ನಾಗವಲ್ಲಿ ಪಾತ್ರಧಾರಿಯ ನಿಜ ಜೀವನ ಏನಾಗಿದೆ ಗೊತ್ತಾ.

0
38185

ಡಾಕ್ಟರ್ ವಿಷ್ಣುವರ್ಧನ್ ಅವರ ಖ್ಯಾತ ಚಲನಚಿ’ತ್ರ ಆಪ್ತಮಿತ್ರ ಯಾರಿಗೆ ತಾನೇ ಗೊತ್ತಿಲ್ಲ. ಆಪ್ತಮಿತ್ರದ ಅದ್ಭುತ ಸಕ್ಸಸ್ ನಂತರ ಆಪ್ತರಕ್ಷಕ ಚಿತ್ರೀಕರಿಸಲಾಗಿದ್ದು ಕೂಡ ಬಹುದೊಡ್ಡ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಆಪ್ತಮಿತ್ರದಲ್ಲಿ ನಾಗವಲ್ಲಿಯ ಪಾತ್ರವನ್ನು ನಿರ್ವಹಿಸಿದವರು ಕನ್ನಡದ ಹೆಮ್ಮೆಯ ನಟಿ ಸೌಂದರ್ಯ ಅವರು. ನಂತರ ಆಪ್ತರಕ್ಷಕ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಿಜವಾದ ನಾಗವಲ್ಲಿಯ ಕ್ಯಾ’ರೆಕ್ಟರ್ ಅನ್ನು ತೋರಿಸಬೇಕಾದ ಸಂದರ್ಭ ಬಂದಿತ್ತು. ಆದ್ದರಿಂದ ಪಿ ವಾಸುರವರು ನಾಗವಲ್ಲಿ ಹಾವಭಾವಗಳಿಗೆ ಸೂಕ್ತವಾಗುವಂಥ ನಟಿಯ ಹುಡುಕಾಟದಲ್ಲಿದ್ದರು.

ಇದೇ ಸಮಯದಲ್ಲಿ ಪಿ ವಾಸುರವರಿಗೆ ಸಿಕ್ಕಿದ್ದು ಖ್ಯಾತ ನಟಿ ವಿಮಲಾ ರಾಮನ್. ವಿಮಲಾ ರಾಮನ್ ಅವರು 1982 ರಲ್ಲಿ ಸಿಡ್ನಿಯಲ್ಲಿ ಜನಿಸಿದ್ದರು. ತಂದೆ ಪಟ್ಟಾಭಿರಾಮನ್ ಹಾಗೂ ತಾಯಿ ಶಾಂತಾ ರಾಮನ್ ಅವರ ಪುತ್ರಿಯಾಗಿ ಜನಿಸಿದ ವಿಮಲಾ ರಾಮನ್ ಅವರು, ತಮ್ಮ ಸಂಪೂರ್ಣ ವಿದ್ಯಾಭ್ಯಾಸವನ್ನು ಸಿಡ್ನಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಮುಗಿಸಿಕೊಂಡರು. ಪ್ರಸ್ತುತ ಭಾರತದ ಚಿತ್ರರಂಗದಲ್ಲಿ ನಟಿ ಹಾಗೂ ರೂಪದರ್ಶಿಯಾಗಿ ಗುರುತಿಸಿಕೊಂಡಿರುವ ವಿಮಲಾ ರಾಮನ್ ಅವರು ದಕ್ಷಿಣ ಭಾರತದ ತೆಲುಗು, ಮಲಯಾಳಂ, ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಹೆಜ್ಜೆಯನ್ನು ಮೂಡಿಸಿದ್ದಾರೆ.

ವಿಮಲ ರಾಮನ್ ಅವರು ಮೂಲತಹ ತಮಿಳಿಯನ್ ಆಗಿದ್ದು ಬೆಂಗಳೂರಿನವರೇ ಆಗಿದ್ದಾರೆ. ತಮ್ಮ ಮೊದಲ ಚಿತ್ರ ‘ಪೋಯಿ’ ಇಂದಲೇ ಖ್ಯಾತಿ ಗಳಿಸಿದ್ದ ಅವರು ನಂತರ ಚುಕ್ಕಲಂಟಿ ಅಮ್ಮಾಯಿ, ಗಾ’ಯಂ 2, ಓಂ ನಮೋ ವೆಂಕಟೇಶಾಯ, ರಾಮನ್ ತೆಡಿಯ ಸೀತಾಯ್ ಹೀಗೆ ಇನ್ನೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಮೂಲತಹ ಭರತನಾಟ್ಯ ಕಲಾವಿದೆಯಾಗಿರುವ ಈಕೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ಲಕ್ಷದ ಎಂಬತ್ತು ಸಾವಿರ ಫಾಲೋವರ್ಸ್ ಅನ್ನು ಪಡೆದುಕೊಂಡಿದ್ದಾರೆ.

ಇಷ್ಟೆಲ್ಲ ಸಾಧನೆಗಳನ್ನು ಮಾಡಿರುವ ವಿಮಲಾ ರಾಮನ್ ಅವರು ಮತ್ತೊಮ್ಮೆ ಕನ್ನಡ ಚಿತ್ರರಂಗದಲ್ಲಿ ಮುಂಬರುವ ಯಾವುದಾದರೂ ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಆಸೆಯಿಂದ ಕನ್ನಡಿಗರು ಕಾದು ನೋಡುತ್ತಿದ್ದಾರೆ. ಕನ್ನಡದಲ್ಲಿ ಕೇವಲ ಆಪ್ತರಕ್ಷಕ ಚಿತ್ರವಷ್ಟೇ ಅಲ್ಲ, ಇದಾದನಂತರ ಶರಣ್ ಅವರ ರಾಜರಾಜೇಂದ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮಲಯಾಳಂನ ಪ್ರಣಯಕಲಂ ಎಂಬ ಚಿತ್ರದಲ್ಲಿ ನಟಿಸಿರುವ ವಿಮಲಾ ರಾಮನ್ ಅವರ ಪಾತ್ರವನ್ನು ಮಲೆಯಾಳಿಗರು ಎಂದಿಗೂ ಮರೆಯುವುದಿಲ್ಲ.

ಬೆಂಗಳೂರಿನ ಚೆಲುವೆ ವಿಮಲಾ ರಾಮನ್ ಎಂದೇ ಪ್ರಖ್ಯಾತರಾಗಿರುವ ಇವರು ಟೈಮ್ ಎಂಬ ಚಿತ್ರದಿಂದ ಮಲಯಾಳಂ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟರು. ಮೋಹನ್ ಲಾಲ್, ಮಮ್ಮುಟ್ಟಿ, ಜೈರಾಮ್, ದಿಲೀಪ್, ವಿಷ್ಣುವರ್ಧನ್, ಶರಣ್ ಹೀಗೆ ದಿಗ್ಗಜರ ಜೊತೆ ನಟನೆ ಮಾಡಿರುವ ವಿಮಲಾ ರಾಮನ್ ಅವರು ಸದಾ ಒಂದೊಂದು ಹೊಸ ಕಾರ್ಯದಲ್ಲಿ ತೊಡಗಿರುತ್ತಾರೆ. ಜೊತೆಗೆ ತಮ್ಮ ನಾಟ್ಯವನ್ನು ನಿರಂತರ ಅಭ್ಯಾಸ ಮಾಡುತ್ತಿರುತ್ತಾರೆ.

ವಿಮಲಾ ರಾಮನ್ ಅವರು ಆಗಾಗ ಫೋಟೋಶೂ’ಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮನಸೂರೆಗೊಳ್ಳುವ ಫೋಟೋಗಳನ್ನು ಅಪ್ಲೋಡ್ ಮಾಡಿಕೊಳ್ಳುತ್ತಿರುತ್ತಾರೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾದ್ದಲ್ಲಿ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್’ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here