ಜೊತೆ ಜೊತೆಯಲಿ ಹಾಗೂ ಗಟ್ಟಿಮೇಳದ ಗಣೇಶೋತ್ಸವದ ಟಿ.ಆರ್.ಪಿ ಎಷ್ಟು ಗೊತ್ತಾ?

0
3157

ಸಿನಿಮಾವನ್ನೇ ಮೀರಿಸುವಂತಹ ಧಾರಾವಾಹಿಗಳು ಈಗ ದೇಶದಾದ್ಯಂತ ಹಾಗೂ ರಾಜ್ಯಾದ್ಯಂತ ಎಲ್ಲ ವಾಹಿನಿಗಳಲ್ಲೂ ಎಲ್ಲಾ ಭಾಷೆಗಳಲ್ಲೂ ಬರುತ್ತಿವೆ. ಅಂಥದ್ದರಲ್ಲಿ ಕರ್ನಾಟಕದಲ್ಲೂ ಕೂಡ ಕಲರ್ಸ್ ಕನ್ನಡ, ಜೀ ಕನ್ನಡ, ಸ್ಟಾರ್ ಸುವರ್ಣ ಹೀಗೆ ಹಲವಾರು ಚಾನೆಲ್’ಗಳು ಪ್ರತಿದಿನ ಪೈಪೋಟಿಯನ್ನು ನಡೆಸುತ್ತಲೇ ಇರುತ್ತವೆ. ಇತ್ತೀಚೆಗೆ ಎಲ್ಲಾ ವಾಹಿನಿಗಳನ್ನು ಹಿಂದಿಕ್ಕಿ ಜೀ ಕನ್ನಡ ಪ್ರಪ್ರಥಮ ಸ್ಥಾನದಲ್ಲಿದೆ. ಪ್ರತಿಯೊಂದು ಶೋ’ಗಳ ಉತ್ತಮ ನಿರ್ವಹಣೆಯಿಂದ ಟಿಆರ್ಪಿ ಗಳನ್ನು ಏರಿಸಿಕೊಂಡು ಜೀ ಕನ್ನಡ ದಾಪುಗಾಲಿಡುತ್ತಿದೆ. ಕಮಲಿ ಧಾರಾವಾಹಿಯ ನಂತರ ಜೀ ಕನ್ನಡದಲ್ಲಿ ಮತ್ತೊಂದು ಬ್ಲಾಕ್ಬಸ್ಟರ್ ಧಾರವಾಹಿ ಎಂದರೆ ಅದು ಜೊತೆ ಜೊತೆಯಲಿ ಹಾಗೂ ಗಟ್ಟಿಮೇಳ.

ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಹಾಗೂ ಹೊಸ ನಗುಮೊಗದ ಚೆಲುವೆ ಮೇಘ ಶೆಟ್ಟಿ ಜೊತೆಯಾಗಿ ಅಭಿನಯಿಸಿದ ವಯ’ಸ್ಕರ ಹಾಗೂ ಎಳೆ ಹುಡುಗಿಯ ನಡುವೆ ಶುರುವಾಗುವ ಪ್ರೀ’ತಿಯ ಕಥೆ ಜೊತೆ ಜೊತೆಯಲ್ಲಿ ಧಾರಾವಾಹಿ, ಪ್ರಥಮ ವಾರದಲ್ಲಿ ಎಲ್ಲಾ ಧಾರವಾಹಿಗಳನ್ನು ಹಿಂದಿಕ್ಕಿ ಟಿ.ಆರ್.ಪಿ ಯಲ್ಲಿ ಪ್ರಥಮ ಸ್ಥಾನಕ್ಕೇರಿತ್ತು. ಇದರ ಜೊತೆಗೆ ರಕ್ಷಿತ್ ಹಾಗೂ ನಿಶಾ ಮಿಲನ ಅವರ ಅಭಿನಯದ ಗಟ್ಟಿಮೇಳ ಧಾರವಾಹಿಯು ಕೂಡ ಸರಿಸಮನಾದ ಸ್ಪರ್ಧೆಯನ್ನು ನೀಡುತ್ತಾ ಬರುತ್ತಿದೆ. ಇದನ್ನು ಗಮನಿಸಿದ ಜೀಕನ್ನಡ ವಾಹಿನಿ’ಯವರು ಎರಡು ಧಾರಾವಾಹಿಗಳನ್ನು ಒಗ್ಗೂಡಿಸಿ ಒಂದು ವಾರಕ್ಕೂ ಮೀರಿದ ಎಪಿಸೋಡ್’ಗಳನ್ನು ಮಾಡಿದ್ದರು.

ಗಣೇಶನ ಹಬ್ಬಕ್ಕೆ ವಿಶೇಷ ಸಂಚಿಕೆಗಳನ್ನು ನೀಡಿದ್ದ ಈ ಜೋಡಿ ಧಾರವಾಹಿ ಮಾಡಿದ ಮೋಡಿ ಕರ್ನಾಟಕದ ಜನರ ಮನೆಮನೆಗಳಲ್ಲೂ ಮಾತಾಗಿದೆ. ಎರಡು ಧಾರಾವಾಹಿಯ ಎಲ್ಲಾ ನಟರು ತಮ್ಮ ಅಮೋಘ ಪ್ರತಿಭೆ ಹಾಗೂ ನಟನೆಯಿಂದ ವಾಹಿನಿಯು ಉತ್ತಮ ಶಿಖರಕ್ಕೆ ಏರುವುದಕ್ಕೆ ಭದ್ರ ಬುನಾದಿಗಳಾಗಿದ್ದಾರೆ. ಕಳೆದ ಒಂದು ವಾರದಿಂದ ಬರುತ್ತಿದ್ದ ಗಣೇಶನ ಹಬ್ಬದ ವಿಶೇಷ ಎಪಿಸೋಡ್ ನೀಡಿದ ಬ್ಲಾಕ್ ಬರ್ಸ್ಟರ್ ರೇಟಿಂಗ್ 15.5 ಟಿ.ಆರ್.ಪಿ ಪಡೆದುಕೊಂಡಿದೆ. ಜೊತೆ ಜೊತೆಯಲ್ಲಿ ಧಾರಾವಾಹಿ ಶುರುವಾದ ಪ್ರಾಥಮಿಕ ಹಂತದಲ್ಲಿ ನಂಬರ್1 ಸ್ಥಾನಕ್ಕೇರಿತ್ತು, ಆದರೆ ಗಟ್ಟಿಮೇಳ ಧಾರವಾಹಿಯ ಒಂದೇ ಸಮ ಪ್ರಥಮ ಸ್ಥಾನಕ್ಕೆ ಏರಿ ಜೊತೆ ಜೊತೆಯಲ್ಲಿ ಧಾರವಾಹಿ ಎರಡು ಮತ್ತು ಮೂರನೇ ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳುತಿತ್ತು.

ಈಗ ಎರಡೂ ಧಾರವಾಹಿಗಳನ್ನು ಸೇರಿಸಿರುವುದರಿಂದ 15.5 ಗಿಂತಲೂ ಹೆಚ್ಚು ಟಿ.ಆರ್.ಪಿ ಬಂದಿದೆ. ಹಾಸ್ಯನಟ ನರಸಿಂಹರಾಜು ರವರ ಪುತ್ರಿಯಾದ ಸುಧಾ ನರಸಿಂಹರಾಜು ಒಳಗೊಂಡಂತೆ ಹಲವಾರು ನಟರು ಈ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಧಾರಾವಾಹಿಗಳು ಗೃಹಿಣಿಯರಿಗೆ ಬಹಳ ಅಚ್ಚುಮೆಚ್ಚು. ಎಲ್ಲರ ನಟನೆಯೂ ಮನಸ್ಸಿಗೆ ಹತ್ತಿರವಾಗಿದೆ.

LEAVE A REPLY

Please enter your comment!
Please enter your name here