ಅನಾನಸ್‌ ತಿಂದರೆ 22 ಆರೋಗ್ಯ ಲಾಭ. ತಪ್ಪದೆ ಓದಿ.

0
3146

ಅನಾನಸ್‌ ತಿಂದರೆ 22 ಆರೋಗ್ಯ ಲಾಭ. ಅನಾನಸ್‌ ತುಂಬಾ ಆರೋಗ್ಯಕರವಾದ ಹಣ್ಣಾಗಿದ್ದು ಇದನ್ನು ಆಹಾರಕ್ರಮದಲ್ಲಿ ಸೇರಿಸಿದರೆ ಕೆಮ್ಮು, ಶೀತ, ಅಸ್ತಮಾ ಮುಂತಾದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವುದರ ಜತೆಗೆ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದು. ಅನಾನಸ್ ಹಣ್ಣನ್ನು ಇಷ್ಟಪಡದವರು ತುಂಬಾ ವಿರಳ, ಈ ಹಣ್ಣಿನಿಂದ ಸಲಾಡ್, ಹೋಳಿಗೆ, ಉಪ್ಪಿನಕಾಯಿ, ಜಾಮ್, ಜ್ಯೂಸ್, ಸಾರು, ಐಸ್‌ಕ್ರೀಮ್ ಹೀಗೆ ನಾನಾ ರುಚಿಯ ಆಹಾರ ಮಾಡಿ ಸವಿಯಬಹುದು.

ಈ ಹಣ್ಣು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಲ್ಲಿ ಜೀರೋ ಕೊಲೆಸ್ಟ್ರಾಲ್, ವಿಟಮಿನ್ ಎ, ಬಿ, ಸಿ, ಪೊಟಾಷ್ಯಿಯಂ, ಮ್ಯಾಂಗನೀಸ್, ಸತು ಹಾಗೂ ದೇಹಕ್ಕೆ ಅಗ್ಯತವಾದ ಇತರ ಖನಿಜಾಂಶಗಳಿದ್ದು ಇದನ್ನು ತಿನ್ನುವುದರಿಂದ ಅನೇಕ ಆರೋಗ್ಯಕರ ಗುಣಗಳನ್ನು ಪಡೆಯಬಹುದಾಗಿದ್ದು ಇಲ್ಲಿ ಅನಾನಸ್‌ನ 22 ಆರೋಗ್ಯವರ್ಧಕ ಗುಣಗಳ ಬಗ್ಗೆ ಹೇಳಲಾಗಿದೆ ನೋಡಿ.

1. ರೋಗ ನಿರೋಧಕ ಶಕ್ತಿ ಹೆಚ್ಚುವುದು : ಅನಾನಸ್‌ನಲ್ಲಿ ವಿಟಮಿನ್ ಸಿ ಇರುವುದರಿಂದ ಜೀವಕಣಗಳು ಹಾನಿಯಾಗುವುದನ್ನು ತಡೆಗಟ್ಟಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ದೇಹಕ್ಕೆ ವಿಟಮಿನ್ ಸಿ ದೊರೆಯುವುದರಿಂದ ಸಂಧಿವಾತ, ಹೃದಯ ಸಮಸ್ಯೆ ಉಂಟಾಗದಂತೆ ದೇಹವನ್ನು ರಕ್ಷಣೆ ಮಾಡುತ್ತದೆ.

2. ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು : ಅನಾನಸ್‌ನಲ್ಲಿ ವಿಟಮಿನ್ ಸಿ ಜತೆಗೆ ಸಾಕಷ್ಟು ಪ್ರಮಾಣದಲ್ಲಿ ಮ್ಯಾಂಗನೀಸ್ ಇರುವುದರಿಂದ ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ ಹಾಗೂ ಅದಕ್ಕೆ ಸಂಬಂಧಿಸಿದ ನರಗಳು ಹಾಣಿಯಾಗದಂತೆ ತಡೆಯುತ್ತದೆ. ಮೆನೋಪಾಸ್ ಬಳಿಕ ಮಹಿಳೆಯರಲ್ಲಿ ಮಂಡಿನೋವಿನ ಸಮಸ್ಯೆ ಕಂಡು ಬರುತ್ತದೆ, ಇದನ್ನು ತಡೆಗಟ್ಟುವಲ್ಲಿ ಮ್ಯಾಂಗನೀಸ್ ಸಹಕಾರಿ. ದೇಹಕ್ಕೆ ಅಗ್ಯತವಿರುವ ಮ್ಯಾಂಗನೀಸ್‌ನಲ್ಲಿ ಶೇ.70 ರಷ್ಟು ಖನಿಜಾಂಶ ಒಂದು ಕಪ್ ಅನಾನಸ್ ರಸ ಕುಡಿಯುವುದರಿಂದ ದೊರೆಯುವುದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ದಿನಾ ಸ್ವಲ್ಪ ಪೈನಾಪಲ್ ತಿನ್ನುವುದು ಒಳ್ಳೆಯದು.

3. ಸೈನಸ್ ನಿವಾರಣೆಗೆ ಪರಿಣಾಮಕಾರಿಯಾದ ಮನೆಮದ್ದು : ಮೂಗು ಕಟ್ಟಿ ತಲೆನೋವು ಕಾಣಿಸಿಕೊಂಡಿದ್ದರೆ ಇದನ್ನು ಹೋಗಲಾಡಿಸಲು ಪೈನಾಪಲ್ ತಿನ್ನಿ. ಇದರಲ್ಲಿರುವ ಬ್ರೊಮೆಲೈನ್ ಮೂಗುಕಟ್ಟುವುದನ್ನು ತಡೆಗಟ್ಟಿ ತಲೆನೋವು ಉಂಟಾಗದಂತೆ ತಡೆಯುತ್ತದೆ. 4. ರ’ಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ : ಪೈನಾಪಲ್ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುವುದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

5. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ : ಅನಾನಸ್‌ನಲ್ಲಿ ವಿಟಮಿನ್ ಬಿ ಇದ್ದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ತುಂಬಾ ಮಾನಸಿಕ ಒತ್ತಡವಿದ್ದಾಗ ಒಂದು ಬೌಲ್ ಅನಾನಸ್ ತಿನ್ನಿ, ನಿಮ್ಮ ಆಲೋಚನೆಗಳನ್ನು ಹೊರದೂಡಿ, ನಿಮ್ಮನ್ನು ರಿಲ್ಯಾಕ್ಸ್ ಮಾಡುವುದು.

6. ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು : ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಹಾಗೂ ವಿಟಮಿನ್ ಸಿ ಇದ್ದು ಮ್ಯಾಕ್ಯೂಲರ್ ಡಿಜನರೇಷನ್( ದೃಷ್ಟಿದೋಷ ತರುವ ಕಾಯಿಲೆ) ಎಂಬ ಸಮಸ್ಯೆ ಉಂಟಾಗುವುದನ್ನು ತಡೆಯುತ್ತದೆ. ಇದರಲ್ಲಿ ಬೀಟಾ ಕೆರೋಟಿನ್ ಅಂಶವಿದ್ದು ದಿನಾ ಆಹಾರಕ್ರಮದಲ್ಲಿ ಸೇರಿಸುವುದರಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

7. ಶೀತ ಹಾಗೂ ಕೆಮ್ಮಿಗೆ ಉತ್ತಮವಾದ ಮನೆಮದ್ದು : ಅನಾನಸ್‌ನಲ್ಲಿ ಬ್ರೊಮೆಲೈನ್ ಹಾಗೂ ವಿಟಮಿನ್ ಸಿ ಇರುವುದರಿಂದ ಕೆಮ್ಮು, ಶೀತ ತಡೆಗಟ್ಟುವಲ್ಲಿ ಸಹಕಾರಿ. ಇನ್ನು ಕಾಯಿಲೆ ಬಿದ್ದಾಗ ಪೈನಾಪಲ್ ಜ್ಯೂಸ್‌ ಕುಡಿದರೆ ಬೇಗನೆ ಚೇತರಿಸಿಕೊಳ್ಳಬಹುದು.

ಮನೆಮದ್ದು ಹೀಗೆ ತಯಾರಿಸಿ : ಮನೆಮದ್ದು 1. ಅರ್ಧ ಕಪ್ ಬಿಸಿ ಬಿಸಿಯಾದ ಅನಾನಸ್ ಜ್ಯೂಸ್‌ಗೆ ಅರ್ಧ ಚಮಚ ಜೇನು ಸೇರಿಸಿ, ಚಿಟಿಕೆಯಷ್ಟು ಉಪ್ಪು, ಸ್ವಲ್ಪ ಕಾಳು ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ, ಇದರಿಂದ ಕೆಮ್ಮು ಕಡಿಮೆಯಾಗುವುದು.

ಮನೆಮದ್ದು 2. ಒಂದು ಕಪ್ ಅನಾನಸ್ ಜ್ಯೂಸ್‌ಗೆ ಒಂದು ಚಮಚ ಜೇನು, ಒಂದು ಚಮಚ ಚಿಕ್ಕದಾಗಿ ಹೆಚ್ಚಿದ ಶುಂಠಿ, ಚಿಟಿಕೆಯಷ್ಟು ಉಪ್ಪು, ಸ್ವಲ್ಪ ಒಣ ಮೆಣಸಿನ ಬೀಜ ಹಾಕಿ ಬ್ಲೆಂಡ್ ಮಾಡಬೇಕು. ನಂತರ ಈ ರಸವನ್ನು 3 ಭಾಗ ಮಾಡಿ, ದಿನದಲ್ಲಿ 3 ಬಾರಿ ಕುಡಿಯಿರಿ, ಇದರಿಂದ ಕೆಮ್ಮು ಕಡಿಮೆಯಾಗುವುದು.

8. ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿ : ಅನಾನಸ್‌ನಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶ ಅಧಿಕವಿರುವುದರಿಂದ ಇದು ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುತ್ತದೆ. ಹೀಗಾಗಿ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. 9. ದವಡೆಯನ್ನು ಬಲಪಡಿಸುತ್ತದೆ : ಅನಾನಸ್‌ನಲ್ಲಿ ಆಸ್ಟ್ರಿಜೆಂಟ್ ಅಂಶ ಅತ್ಯಧಿಕವಾಗಿದೆ. ಇದು ದವಡೆಯನ್ನು ಬಲಪಡಿಸುತ್ತದೆ, ದಂತಕ್ಷಯ ಉಂಟಾಗದಂತೆ ಕಾಪಾಡುತ್ತದೆ. ಹಲ್ಲುಗಳು ಬಲವಾಗಿ, ಆರೋಗ್ಯವಾಗಿ ಇರಲು ಅನಾನಸ್ ತಿನ್ನಿ.

10. ರ’ಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ : ಅನಾನಸ್‌ನಲ್ಲಿ ಪೊಟಾಷ್ಯಿಯಂ ಇದೆ, ಪೊಟಾಷ್ಯಿಯಂ ನೈಸರ್ಗಿಕವಾಗಿ ರ’ಕ್ತದೊತ್ತಡವನ್ನು ಕಡಿಮೆ ಮಡುತ್ತದೆ. ದೇಹದಲ್ಲಿ ಎಲ್ಲಾ ಕಡೆ ರಕ್ತ ಸಂಚಾರ ಸರಿಯಾಗಿ ಸಂಚರಿಸುವಂತೆ ಪೊಟಾಷ್ಯಿಯಂ ಮಾಡುವುದರಿಂದ ರ’ಕ್ತನಾಳಗಳ ಮೇಲೆ ಹೆಚ್ಚಿನ ಒ’ತ್ತಡ ಉಂಟಾಗುವುದಿಲ್ಲ. ಇದರಿಂದ ರ’ಕ್ತದೊತ್ತಡ ಉಂಟಾಗುವುದಿಲ್ಲ. ಅನಾನಸ್ ಪಾರ್ಶ್ವವಾಯು ಬರದಂತೆ ಆರೋಗ್ಯ ಕಾಪಾಡುವಲ್ಲಿ ಕೂಡ ಸಹಕಾರಿ.

11. ಜೀರ್ಣಕ್ರಿಯೆಗೆ ಒಳ್ಳೆಯದು : ಅಜೀರ್ಣ ಸಮಸ್ಯೆ ಉಂಟಾಗುತ್ತಿದೆಯೇ. ಹಾಗಾದರೆ ಊಟವಾದ ಬಳಿಕ ಒಂದು ಬೌಲ್ ಅನಾನಸ್ ತಿನ್ನಿ, ಇದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. 12. ಕರುಳಿನ ಆರೋಗ್ಯಕ್ಕೆ ಒಳ್ಳೆಯದು : ಅನಾನಸ್ ತಿನ್ನುವುದರಿಂದ ಹೊಟ್ಟೆ ಉರಿ ಕಡಿಮೆಯಾಗುವುದು ಹಾಗೂ ಅತಿಸಾರ ಉಂಟಾಗದಂತೆ ತಡೆದು ಕರುಳಿನ ಆರೋಗ್ಯ ಹೆಚ್ಚಿಸುವುದು.

13. ವಾಂತಿ ತಡೆಗಟ್ಟುತ್ತದೆ : ಕೆಲವರಿಗೆ ಪ್ರಯಾಣ ಮಾಡುವಾಗ ತಲೆ ಸುತ್ತುತ್ತದೆ, ಸ್ವಲ್ಪ ಪೈನಾಪಲ್ ತುಂಡುಗಳನ್ನು ತಿನ್ನುವ ಮೂಲಕ ಪ್ರಯಾಣದಲ್ಲಿ ಕಾಡುವ ವಾಂತಿ ಸಮಸ್ಯೆ ತಡೆಗಟ್ಟಬಹುದು. 14. ಮೊಡವೆ ನಿವಾರಣೆ ಮಾಡುತ್ತದೆ : ಅನಾನಸ್ ತ್ವಚೆ ಆರೋಗ್ಯವನ್ನು ಹೆಚ್ಚಿಸುತ್ತದೆ, ಇನ್ನು ಇದನ್ನು ಫೇಶಿಯಲ್ ಮಾಸ್ಕ್ ಆಗಿಯೂ ಬಳಸಬಹುದು. ಒಂದು ತುಂಡು ಅನಾನಸ್ ತೆಗೆದುಕೊಂಡು ಅದರ ರಸವನ್ನು ಮುಖಕ್ಕೆ ಹಚ್ಚಿ, ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖ ಕಾಂತಿ ಹೆಚ್ಚುವುದು.

15. ಪಾದಗಳ ಬಿರುಕು ಹೋಗಲಾಡಿಸುವಲ್ಲಿ ಸಹಕಾರಿ : ಪಾದಗಳು ಬಿರುಕು ಬಿಟ್ಟಿದೆಯೇ? ಹಾಗಾದರೆ ಇದನ್ನು ಅನಾನಸ್ ಬಳಸಿ ಹೋಗಲಾಡಿಸಬಹುದು. ಅನಾನಸ್ ಅನ್ನು ಪಾದಗಳಿಗೆ ಹಚ್ಚಿ, ಇದು ಪಾದ ಉರಿ, ನೋವು ಮುಂತಾದ ಸಮಸ್ಯೆಯನ್ನು ಹೋಗಲಾಡಿಸಿ, ಪಾದಗಳ ಆರೈಕೆ ಮಾಡುವುದು.

16. ಉಗುರುಗಳನ್ನು ಬಲವಾಗಿಸುತ್ತದೆ : ವಿಟಮಿನ್ ಎ,ಬಿ ಕೊರತೆ ಉಂಟಾದರೆ ಉಗುರುಗಳಲ್ಲಿ ಬಿರುಕು ಉಂಟಾಗುವುದು ಹಾಗೂ ಉಗುರು ಬೇಗನೆ ತುಂಡಾಗುವುದು. ನಿಮ್ಮ ಉಗುರುಗಳು ಬಲವಾಗಲು ಅನಾನಸ್‌ ಬಳಸಿ. 17. ಒಡೆದ ತುಟಿಯನ್ನು ಸರಿಪಡಿಸುತ್ತದೆ : ಅನಾನಸ್ ರಸವನ್ನು ತೆಂಗಿನೆಣ್ಣೆ ಜತೆ ಮಿಶ್ರ ಮಾಡಿ ತುಟಿಗೆ ಹಚ್ಚಿ, ಇದರಿಂದ ತುಟಿ ಒಡೆಯುವ ಸಮಸ್ಯೆ ಇಲ್ಲವಾಗುವುದು. ಈ ಮಿಶ್ರಣ ತುಟಿಯನ್ನು ಮೃದುವಾಗಿಸಿ, ಆಕರ್ಷಕವಾಗಿ ಕಾಣುವಂತೆ ಮಾಡುವುದು.

18. ಕೂದಲು ಉದುರುವುದನ್ನು ತಡೆಗಟ್ಟುತ್ತದೆ : ಅನಾನಸ್ ರಸವನ್ನು ತಲೆಬುಡಕ್ಕೆ ಹಚ್ಚಿದರೆ ಕೂದಲಿನ ಬುಡಕ್ಕೆ ಪೋಷಕಾಂಶಗಳು ದೊರೆಯುವುದರಿಂದ ಕೂದಲು ಮಂದವಾಗಿ ಬೆಳೆಯುವುದು ಹಾಗೂ ತಲೆಹೊಟ್ಟಿನ ಸಮಸ್ಯೆ ಇಲ್ಲವಾಗುವುದು.

19. ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ : ಇದು ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕುವುದರಿಂದ ದೇಹದ ಆರೋಗ್ಯ ಹೆಚ್ಚುವುದು, ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ. 20. ಹೆಚ್ಚು ಶಕ್ತಿಯನ್ನು ತುಂಬುತ್ತದೆ : ನಿಮ್ಮ ಆಹಾರಕ್ರಮದಲ್ಲಿ ಅನಾನಸ್‌ ಸೇರಿಸಿ, ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು ಹಾಗೂ ದೇಹದಲ್ಲಿ ಶಕ್ತಿ ಹೆಚ್ಚಾಗುವುದು.

21. ಅಸ್ತಮಾ ತಡೆಗಟ್ಟುತ್ತದೆ : ಅನಾನಸ್‌ನಲ್ಲಿ ಬೀಟಾ ಕೆರೋಟಿನ್ ಇದ್ದು ಇದು ಅಸ್ತಮಾ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ದೂಳು, ಪೋಷಕಾಂಶ ಕೊರತೆ, ಮಾನಸಿಕ ಒತ್ತಡದಿಂದ ಸಮಸ್ಯೆ ಹೆಚ್ಚಾಗುವುದು, ಅನಾನಸ್‌ ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕುವುದರಿಂದ ಆರೋಗ್ಯ ಹೆಚ್ಚಿಸುತ್ತದೆ.

22. ಮಾನಸಿಕ ಆರೋಗ್ಯ ವೃದ್ಧಿಸುತ್ತದೆ : ಅನಾನಸ್‌ನಲ್ಲಿ ಅಮೈನೋ ಆಮ್ಲವಿದ್ದು ಇದು ದೇಹವನ್ನು ಸೇರಿದಾಗ ಖುಷಿಯ ಹಾರ್ಮೋನ್‌ ಆದ ಸೆರೋಟಿನಿನ್ ಉತ್ಪತ್ತಿ ಮಾಡುತ್ತದೆ. ಇದರಿಂದ ಮಾನಸಿಕ ಆರೋಗ್ಯ ಹೆಚ್ಚುವುದು. ದಿನವೂ ಊಟದ ನಂತರ ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಅಜೀರ್ಣ ರೋಗ ದೂರವಾಗುತ್ತದೆ.

ಅನಾನಸ್ ಪಿತ್ತವನ್ನು ಶಮನಗೊಳಿಸುತ್ತದೆ. ಇದನ್ನು ಬರಿಹೊಟ್ಟೆಯಲ್ಲಿ ಯಾವಾಗಲೂ ತಿನ್ನಬಾರದು. ಗರ್ಭಿಣಿ ಸ್ತ್ರೀಯರು ಅನಾನಸ್ನ್ನು ಎಂದಿಗೂ ತಿನ್ನಬಾರದು. ಇದು ಗರ್ಭವನ್ನು ಬೆಳೆಯಲು ಬಿಡುವುದಿಲ್ಲ ಅದನ್ನು ಸಂಕುಚಿತಗೊಲಿಸುತ್ತದೆ. ಅದರಿಂದಾಗಿ ಗರ್ಭಸ್ರಾವ ಆಗುವ ಸಂಭವಗಳುಂಟು. ಅನಾನಸು ಹಣ್ಣನ್ನು ಚಿಕ್ಕ ಮಕ್ಕಳು ತಪ್ಪದೆ ಉಪಯೋಗಿಸಿದರೆ ಅವರಿಗೆ ಗಂಟಲಿನ ರೋಗವು ಬರುವುದಿಲ್ಲ.

ಆನೆಕಾಲು ರೋಗ, ಕುಸ್ಟ,ಕಜ್ಜಿ, ಎಕ್ಸಿಮ ರೋಗಗಳಲ್ಲಿ ಅನಾನಸು ಹಣ್ಣಿನ ರಸವನ್ನು ಲೇಪಿಸಿದರೆ ಹಿತಕರ. ಕಾಮಾಲೆ, ಯಕೃತ್ ವಿಕಾರ, ಗನೋರಿಯ,ಮೂತ್ರಕೋಶ ವ್ಯಾಧಿ, ಮೂತ್ರಾಷ್ಮರಿ,ಹೃದಯದ ಅನಿಯಮಿತ ಬಡಿತ…ಇತ್ಯಾದಿಗಳಲ್ಲಿ ಅನಾನಸಿನಿಂದ ಮಹತ್ತರವಾದ ಗುಣ ಕಂಡು ಬಂದಿದೆ. ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.

ಅನನಾಸಿನಲ್ಲಿ ಹೇರಳವಾಗಿ ನೈಸರ್ಗಿಕ ಪೊಟ್ಯಾಸಿಯಂ ಇರುವುದರಿಂದ ಮೂತ್ರ ಕಟ್ಟುವಿಕೆ, ಉರಿ ಮೂತ್ರ ಮುಂತಾದ ರೋಗಗಳಲ್ಲಿ ಗುಣಕಾರಿ. ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಧೂಮಪಾನದಿಂದ ಉಂಟಾಗುವ ಅನೇಕ ದುಷ್ಪರಿಣಾಮಗಳು ದೂರವಾಗುತ್ತವೆ. ಅನಾನಸ್ ಹಣ್ಣಿನ ರಸವನ್ನು ಕಜ್ಜಿ, ತುರಿಕೆ ಇದ್ದಲ್ಲಿ ಹಚ್ಚಿ ತಿಕ್ಕಿದರೆ ವಾಸಿಯಾಗುತ್ತವೆ.

ಅನಾನಸ್ ಹಣ್ಣಿಗೆ ಕರಿಮೆಣಸಿನ ಪುಡಿಯನ್ನು ಹಾಕಿ ಸೇವಿಸಿದರೆ ಕೆಮ್ಮು, ಕಫಾ ಕಡಿಮೆ ಆಗುತ್ತದೆ. ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನ ದೋಷ ಮತ್ತು ಅರಿಶಿನ ಕಾಮಾಲೆ ಗುಣವಾಗುತ್ತದೆ. ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಆಮ್ಲಪಿತ್ತ ( ಅಸಿಡಿಟಿ ) ದೂರವಾಗುತ್ತದೆ.

ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಗಂಟಲುಬೇನೆ ಗುಣವಾಗುತ್ತದೆ. ಪ್ರತಿದಿನ ತಾಜಾ ಅನಾನಸ್ ಹಣ್ಣನ್ನು ಸೇವಿಸುವುದರಿಂದ ಹೃದಯದ ದುರ್ಬಲತೆ ದೂರವಾಗುತ್ತದೆ. ಮೂತ್ರ ಕಟ್ಟುವುದು, ಪಿತ್ತಕೋಶ ಊದಿಕೊಳ್ಳುವುದು, ಕಣ್ಣಿನ ಸುತ್ತಮುತ್ತ ಊದಿಕೊಳ್ಳುವುದು ಮುಂತಾದ ತೊಂದರೆಗಳಿಗೆ ತಾಜಾ ಅನಾನಸ್ ಹಣ್ಣನ್ನು ತಿಂದು ಹಾಲು ಕುಡಿಯಬೇಕು. ಬೇರೆ ಏನನ್ನೂ ಸೇವಿಸಬಾರದು. ಹೀಗೆ ಮಾಡುವುದರಿಂದ ಒಂದು ವಾರದಲ್ಲಿ ಗುಣವಾಗುವುದು.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here