ಚಾರ್ವಿ ಅವರು ಹುಟ್ಟಿದ್ದು ಬೆಳೆದಿದ್ದೆಲ್ಲ ಎಲ್ಲಿ.
ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲ ಶಿವಮೊಗ್ಗದಲ್ಲಿ. ಬಾಲ್ಯದಿಂದಲೂ ನಮ್ಮ ಕುಟುಂಬದ ಬೆಂಬಲ ನನಗೆ ಯಾವಾಗಲೂ ಇರುವುದರಿಂದ ನಾನು ನನ್ನ ಅಣ್ಣನ ಜೊತೆ ಹಾಗೂ ನನ್ನ ತಾಯಿಯ ಜೊತೆ ಶಿವಮೊಗ್ಗದಲ್ಲಿ ನೆಲೆಸಿದ್ದೇನೆ. ಹಾಗೂ ನಾನು ನನ್ನ ಬಿಕಾಂ ಕಂಪ್ಲೀಟ್ ಮಾಡಿಕೊಂಡಿದ್ದೇನೆ.
ಸಂಗೀತದ ವಲಯಕ್ಕೆ ಸಂಬಂಧಿಸಿದ ಹಾಗೆ ಚಾರ್ವಿ ಅವರ ಮನೆಯಲ್ಲಿ ತೋರುವ ಒಲವು ಹಾಗೂ ಬೆಂಬಲ ಹೇಗಿದೆ.
ನಾನು ಸರಿಸುಮಾರು 15 ರಿಂದ 16 ವರ್ಷಗಳಿಂದ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದೇನೆ. ಇತ್ತೀಚೆಗೆ ಕಳೆದ ನಾಲ್ಕೈದು ವರ್ಷಗಳಿಂದ ವೆಸ್ಟ್ರನ್ ಹಾಗೂ ಜಾನಪದ ಗೀತೆಗಳನ್ನು ಕೂಡ ಅಭ್ಯಾಸ ಮಾಡುತ್ತಿದ್ದೇನೆ. ನನ್ನ ಸಹೋದರ ಕೂಡ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್. ನಮ್ಮ ತಂದೆ ದಿವಂಗತ ಕೆ ಎಸ್ ಮುರಳೀಧರ್ ಕೂಡ ಬಹಳ ಸೊಗಸಾಗಿ ಗಿಟಾರ್ ವಾದನವನ್ನು ನುಡಿಸುತ್ತಿದ್ದರು. ಹಾಗಾಗಿ ನಮ್ಮ ಮನೆಯಲ್ಲಿ ಕೇವಲ ಸಂಗೀತಕ್ಕಷ್ಟೇ ಅಲ್ಲದೆ ಯಾವುದೇ ವಿಚಾರವನ್ನು ನಾನು ಕೈಗೆತ್ತಿಕೊಳ್ಳಲು ಬಯಸಿದರೆ ಅದಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ಬಾಲ್ಯದಲ್ಲೇ ನನ್ನ ಧ್ವನಿ ಮಧುರವಾಗಿದೆ ಎಂದು ಗುರುತಿಸಿದ ನನ್ನ ತಂದೆ ತಾಯಿ, ನಂತರ ನನ್ನನ್ನು ಶೃಂಗೇರಿಯ ಖ್ಯಾತ ಸಂಗೀತಗಾರರಾದ ಹೆಚ್ ಎಸ್ ನಾಗರಾಜ್ ಅವರ ಬಳಿ ಸಂಗೀತ ಅಭ್ಯಾಸಕ್ಕಾಗಿ ಕಳುಹಿಸಿದರು.
ಅಣ್ಣನ ಸಂಗೀತ ಸಂಯೋಜನೆ ಹಾಗೂ ತಂಗಿಯ ಸಂಗೀತ ಜಾದು ಮಾಡಿದ್ದೆನಾದರೂ ಇದೆಯೇ.
ಅಣ್ಣನ ಜೊತೆ ಒಡಗೂಡಿ ಒಂದು ಅತ್ಯುತ್ತಮ ಗೀತೆ ಆದಷ್ಟು ಬೇಗ ಹೊರಬರಲಿದೆ. ಅಣ್ಣ ಹಲವಾರು ಚಿತ್ರಗಳಿಗೆ ಟ್ರಾಕ್ ಹಾಡನ್ನು ರೆಡಿ ಮಾಡುವ ಸಂದರ್ಭದಲ್ಲಿ ನಾನು ಅವನ ಚಿತ್ರಗಳಿಗೆ ಟ್ರ್ಯಾಕ್ ಹಾಡುತ್ತಿರುತ್ತೇನೆ. ಹಲವಾರು ಕಾರ್ಯಕ್ರಮಗಳಲ್ಲಿ ಹಾಗೂ ಸಂಗೀತ ರಚನೆಯಲ್ಲಿ ನಾನು ಕೂಡ ಅವನಿಗೆ ಸಾಥ್ ಕೊಟ್ಟಿದ್ದೇನೆ.
ಚಾರ್ವಿ ಅವರ ಸಾಧನೆಗಳು.
ನಾನು ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ಹಾಗೂ ಸೀನಿಯರ್ ಎರಡು ವಿಭಾಗದಲ್ಲಿಯೂ ಕೂಡ ಪ್ರಥಮ ರಾಂಕ್ ಅನ್ನು ಪಡೆದಿದ್ದೇನೆ. ಹನ್ನೆರಡು ವರ್ಷಗಳ ಕಾಲ ಭರತನಾಟ್ಯವನ್ನು ಕೂಡ ಅಭ್ಯಾಸ ಮಾಡಿದ್ದೇನೆ. ಈಚೆ ಭರತನಾಟ್ಯ ಆಚೆ ಸಂಗೀತ ಎರಡರ ಮೇಲೂ ಕಾಲಿಟ್ಟಿದ್ದ ನಾನು ಆ ಸಂದರ್ಭದಲ್ಲಿ ಯಾವುದಾದರೂ ಒಂದರ ಮೇಲೆ ಕಾಲಿಡಬೇಕು ಎಂದು ನಿರ್ಧರಿಸಿ ಸಂಗೀತವನ್ನು ಆಯ್ಕೆ ಮಾಡಿಕೊಂಡೆ. ಅಷ್ಟೇ ಅಲ್ಲದೆ ರೇಡಿಯೋ ಸಿಟಿ ಸೂಪರ್ ಸಿಂಗರ್ ಸೀಸನ್ ಹತ್ತರ ಆವೃತ್ತಿಯಲ್ಲಿ ನಾನು ರನ್ನರ್-ಅಪ್ ಕೂಡ ಆಗಿದ್ದೆ. ಸರಿ ಸುಮಾರು ನೂರರಿಂದ ಇನ್ನೂರು ಕಾರ್ಯಕ್ರಮಗಳನ್ನು ನೀಡಿದ್ದೇನೆ. ಶಾರದಾ ಪೀಠದಲ್ಲಿ ಶಾಸ್ತ್ರೀಯ ಸಂಗೀತ ಕಛೇರಿಯನ್ನು ಕೂಡ ನೀಡಿದ್ದೇನೆ. ಮಿಕ್ಕಂತೆ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿದ್ದೇನೆ.
ಮನೆಯಲ್ಲಿರುವ ಪೋಷಕರು ಹೇಗೆ ಸಹಾಯ ಮಾಡುತ್ತಾರೆ.
ನಮ್ಮ ತಂದೆಯವರು ದೈವಾದೀನರಾಗಿ ಸುಮಾರು ಐದು ವರ್ಷಗಳಾಯ್ತು. ಆದರೆ ನಮ್ಮ ತಾಯಿಯೇ ನಮಗೆ ಬೆನ್ನೆಲುಬು. ನಮ್ಮದೇ ಆದ ಸೈಕಲ್ ಮಾರಾಟ ಮಳಿಗೆ ಕೂಡ ಇದೆ. ನಮ್ಮ ತಾಯಿ ಅದನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಾರೆ ಹಾಗೂ ನಾವು ಕೂಡ ಅವರಿಗೆ ಸಹಾಯ ಮಾಡುತ್ತೇವೆ. ನಮ್ಮ ಕುಟುಂಬದ ಬಿಸಿನೆಸ್ ಸರಿ ಸುಮಾರು 65 ವರ್ಷಗಳಿಂದಲೂ ಇದೆ. ನಮ್ಮ ತಂದೆ ತಾಯಿ ನನ್ನ ಅಣ್ಣ,ಅತ್ತಿಗೆ ನಾನು ಏನು ಕೇಳಿದರೂ ಇಲ್ಲ ಎನ್ನದೆ ಸಂಪೂರ್ಣ ಬೆಂಬಲವಾಗಿ ನಿಲ್ಲುತ್ತಾರೆ. ನನ್ನ ಮೇಲೆ ಅವರು ಇಟ್ಟಿರುವ ಈ ಅಗಾಧ ನಂಬಿಕೆಯನ್ನು ಉಳಿಸಿಕೊಳ್ಳುವುದಕ್ಕೆ ನಾನು ಇಂದಿಗೂ ಎಷ್ಟೇ ಕಠಿಣವಾಗಿದ್ದರೂ ಶ್ರಮ ಪಡುವುದಕ್ಕೆ ತಯಾರಿದ್ದೇನೆ.
ಈಗ ಕೈಗೆತ್ತಿಕೊಂಡಿರುವ ಹೊಸ ಕಾರ್ಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬ ಪ್ರಶ್ನೆಗೆ ಚಾರ್ವಿ ಅವರ ಉತ್ತರ ಹೀಗಿದೆ.
ನನಗೆ ಸುಮಾರು ವರ್ಷಗಳಿಂದಲೂ ಮೇಕಪ್ ಹಾಗೂ ಉಗುರುಗಳ ಅಲಂಕಾರ ಅಂದರೆ ನೈಲ್ ಆರ್ಟ್ ಬಗ್ಗೆ ಬಹಳಷ್ಟು ಆಸಕ್ತಿಯಿತ್ತು. ಸರಿ ಸುಮಾರು ಎರಡು ಮೂರು ವರ್ಷಗಳಿಂದಲೂ ನಾನು ಮೇಕಪ್ ಕ್ಲಾಸಿಗೆ ಸೇರಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ ಕೋ’ವಿಡ್ ಕಾರಣದಿಂದ ನನಗೆ ಅದು ಸಾಧ್ಯವಾಗಿರಲಿಲ್ಲ. ಇನ್ನಷ್ಟು ದಿನ ತಡ ಮಾಡಿದರೆ ಸರಿ ಹೋಗುವುದಿಲ್ಲ ಎಂದು ನಾನು ಮೇಕಪ್ ಹಾಗೂ ನೇಲ್ ಆರ್ಟ್ ಎರಡನ್ನು ಕಲಿತು ಅದರಲ್ಲಿ ಸರ್ಟಿಫಿಕೇಟ್ ಪಡೆದು ಸ್ಟುಡಿಯೋವನ್ನು ಸ್ಥಾಪಿಸಿದ್ದೇನೆ. ನಮ್ಮದೇ ಆದ ಸ್ವಂತ ಕಟ್ಟಡದಲ್ಲಿ ಸರಿ ಸುಮಾರು 600 ಚದರಡಿಯ ಜಾಗದಲ್ಲಿ ನಾನು ಸಿಲ್ವರ್ ಲೈನ್ ಎಂಬ ಸಲೂನ್ ಅನ್ನು ಪ್ರಾರಂಭಿಸಿದ್ದೇನೆ.
ಇಡೀ ಶಿವಮೊಗ್ಗದಲ್ಲಿ ನನ್ನ ನೈಲ್ ಹಾಗೂ ಮೇಕಪ್ ಸ್ಟುಡಿಯೋ ಪ್ರಥಮ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಶಿವಮೊಗ್ಗದಲ್ಲಿ ಪಾರ್ಲರ್ ಗಳು ಸಾಕಷ್ಟಿದೆ ಆದರೆ ಪ್ರೊಫೆಷನಲ್ ಸ್ಟುಡಿಯೋ ಇಲ್ಲ. ಚಿಕ್ಕಂದಿನಿಂದಲೂ ನನಗೆ ಮೇಕಪ್ ಮಾಡುವುದು ಹಾಗೂ ಮಾಡಿಕೊಳ್ಳುವುದು ಎಂದರೆ ಬಹಳ ಇಷ್ಟ. ಈ ಪ್ಯಾಶನ್, ಪ್ರೊಫೆಷನ್ ಆಗಿ ಬದಲಾಯಿತು. ನಮ್ಮ ಗ್ರಾಹಕರು ಅವರ ವಿಶೇಷ ದಿನಗಳಂದು ಅಂದರೆ ಮದುವೆ ಹಾಗು ವಿವಿಧ ಸಮಾರಂಭಗಳಿಗೆ ನಮ್ಮ ಸ್ಟುಡಿಯೋಗೆ ಬಂದು ಅಲಂಕಾರ ಮಾಡಿಸಿಕೊಳ್ಳುತ್ತಾರೆ.
ಶಿವಮೊಗ್ಗದಲ್ಲಿ ಉಗುರುಗಳಿಗಾಗಿ ವಿಶೇಷವಾಗಿ ಕಾಳಜಿವಹಿಸುವ, ಹಾಗೂ ಅಮೋಘ ಕ್ವಾಲಿಟಿ ಮೇಕ್ ಓವರ್ ಬಯಸುವ ಮಹಿಳೆಯರಿಗೆ ಇದು ಅತ್ಯುತ್ತಮ ಸ್ಥಳವಾಗಿದೆ. ಈಗಾಗಲೇ ಅಧಿಕ ಸ್ಲಾಟ್ಗಳು ಬುಕ್ ಆಗುತ್ತಿದ್ದು, ನಮಗೆ ಬಹಳ ಸಂತೋಷ ತಂದಿದೆ.
ಹೊಸ ಮೇಕಪ್ ಹಾಗೂ ಉಗುರುಗಳ ಆರೈಕೆಯ ಸ್ಟುಡಿಯೋ ಬಗ್ಗೆ ಪೋಷಕರ ಅಭಿಪ್ರಾಯ.
ಮನೆಯಲ್ಲಿ ಹೀಗೆ ಹೊಸ ಸ್ಟುಡಿಯೋವನ್ನು ತೆರೆಯುತ್ತೇನೆ ಎಂದಾಗ ನನ್ನ ತಾಯಿ ಸ್ವಲ್ಪ ಯೋಚಿಸುತ್ತಿದ್ದರು. ಆದರೆ ನನ್ನ ಅಣ್ಣ ಹಾಗೂ ನನ್ನ ಅತ್ತಿಗೆ ಮಾಧುರಿ ಪರಶುರಾಮ್ ಹಾಗೂ ರಿತ್ವಿಕ್ ಮುರಳಿಧರ್ ಬೆಂಬಲದಿಂದ ನಾನು ಏನೇ ಮಾಡಿದರು “ನನ್ನಿಂದ ಹೇಗೆ ಸಹಾಯವಾಗಬೇಕು ಹೇಳು” ಎಂದು ನನ್ನ ಅಣ್ಣ ನನ್ನ ಬೆನ್ನೆಲುಬಾಗಿ ನಿಲ್ಲುತ್ತಾರೆ.
ಇದರಿಂದಾಗಿಯೇ ನಾನು ಸ್ಟುಡಿಯೋವನ್ನು ಪ್ರಾರಂಭಿಸಿ ಕೇವಲ ಏಳೇ ದಿನಗಳಲ್ಲಿ ಸಾಕಷ್ಟು ಅಪಾಯಿಂಟ್ಮೆಂಟ್ ಗಳು ಬಂದಿವೆ. ಸ್ಲಾಟ್ಗಳು ಬಹಳ ಬೇಗನೆ ಬುಕ್ ಆಗುತ್ತಿದೆ. ನಮ್ಮ ತಾಯಿಯ ಮನಸ್ಸಿನಲ್ಲಿ ಸ್ವಲ್ಪ ಗೊಂದಲವಿತ್ತು ಆದರೂ ಸಹ ನನ್ನ ಆತ್ಮಸ್ಥೈರ್ಯದಿಂದ ನಾನು ಛಲವನ್ನು ಬಿಡದೆ ಸ್ಟುಡಿಯೋವನ್ನು ಸ್ಥಾಪಿಸಿ ಒಂದೇ ವಾರದಲ್ಲಿ ಅತ್ಯುನ್ನತ ರೆಸ್ಪಾನ್ಸ್ ಪಡೆಯುತ್ತಿದ್ದೇನೆ. ಇಂತಹ ಒಂದು ಪ್ರೀತಿಭರಿತ ಕುಟುಂಬವನ್ನು ಪಡೆಯುವುದಕ್ಕೆ ನಾನು ಆಭಾರಿಯಾಗಿದ್ದೇನೆ.
ಈಗ ನನ್ನ ಸ್ಟುಡಿಯೋ ಹೇಗೆ ನಡೆದುಕೊಂಡು ಹೋಗುತ್ತಿದೆ ಹಾಗೆ ಮುಂದೆಯೂ ಕೂಡ ನಡೆದುಕೊಂಡು ಹೋಗುತ್ತದೆ ಎಂಬ ಭರವಸೆ ನನ್ನಲ್ಲಿದೆ.
ನಿಮ್ಮ ಹೊಸ ಸಲೂನ್ ಹೇಗೆ ಆಯೋಜನೆಗೊಂಡಿದೆ.
ನನ್ನ ಸ್ಟುಡಿಯೋದ ಹೆಸರು ಸಿಲ್ವರ್ ಲೈನ್ ಎಂದು. ಬಹಳ ಸೂಕ್ಷ್ಮವಾಗಿ ನನ್ನ ಸ್ಟುಡಿಯೋವನ್ನು ಅತಿ ಸುಂದರವಾಗಿ ಡಿಸೈನ್ ಮಾಡಿಕೊಂಡಿದ್ದೇನೆ. ಇಂತಹ ಸ್ಟುಡಿಯೋ ಶಿವಮೊಗ್ಗದಲ್ಲಿ ಇಷ್ಟು ದಿನ ಇರದೇ ಈಗ ನಮ್ಮದೇ ಮೊದಲು ಎಂದು ಹೇಳಿಕೊಳ್ಳಲು ನನಗೆ ಬಹಳ ಹೆಮ್ಮೆಯಾಗುತ್ತದೆ. ಇದು ಶಿವಮೊಗ್ಗದಲ್ಲಿ ಪ್ರಥಮ ಎಂಬ ಹೆಗ್ಗಳಿಕೆಗೆ ನಮ್ಮ ಸ್ಟುಡಿಯೋ ಪಾತ್ರವಾಗುತ್ತದೆ.
ಒಳಗಿನ ಇಂಟೀರಿಯರ್ ಡೆಕೋರೇಷನ್ ಕೂಡ ಬಹಳ ಚೆನ್ನಾಗಿ ಮೂಡಿಬಂದಿದೆ. ಬೇರೆಯವರ ರೀತಿ ಸ್ಟುಡಿಯೋವನ್ನು ಅಲಂಕರಿಸಿ ಮೇಕಪ್ ಕ್ವಾಲಿಟಿ ಯನ್ನು ಕಳಪೆಯಾಗಿ ಕೊಡುವ ಸ್ಟುಡಿಯೋ ನಮ್ಮದಲ್ಲ. ಸ್ಟುಡಿಯೋ ನೋಡುವುದಕ್ಕೆ ಎಷ್ಟು ಚೆನ್ನಾಗಿದೆಯೋ ಅದಕ್ಕೂ ಎರಡು ಪಟ್ಟು ಅತ್ಯುನ್ನತ ಕ್ವಾಲಿಟಿ ಸೇವೆಯನ್ನು ನಮ್ಮ ಸ್ಟುಡಿಯೋ ನೀಡುತ್ತದೆ. ಸಂಗೀತ ಹಾಗೂ ಸ್ಟುಡಿಯೋ ಈಗ ನನ್ನ ಜೀವಾಳವಾಗಿದೆ. ಸಂಗೀತ ತರಗತಿಗಳನ್ನು ತಪ್ಪಿಸದೆ ನಾನು ಎರಡನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದೇನೆ.
ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳಿಗೂ ಸಹ ನಾನು ಇಲ್ಲಿಂದಲೇ ಅತಿವೇಗವಾಗಿ ತಲುಪಿ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗುತ್ತೇನೆ. ಸಂತೋಷವೆಂಬಂತೆ ನಮ್ಮ ಸ್ಟುಡಿಯೋದ ಬುಕಿಂಗ್ ನವೆಂಬರ್ ವರೆಗೂ ಕೂಡ ಆಗಿಹೋಗಿದೆ.
ಚಾರ್ವಿ ಅವರ ಮುಂದಿನ ಉದ್ದೇಶಗಳು ಹೀಗಿವೆ. “ಕೇವಲ ನಾನು ಸ್ಟುಡಿಯೋ ತೆರೆಯುವುದಕ್ಕೆ ಅಲ್ಲದೆ ಉಗುರಿನ ಪೋಷಣೆಯ ಹಾಗೂ ಉಗುರಿನ ಅಲಂಕಾರದ ಬಗ್ಗೆ ಆಸಕ್ತಿ ಇರುವ ಮಹಿಳೆಯರಿಗೂ ಸಹ ಹೇಳಿಕೊಡಬೇಕು ಎಂಬ ಹೆಬ್ಬಯಕೆ ನನಗಿದೆ”.
ಯಾವುದೇ ಸ್ವಾರ್ಥವಿಲ್ಲದೆ ಒಬ್ಬ ಒಳ್ಳೆಯ ಗುರುವಾಗಿ ವಿದ್ಯೆ ಕಲಿಸಬೇಕು ಎಂಬ ಬಯಕೆಯು ಕೂಡ ಇದೆ. ಬೆಂಗಳೂರಿನ ಖ್ಯಾತ ಸ್ಟುಡಿಯೋ ಆದ ಡಿವೈನ್ ಸ್ಟುಡಿಯೋದಲ್ಲಿ ನಾನು ಟೆಕ್ನಿಕಲ್ ಕೋರ್ಸನ್ನು ಕಲಿತುಕೊಂಡೆ. ನಂತರ ಸಾಂಚಿತ ನಾಯಕ್ ಅವರ ಬಳಿ ಮೇಕಪ್ ಕಲಿತುಕೊಂಡೆ. ಅವರು ಹೇಗೆ ನನಗೆ ವಿದ್ಯೆ ಕಲಿಸಿಕೊಟ್ಟರೋ ಅದೇ ರೀತಿಯಾಗಿ ನನ್ನ ಬಳಿ ಬರುವ ಆಸಕ್ತರಿಗೂ ಕೂಡ ನಾನು ಕಲಿಸಿ ಕೂಡಬೇಕೆಂಬ ಆಸೆ ಇದೆ. ಇದೆಯೋ ಅದರಲ್ಲೇ ಅವರನ್ನು ಅದ್ಭುತವಾಗಿ ಕಾಣುವಂತೆ ಮಾಡುವ ಮಹೋನ್ನತ ಉದ್ದೇಶ ನನ್ನದಾಗಿದೆ.
ಒಟ್ಟಾರೆ ನಮ್ಮ ತಂದೆ ಹಾಗೂ ನಮ್ಮ ತಾತನವರಂತೆ ಉದ್ಯಮದಲ್ಲಿ ಅವರ ಹೆಸರನ್ನು ಇನ್ನೂ ಬಹಳಷ್ಟು ಪ್ರಖ್ಯಾತಿಗೊಳಿಸಬೇಕೆಂಬ ಉದ್ದೇಶ ನನ್ನದಾಗಿದೆ.
ಚಾರ್ವಿ ಅವರಿಗೆ ಅವರ ಸ್ನೇಹಿತರು ಹಾಗೂ ಬಂಧು ಮಿತ್ರರು ಹೇಗೆ ಬೆಂಬಲವಾಗಿ ನಿಲ್ಲುತ್ತಾರೆ.
ನನ್ನ ಮಿತ್ರವೃಂದ ಹಾಗೂ ನನ್ನ ಸಹಪಾಠಿಗಳು ಎಲ್ಲರೂ ಕೂಡ ಬಹಳಷ್ಟು ಸಪೋರ್ಟಿವ್ ಆಗಿದ್ದಾರೆ. ಪ್ರತಿಯೊಂದು ಸೂಕ್ಷ್ಮ ವಿಚಾರದಲ್ಲಿ ಕೂಡ ನನ್ನ ಒಡಹುಟ್ಟಿದವರಂತೆ ಅವರು ಬಹಳಷ್ಟು ವಿಚಾರಗಳನ್ನು ಹಂಚಿಕೊಂಡು ಸಲಹೆಗಳನ್ನು ನೀಡುತ್ತಾರೆ.
ಅವರು ನೀಡಿದ ಮಾಹಿತಿಯಿಂದ ನಾನು ಸಫಲವಾಗಿದ್ದೇನೆ. ಯಾವುದೇ ಕ್ಷೇತ್ರವಾದರೂ ಅದರಲ್ಲಿ ಸ್ಪರ್ಧೆ ಇದ್ದೇ ಇರುತ್ತದೆ. ಹಾಗೆಯೇ ಕೆಳಗೆ ಬೀಳಿಸುವವರು, ಕೈಹಿಡಿದು ಮೇಲೆತ್ತುವವರು ಇದ್ದೇ ಇರುತ್ತಾರೆ. ನನ್ನ ಈ ಒಂದು ವಿಶಿಷ್ಟವಾದ ಪ್ರಯತ್ನಕ್ಕೆ ಶಿವಮೊಗ್ಗದಲ್ಲಿ ಉನ್ನತ ರೆಸ್ಪಾನ್ಸ್ ಬರುತ್ತಿರುವುದು ನನಗೆ ಸಾಕಷ್ಟು ಸಂತೋಷವನ್ನು ತಂದಿದೆ. ಒಟ್ಟಾರೆ ಕೈಗೆಟುಕುವ ದರದಲ್ಲಿ ಶಿವಮೊಗ್ಗವಷ್ಟೇ ಅಲ್ಲದೆ ಇತರೆ ಜಿಲ್ಲೆಗಳ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನನ್ನ ಸ್ಟುಡಿಯೋದೆಡೆಗೆ ಜನ ಒಮ್ಮೆ ತಿರುಗಿ ನೋಡುವಂತೆ ಮಾಡುವ ಉದ್ದೇಶ ನನ್ನದಾಗಿದೆ.