ಮೇಕಪ್ ವೇಳೆಯ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರ. ಸಮಸ್ಯೆ 1 ಲಿಪ್ಸ್ಟಿಕ್ ಸೋರಿಕೆ ಯಾದರೆ ತುಟಿಯ ಮೇಕಪ್ ಎದ್ದು ಹೋಗುತ್ತದೆ : ಮೊದಲನೆಯ ಸಮಸ್ಯೆ ಎಂದರೆ ಲಿಪ್ಸ್ಟಿಕ್ ಸೋರುವುದು. ಇದು ತುಂಬಾ ಮುಜುಗರ ಉಂಟು ಮಾಡುತ್ತದೆ. ಆದರೆ ಹೆಚ್ಚಿನ ಮಹಿಳೆಯರು ಈ ಸಮಸ್ಯೆ ಎದುರಿಸುತ್ತಾರೆ. ಲಿಪ್ಸ್ಟಿಕ್ ಸೋರಿಕೆ ಯಾದರೆ ಸಂಪೂರ್ಣವಾಗಿ ತುಟಿಯ ಮೇಕಪ್ ಹಾಳಾಗುತ್ತದೆ. ಇದರಿಂದ ಮುಖವು ನಿಸ್ತೇಜ ಹಾಗೂ ಕಳೆಗುಂದಿದಂತೆ ಕಾಣಬಹುದು.
ಇದಕ್ಕೆ ಪರಿಹಾರ ಎಂದರೆ ಬಾಯಿಗೆ ಒಂದು ಪೆಪ್ಪರ್ಮೆಂಟ್ ಹಾಕಿಕೊಳ್ಳಿ. ಅದು ಸಿಹಿ ಜ್ಯೂಸನ್ನು ಬಿಡುಗಡೆ ಮಾಡುತ್ತದೆ. ಅದರಿಂದ ಬಾಯಿಯಲ್ಲಿ ತೇವಾಂಶ ಬಂದು ಕುಳಿತುಕೊಳ್ಳುತ್ತದೆ. ಪೆಪ್ಪರ್ಮೆಂಟ್ ನೊಂದಿಗೆ ನಾಲಿಗೆಯು ಆಟವಾಡುತ್ತಿರುವುದರಿಂದ ಲಿಪ್ಸ್ಟಿಕ್ ಸರಿಯಾಗಿ ಉಳಿಯುತ್ತದೆ.
ಸಮಸ್ಯೆ 2 ಕಣ್ಣಿನ ಮೇಕಪ್ ಮಾಡುವ ವೇಳೆ ಕಣ್ಣಿನಿಂದ ನೀರು ಬರುವುದು : ಎರಡನೇ ಸಮಸ್ಯೆ ಎಂದರೆ ಕಣ್ಣಿನ ಮೇಕಪ್ ಮಾಡುವ ವೇಳೆ ಕಣ್ಣಿನಿಂದ ನೀರು ಬರುವುದು. ನೀವು ಕಾಡಿಗೆ, ಐ ಲೈನರ್ ಅಥವಾ ಐ ಪ್ರೈಮರ್ ಬಳಸಬಹುದು. ಆದರೆ ಕಣ್ಣುಗಳು ನೀರಿನಿಂದ ತುಂಬಿದರೆ ಆಗ ಮೇಕಪ್ ಉಳಿಯುವುದಿಲ್ಲ. ಇದರಿಂದ ಕಣ್ಣು ತೆರೆಯಲು ಆಗುವುದಿಲ್ಲ. ಇದು ಪ್ರತಿಯೊಬ್ಬರಿಗೂ ಆಗುತ್ತದೆ. ಇದಕ್ಕೆ ಕಾಟನ್ ಬಡ್ಸ್ ಬಳಸಿ.
ಕಾಟನ್ ಬಡ್ಡನ್ನು ಮೂಗಿನ ಹತ್ತಿರ ಕಣ್ಣಿನ ಬದಿಯಲ್ಲಿ ತುಂಬಾ ಎಚ್ಚರಿಕೆಯಿಂದ ಇಟ್ಟುಬಿಡಿ ಹತ್ತಿಯು ಕಣ್ಣಿನ ಹೆಚ್ಚುವರಿ ನೀರನ್ನು ಹೀರಿಕೊಳ್ಳುತ್ತದೆ. ಇದರಿಂದ ಕಣ್ಣನ್ನು ಆರಾಮವಾಗಿ ತೆರೆಯಬಹುದು. ಇದರ ಬಳಿಕ ಮೇಕಪ್ ಮಾಡಿಕೊಳ್ಳಬಹುದು.
ಸಮಸ್ಯೆ 3 ಮುಖಕ್ಕೆ ಹಾಕುವಂತಹ ಫೌಂಡೇಶನ್ ಸಂಪೂರ್ಣವಾಗಿ ಅಸ್ತವ್ಯಸ್ತ ಗೊಳ್ಳುವುದು : ಮೂರನೇ ಸಮಸ್ಯೆ ಎಂದರೆ ಮುಖಕ್ಕೆ ಹಾಕುವಂತಹ ಫೌಂಡೇಶನ್ ಸಂಪೂರ್ಣವಾಗಿ ಅಸ್ತವ್ಯಸ್ತ ಗೊಳ್ಳುವುದು. ಇದರಿಂದ ಮೇಕಪ್ ಮಾಡಿಕೊಳ್ಳುವುದು ಕಷ್ಟ ಆಗುತ್ತದೆ. ಹಾಗಾಗಿ ಫೌಂಡೇಶನ್ ಹರಡಲು ಒಳ್ಳೆಯ ಮೇಕಪ್ ನ ಮೂಲ ಒದಗಿಸಿ ಕೊಡಿ. ಫೌಂಡೇಶನ್ ಬಳಸುವ ಮೊದಲು ನೀವು ಒಳ್ಳೆಯ ಪ್ರೈಮರ್ ಬಳಸಿ.
ಸಿಲಿಕಾನ್ ಪ್ರೈಮರ್ ಒಳ್ಳೆಯದು ಇದು ಮೇಕಪ್ ನ ಮೂಲ ವಾಗಿರಲಿ. ಇದನ್ನು ಹಚ್ಚಿಕೊಂಡರೆ ಫೌಂಡೇಶನ್ ಅಸ್ತವ್ಯಸ್ತವಾಗುವುದು ತಪ್ಪುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.