ದುರಾಸೆ ಎಷ್ಟು ಕೆಟ್ಟದ್ದು ಎಂಬುವುದಕ್ಕೆ ಈ ಪುಟ್ಟ ಕಥೆ ಒಂದು ಒಳ್ಳೆಯ ಉದಾಹರಣೆ. ತಪ್ಪದೇ ಒಮ್ಮೆ ಓದಿ.

0
3781

ನಾವು ಅಂದುಕೊಂಡಿದ್ದನ್ನು ಮಾಡಲಿಕ್ಕೆ ಆಗದ ಸನ್ನಿವೇಶ ಪದೇಪದೇ ನಮಗೆ ಎದುರಾಗುತ್ತಲೇ ಇರುತ್ತದೆ. ಸಂಬಂಧವನ್ನು ವ್ಯಕ್ತಿತ್ವವನ್ನು ಇದು ಬಾಧಿಸುತ್ತಲೇ ಹೋಗುತ್ತದೆ. ನೀವೇ ಒಮ್ಮೆ ಯೋಚಿಸಿ ನೋಡಿ. ಹತ್ತು ಇಪ್ಪತ್ತು ವರ್ಷಗಳ ಹಿಂದೆ ಇಂತಹ ಹೊತ್ತಿಗೆ ಇಂತಹ ಜಾಗಕ್ಕೆ ಬರುತ್ತೇನೆ ಎಂದು ಹೇಳಿದರೆ ಅಂತಹ ಹೊತ್ತಿಗೆ ಹೋಗುವುದು ಸಾಧ್ಯವಿತ್ತು. ಆಗ ನಾವು ನಂಬಿಕೊಂಡಿದ್ದು ನಮ್ಮ ಕಾಲ್ನಡಿಗೆಯನ್ನು. ಆದರೆ ಇಂದು ವಿಮಾನ ವೇಗವಾಗಿ ಸಾಗುವುದಕ್ಕೆ ಚತುಷ್ಪಥ ರಸ್ತೆ, ಯಮ ವೇಗದಲ್ಲಿ ಚಲಿಸುವ ಕಾರುಗಳಿದ್ದರೂ ಕೂಡ ಹೇಳಿದ ಸಮಯಕ್ಕೆ ತಲುಪುತ್ತೇವೆ ಅನ್ನುವುದು ಖಾತ್ರಿಯಿಲ್ಲ.

ಎಲ್ಲರೂ ಸ್ವತಂತ್ರರಾಗಿ ಹುಟ್ಟುತ್ತಾರೆ, ನಂತರ ನೋಡಿದರೆ ಕೈಕಾಲುಗಳಿಗೆ ಕೋಳ ಹಾಗೆ ಕೊಂಡಿರುತ್ತಾರೆ ಎನ್ನುವ ಮಾತಿದೆ. ನಮ್ಮ ವಿದ್ಯೆ, ವೃತ್ತಿ, ಆಕಾಂಕ್ಷೆ, ಅಹಂಕಾರ, ಪ್ರತಿಷ್ಠೆ, ಹುದ್ದೆ, ಸಂಬಂಧ ಎಲ್ಲವೂ ನಮ್ಮನ್ನು ಬಂಧಿಸುತ್ತಲೇ ಹೋಗುತ್ತದೆ. ಇವುಗಳಿಂದ ಬಿಡುಗಡೆ ಹೊಂದುತ್ತೇವೆ ಎಂದು ಹೊರಡುವುದು ಕೂಡ ಒಂದು ಬಂಧನವೇ. ಬಿಡುಗಡೆಗಾಗಿ ಹಾತೊರೆಯತೊಡಗಿದ್ದ ನೀವು ಬಂಧನದಲ್ಲಿ ಇದ್ದೀರಿ ಅಂತಲೇ ಅರ್ಥ.

ಹಿಂದೂ ಹೇಗಿರುತ್ತದೆ ಎಂದರೆ ನೀವೇ ಕಂಬವನ್ನು ಗಟ್ಟಿಯಾಗಿ ಅಪ್ಪಿಕೊಂಡು ನನ್ನನ್ನು ಬಿಡಿಸಿ ಎಂದು ಸಹಾಯಕ್ಕಾಗಿ ಕೂಗಿಕೊಂಡಂತೆ. ಕಂಬವನ್ನು ಹಿಡಿದು ಕೊಂಡಿರುವವರು ನೀವೇ. ಹಿಡಿದಿರುವ ಕಂಬವನ್ನು ಬಿಡಬೇಕು ಎಂಬ ಆಸೆ ಇದೆ ಆದರೆ ಬಿಡುವುದಕ್ಕೆ ಭಯ. ಯಾರಾದರೂ ಬಂದು ಬಿಡಿಸಲಿ ಎಂಬ ಆಸೆ. ಇದರ ಕುರಿತು ಒಂದು ಚೆಂದದ ಕಥೆ ಇದೆ.

ಒಬ್ಬ ವ್ಯಕ್ತಿಗೆ ಗುರುವೊಬ್ಬ ಶ್ರೀಮಂತನಾಗುವ ವಿಧಾನ ಹೇಳುತ್ತಾನೆ. ಬೆಟ್ಟದ ದಾರಿಯಲ್ಲಿ ನಡೆಯುತ್ತಾ ಹೋಗು. ಮೊದಲು ಬೆಳ್ಳಿ ಸಿಗುತ್ತದೆ. ನಂತರ ಬಂಗಾರ ಸಿಗುತ್ತದೆ. ಅದಾದ ನಂತರ ಅದಕ್ಕಿಂತಲೂ ಹೆಚ್ಚಿನದು ಸಿಗುತ್ತದೆ. ಹುಡುಕುತ್ತಾ ಹೋಗು ಎಂದು ಹೇಳುತ್ತಾರೆ. ಆತ ಬೆಟ್ಟವನ್ನು ಏರಲು ಶುರು ಮಾಡುತ್ತಾನೆ. ಮೊದಲಿಗೆ ಬೆಳ್ಳಿಯ ನಾಣ್ಯವು ಸಿಗುತ್ತದೆ. ಇದು ನನಗೆ ಬೇಡ ಬಂಗಾರದ ನಾಣ್ಯವೇ ಸಿಗಲಿ ಎಂದು ಮುಂದೆ ಹೋಗುತ್ತಾನೆ.

ಬಂಗಾರದ ಭಂಡಾರವು ಕಾಣಿಸುತ್ತದೆ. ಮುಂದೆ ಇದಕ್ಕಿಂತಲೂ ಹೆಚ್ಚಿನದು ಸಿಗಬಹುದು ಎಂದುಕೊಂಡವನು ಮತ್ತಷ್ಟು ಎತ್ತರಕ್ಕೆ ಹೋಗುತ್ತಾನೆ. ಆಗ ಅಲ್ಲೊಬ್ಬ ಬಿರು ಬಿಸಿಲಿನಲ್ಲಿ ನಿಂತಿರುತ್ತಾನೆ. ಅವನ ನೆತ್ತಿಯ ಮೇಲೆ ಚಕ್ರವನ್ನು ತಿರುಗುತ್ತಾ ಇರುತ್ತದೆ. ಅವನನ್ನು ಈತ ಕೇಳುತ್ತಾನೆ. ಬೆಳ್ಳಿ ಗಿಂತಲೂ ಬಂಗಾರಕ್ಕಿಂತಲೂ ಹೆಚ್ಚಿನದ್ದು ಇಲ್ಲಿ ಏನು ಸಿಗುತ್ತದೆ. ಥಟ್ಟನೆ ಚಕ್ರ ಅವನ ತಲೆಯಿಂದ ಇವನ ನೆತ್ತಿಗೆ ಬಂದು ಕೂರುತ್ತದೆ. ಆತ ಹೇಳುತ್ತಾನೆ, ನಾನು ನಿನ್ನ ಹಾಗೆಯೇ ದುರಾಸೆಯಿಂದ ಇಲ್ಲಿಯವರೆಗೂ ಬಂದಿದ್ದೆ.

ಇನ್ನೊಬ್ಬ ದುರಾಸೆಯ ಮನುಷ್ಯ ಬರುವತನಕ ನಾನು ಕಾಯುತ್ತಿದ್ದೆ. ಹಾಗೆಯೇ ನೀನು ಕೂಡ ಇನ್ನೊಬ್ಬ ದುರಾಸೆಯ ಮನುಷ್ಯ ಬರುವವರೆಗೂ ಕಾಯುತ್ತಿರು ಎಂದು ಹೇಳುತ್ತಾನೆ. ಈಗ ನೀನು ಬಂದು ನನಗೆ ಬಿಡುಗಡೆ ಮಾಡಿದ ಹಾಗೆ ಮತ್ತೊಬ್ಬ ದುರಾಸೆಯ ಮನುಷ್ಯ ಬಂದು ನಿನಗೆ ಬಿಡುಗಡೆ ಮಾಡುತ್ತಾನೆ ಎಂದು ಹೇಳಿ ಆತ ಹಿಂತಿರುಗುತ್ತಾನೆ. ಇಂತಹ ದುರಾಸೆಯ ಚಕ್ರ ನಮ್ಮ ತಲೆಯ ಮೇಲೂ ಸಹ ಕೂರಬಹುದು.

ಆದ್ದರಿಂದ ನಮ್ಮ ಪಾಲಿಗೆ ಬಂದದ್ದನ್ನು ನಾವು ಖುಷಿಯಿಂದ ಸ್ವೀಕರಿಸೋಣ. ದುರಾಸೆ ಎಂದಿಗೂ ಒಳ್ಳೆಯದಲ್ಲ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here