ನೋ’ಟೀಸ್ ಕೊಟ್ಟರೆ ಅಪರಾಧಿ ಅಲ್ಲ. ಏನಂದ್ರು ಗೊತ್ತಾ ಅನುಶ್ರೀ.

0
2259

ನಮಸ್ಕಾರ ಪ್ರಿಯ ಓದುಗರೇ ವಿಷಯ ಏನಪ್ಪಾ ಅಂದುಕೊಂಡ್ರಾ. ನಿಮಗೂ, ನಮಗೂ ಎಲ್ಲರಿಗೂ ಗೊತ್ತಿರುವ ನಿರೂಪಕರಲ್ಲಿ ತನ್ನದೇ ಆದಂತಹ ಛಾಪನ್ನು ಮುಡಿಸಿರುವಂತಹ, ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿರುವಂತಹ ನಟಿ ಹಾಗೂ ಖ್ಯಾತ ನಿರೂಪಕಿಯಾಗಿರುವ ಅನುಶ್ರೀ ಅವರು ಈಗ ಒಂದು ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಏನಪ್ಪಾ ಅದು ಸಮಸ್ಯೆ ಅಂತ ಬಹುಶಃ ನಿಮಗೆ ಅನ್ನಿಸಬಹುದು. ಅನುಶ್ರೀ ಅವರು ಅನೇಕ ವಾಹಿನಿಯಲ್ಲಿ ನಿರೂಪಣೆಯನ್ನು ಮಾಡಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಅವರು ಕಾರ್ಯಕ್ರಮಗಳನ್ನು ನಡೆಸಿಕೊಳ್ಳುವ ಪರಿಯನ್ನು ನೋಡಿದರೆ ನಿಜಕ್ಕೂ ಖುಷಿಯಾಗುತ್ತೆ.

ಅವರು ನಡೆಸಿಕೊಡುವ ರಿಯಾಲಿಟಿ ಶೋ ಗಳು ಎಲ್ಲರಿಗೂ ಕೂಡ ಇಷ್ಟವಾಗುತ್ತವೆ. ಅವರಿ ಮಾಡುವ ರಿಯಾಲಿಟಿ ಶೋಗಳು ತುಂಬಾ ಉತ್ತಮ ಮಟ್ಟದಲ್ಲಿ ಹೆಸರನ್ನು ಮಾಡಿರುವುದನ್ನು ಸಹ ನಾವು ನೋಡಬಹುದಾಗಿದೆ. ಇವರು ಪ್ರಸ್ತುತವಾಗಿ ಅನೇಕ ಕಾರ್ಯಕ್ರಮಗಳನ್ನು, ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ನಿರೂಪಣೆಯನ್ನು ಮಾಡುತ್ತಾರೆ. ಅನೇಕ ವಿಶೇಷ ಕಾರ್ಯಕ್ರಮಗಳಿಗೆ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಾರೆ. ಖಾಸಗಿ ವಾಹಿನಿಯಲ್ಲಿ ಸರಿಗಮಪ ಎನ್ನುವ ರಿಯಾಲಿಟಿ ಶೋಗೆ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ರಮವು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಉತ್ತಮ ಪ್ರತಿಭಾವಾನ್ವಿತ ಗಾಯಕರನ್ನು ನಮ್ಮ ಕರುನಾಡಿಗೆ ನೀಡಿದೆ.

ಇದನ್ನು ಹೊರತುಪಡಿಸಿ ಅದೇ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ವಾಕ್ ಚಾತುರ್ಯತೆ, ನಿರೂಪಣಾ ಶೈಲಿ, ಹಾಸ್ಯಪ್ರಜ್ಞೆ ಮತ್ತು ಮಾತಿನ ಮೇಲಿನ ಹಿಡಿತ, ಅವರು ಬಳಸುವಂತ ಶಬ್ದಕೋಶ ಎಲ್ಲರಿಗೂ ಕೂಡ ಇಷ್ಟ ಆಗುತ್ತದೆ. ಇವೆಲ್ಲ ಅಂಶಗಳು ಎಲ್ಲರಿಗೂ ಇಷ್ಟವಾಗುವಂತದ್ದು, ಇದರಿಂದ ಜನರಿಗೆ ಬಹಳ ಆಪ್ತವಾಗಿದ್ದಾರೆ. ಆದರೆ ಇತ್ತೀಚಿಗೆ ತುಂಬಾ ಸುದ್ದಿಯಲ್ಲಿ ಇರುವ ವಿಷಯ ಏನಪ್ಪಾ ಅಂದ್ರೆ ನಮ್ಮ ಚಂದನವನದಲ್ಲಿ ಡ್ರ’ಗ್ಸ್ ಮಾ’ಫಿಯಾದ ಕುರಿತು ಸುದ್ದಿ ಆಗ್ತಾನೆ ಇದೆ.

ಈ ವಿಚಾರದಲ್ಲಿ ಪ್ರತಿದಿನ ಅನೇಕ ವಿಷಯಗಳು ಬೆಳಕಿಗೆ ಬರ್ತಾ ಇದೆ. ಇದು ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿಜಕ್ಕೂ ಕೂಡ ಕುತೂಹಲವಾಗಿ, ಆಶ್ಚರ್ಯಕರವಾಗಿ ಇರುವುದನ್ನು ನಾವು ಕಾಣಬಹುದು. ಅನೇಕ ಜನ ಕಿರುತೆರೆ ನಟರು, ನಟಿಮಣಿಯರು, ಹಿರಿತೆರೆ, ಕಿರುತೆರೆ ನಟಿಯರು ಮತ್ತೆ ನಟರು ಹೀಗೆ ಅನೇಕ ಜನ ವಿಚಾರಣೆಯನ್ನು ಎದುರಿಸಿದ್ದಾರೆ. ಸಿ’ಸಿಬಿ ಅನೇಕ ಜನರಿಗೆ ನೋ’ಟಿಸ್ಗಳನ್ನೂ ಕೊಟ್ಟು ಅವರಿಗೆ ಬೇಕಾದಂತಹ ಅವಶ್ಯಕ ಮಾಹಿತಿಗಳನ್ನು ಅನೇಕ ಸೆಲೆಬ್ರಿಟಿಗಳಿಂದ ಪಡೆದಿದ್ದಾರೆ. ಈ ವಿಷಯ ಇಲ್ಲಿ ಯಾಕೆ ಪ್ರಸ್ತಾಪ ಮಾಡುದ್ದೇನೆ ಅಂತ ಹೇಳಿದ್ರೆ ನಿಮಗೆ ಅದೇ ವಿಷಯ ನಾವು ಇಲ್ಲಿ ಹೇಳಲು ಹೊರಟಿರೋದು.

ಏನಪ್ಪಾ ಇದು ಅಂತ ಅಂದ್ರೆ ಅನುಶ್ರೀ ಅವರಿಗೆ ಸಿ’ಸಿಬಿ ವಿಚಾರಣೆಗೆ ಹಾಜರಾಗುವಂತೆ ಒಂದು ನೋ’ಟಿಸನ್ನು ನೀಡಿದ್ದಾರೆ. ಇದೆ ವಿಷಯದ ಕುರಿತು ಮಾಧ್ಯಮದವರು ಕೇಳಿದಾಗ ಅವರು ಕೆಲವು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಏನೆಂದರೆ ನನಗೆ ಈವರೆಗೂ ಯಾವುದೇ ಕೂಡ ಅಧಿಕೃತವಾಗಿ ನೋಟಿಸ್ ಬಂದಿಲ್ಲ ಎಂದು. ಆದರೆ ಇಂದು ಬಂದಿರುವ ವಿಷಯ ಅವರ ಸಾಮಾಜಿಕ ಜಾಲತಾಣದಲ್ಲಿ ಹೇಳಿರುವುದನ್ನು ನಾವು ಗಮನಿಸಬಹುದು. ಅದರ ಮೂಲಕ ಒಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಅವರೇ ಸ್ವತಃ ನನಗೆ ನೋ’ಟಿಸ್ ಬಂದಿರುವುದು ನಿಜ ಎಂದು ಹೇಳಿದ್ದಾರೆ. ಪತ್ರಿಕಾ ಪ್ರಕಟಣೆ ಪತ್ರದಲ್ಲಿ ಏನಿದೆ ಅಂತ ಹೇಳ್ತೀನಿ ನೋಡಿ. ಮಂಗಳೂರಿನಲ್ಲಿ ಸಿ’ಸಿಬಿ ವಿಚಾರಣೆಗೆ ಹಾಜರಾಗುವಂತೆ ಅಧಿಕೃತವಾಗಿ ನನಗೆ ನೋ’ಟಿಸ್ ಬಂದಿರುವುದು ನಿಜ. ನಾನು ಸೆಪ್ಟೆಂಬರ್ 25, 11:00 ಗಂಟೆಗೆ ನಾನೇ ಖುದ್ದು ಸಿ’ಸಿಬಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಪ್ರಸ್ತುತ ಚರ್ಚೆಯಾಗುತ್ತಿರುವ ವಿಷಯಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.

ವಿಚಾರಣೆಗೆ ಹಾಜರಾಗುವಂತೆ ಹೇಳಿದ ತಕ್ಷಣ ನಾನು ಅ’ಪರಾಧಿಯು ಅಲ್ಲ ಎಂದು ಅವರು ಹೇಳಿದ್ದಾರೆ. ನಾಳೆ ವಿಚಾರಣೆ ಮುಗಿದ ನಂತರ ಮಾಧ್ಯಮಗಳಿಗೆ ನೀಡಬಹುದಾದಂತಹ ಮಾಹಿತಿಗಳನ್ನು ನಾನು ನೀಡುತ್ತೇನೆ. ಪೊಲೀಸರಿಗೆ ಕೂಡ ನಾನು ಸಹಕರಿಸುತ್ತೇನೆ. ಸತ್ಯಾಸತ್ಯತೆಗಳು ವಿಚಾರಣೆಗಳ ಮೂಲಕ ತಿಳಿದುಬರುತ್ತವೆ. ಅವುಗಳು ಬರುವವರೆಗೂ ದಯವಿಟ್ಟು ಸಹಕರಿಸಿ. ಹೀಗೆಂದು ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here