ್ ಶೆಟ್ಟಿ ತನ್ನ ವಿರುದ್ಧ ಜನಪದ ಹಾಡು ತಿರುಚಿದ ಆರೋಪ ಕೇಳಿ ಬರುತ್ತಿದ್ದಂತೆಯೇ  ಕನ್ನಡ ರ‍್ಯಾಪರ್, ಬಿಗ್’ಬಾಸ್ ವಿಜೇತ ಕರುನಾಡ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ.

ಈ ಸಂಬಂಧವಾಗಿ ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟ ಚಂದನ್, ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡಲು ಈ ಹಾಡನ್ನು ಮಾಡಿಲ್ಲ, ಯಾರ ಮನಸ್ಸನ್ನೂ ನೋಯಿಸಲು ಮಾಡಿಲ್ಲ. ಈಗಿನ ಪೀಳಿಗೆಗೆ ನಮ್ಮ  ಜಾನಪದ ತಲುಪಲಿ ಅನ್ನೋ ಕಾರಣಕ್ಕೆ ರ್ಯಾಪ್ ಹಾಡಿನ ರೂಪ ಕೊಟ್ಟಿದ್ದೆ ಅಷ್ಟೆ. ಇದರಿಂದ ಯಾರಿಗಾದರೂ  ಬೇಸರವಾಗಿದ್ದರೆ ಎಲ್ಲರಲ್ಲೂ ಕೈ ಮುಗಿದು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಗಣೇಶ ಹಬ್ಬಕ್ಕೆ ‘ಕೋಲು ಮಂಡೆ ಜಂಗಮ ದೇವರು’ ಎಂಬ ಹೊಸ ರ‍್ಯಾಪ್ ಸಾಂಗ್ ಅನ್ನು ಚಂದನ್ ಶೆಟ್ಟಿ ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದರು. ಈಗ ಮಾದಪ್ಪನ ಗೀತೆಯನ್ನು ಅಶ್ಲೀ’ಲವಾಗಿ ತೋರಿಸಿರುವ ಆರೋಪ ಚಂದನ್ ಶೆಟ್ಟಿ ಮೇಲೆ ಕೇಳಿಬಂದಿದೆ.

ಶಿವಶರಣೆ ಸಂಕಮ್ಮನ ಬಗ್ಗೆ ಒಳ್ಳೆಯದಲ್ಲದ ಪದ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಂದನ್ ಶೆಟ್ಟಿ ವಿರುದ್ಧ ಭಾರೀ ಆಕ್ರೋ’ಶ ವ್ಯಕ್ತವಾಗುತ್ತಿದೆ.

ಮಲೆ ಮಹದೇಶ್ವರ ಸ್ವಾಮಿ ಗುಂಪಿನಲ್ಲಿ ಚಾಮರಾಜನಗರದ ಹಲವು ಯುವಕರು ಚಂದನ್ ಶೆಟ್ಟಿ ವಿರುದ್ಧ ಕಿ’ಡಿಕಾರಿದ್ದಾರೆ. ಹಾಡು ವೈರಲ್ ಆದ್ರೂ, ಚಾಮರಾಜನಗರದಲ್ಲಿ ಈ ಹಾಡಿಗೆ ಬಹಳ ವಿರೋಧ ವ್ಯಕ್ತವಾಗಿದೆ. ಆಗಸ್ಟ್ 23 ರಂದು ಈ ವಿಡಿಯೋ ಬಿಡುಗಡೆಗೊಂಡಿದ್ದು, ಈಗಾಗಲೇ 35 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಯೂಟ್ಯೂಬ್‍ನಲ್ಲಿ ಮೊದಲನೇ ಸ್ಥಾನಕ್ಕೆ ಟ್ರೆಂಡಿಂಗ್ ಆಗಿದೆ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here