ರೋಗದ ಭಯ ಮತ್ತು ನಂಬಿಕೆ. ನಂಬಿಕೆ ಮತ್ತು ಭಯ ಇವೆರಡು ಮನುಷ್ಯನ ಅತಿ ಪ್ರಬಲ ಭಾವನೆಗಳು. ಮನುಷ್ಯನ ವ್ಯಕ್ತಿ ಪ್ರಪಂಚದಲ್ಲಿ ಬಹಳ ಪ್ರಭಾವಶಾಲಿಯಾದ ಭಾವನೆಗಳು. ನಿಮ್ಮನ್ನು ಹೇಗೆಬೇಕೊ ಹಾಗೇ ಮಾರ್ಪಡಿಸುತ್ತವೆ. ನಮ್ಮ ನಂಬಿಕೆ ವ್ಯವಸ್ಥೆ ಹೇಗೆ ನಮ್ಮೊಳಗೆ ಕೆಲಸ ಮಾಡುತ್ತದೆಯೆಂಬುವದು ಬಹುತೇಕರಿಗೆ ಗೊತ್ತಿರುವುದಿಲ್ಲ.
ನಮ್ಮ ಪ್ರತಿಯೊಂದು ಆಲೋಚನೆಗಳಿಗು ಶಕ್ತಿಯಿದೆ. ಈ ಜಗತ್ತು ಅಸ್ತಿತ್ವದಲ್ಲಿರುವದು ನಮ್ಮ ಆಲೋಚನೆಗಳಲ್ಲಿ. ಆಲೋಚನೆಗಳನ್ನು ಮಿದುಳುನಿಂದ ಡಿಲಿಟ್ ಮಾಡಿದ್ರೆ. ಜಗತ್ತು ಅಸ್ತಿತ್ವದಲ್ಲಿ ಇರುವುದಿಲ್ಲ. ಆಗ ಅದು ದೇಹ ಮಾತ್ರ. ದೇಹ ಮಿದುಳಿಗಿಂತ ವಿಪರೀತ ಬುದ್ದಿಶಾಲಿ. ಅದಕ್ಕೆ ತನ್ನ ಬದುಕಿಸಿಕೊಳ್ಳುವದು ಹೇಗೆಯೆಂದು ಗೊತ್ತು. ಅದಕ್ಕಾಗಿ ಮನುಷ್ಯನ ದೇಹ ಯಾವುದೇ ಬುದ್ದಿ ಹಿಡಿತವಿಲ್ಲದೆ ತನ್ನಷ್ಟೆ ತಾನೆ ಅದ್ಬುತವಾಗಿˌವಿಜ್ಞಾನದ ಅಳತೆ ಮೀರಿ ದಕ್ಪೆತೆಯಿಂದ ಕಾರ್ಯ ನಿರ್ವಹಿಸುತ್ತದೆ.
ವಿಜ್ಞಾನಕ್ಕೆ ಅದರ ಬುದ್ದಿವಂತಿಕೆ ಕಾರ್ಯಚಟುವಟಿಕೆಯನ್ನು ಕರಾರುವಕ್ಕಾಗಿ ಹೇಳಲು ಆಗಿಲ್ಲ. ಪ್ರತಿಯೊಂದು ದೇಹವು ವಿಭಿನ್ನ ಕಾರ್ಯ ಮಾಡುತ್ತವೆ ಏಕೆ? ಒಬ್ಬರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆˌ ಕೆಲವರಲ್ಲಿ ಕಡಿಮೆˌ ಕೆಲವರಿಗೆ ಸಕ್ಕರೆ ಖಾಯಿಲೆ..ಕೆಲವರಿಗೆ ಯಾವ ರೋಗವು ಇರುವುದಿಲ್ಲ ಯಾಕೆ? ನೀವು ನಿಮ್ಮ ದೇಹವನ್ನು ಸಡಿಲಗೊಳ್ಳಿಸಿˌ ಅದರ ಮೇಲೆ ಬುದ್ದಿ ಹಿಡಿತವನ್ನು ತಪ್ಪಿಸಿ ದೇಹ ಅದ್ಬುತವಾಗಿ ಕೆಲಸ ಮಾಡುತ್ತದೆ.
ನಿಸರ್ಗ ಆ ಮೆಕ್ಯಾನಿಸ್ಂ ದೇಹಕ್ಕೆ ವರವಾಗಿ ನೀಡಿದೆ. ನಾವೇಲ್ಲ ಬುದ್ದಿಶಕ್ತಿ ಮೇಲೆ ಹೆಚ್ಚು ಅವಲಂಬಿತವಾಗಿˌ ಬುದ್ದಿಶಕ್ತಿಯಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳ ಬಯಸುತ್ತೆವೆ. ನಮ್ಮ ಬುದ್ದಿಯೆ ಅನಾರೋಗ್ಯಕರವಾಗಿದೆ. ಅಲ್ಲಿ ಬರಿ ನಕಾರತ್ಮಾಕ ಆಲೋಚನೆಗಳುˌ ಮೋಸ ˌ ವಂಚನೆ, ದುಷ್ಟತನ ಇವುಗಳಿಂದ ಕೂಡಿದೆ ಹೀಗಾಗಿ ಈ ಆಲೋಚನೆಗಳಿಂದ ನಾವು ಆರೋಗ್ಯದಲ್ಲಿ ರೋಗವನ್ನು ತಂದುಕೊಳ್ಳುತ್ತೆವೆ.
ನಾವು ಸಣ್ಣ ತಲೆ ನೋವುˌಜ್ವರˌನೋವುಗಳಿಗೆ ವೈದ್ಯಕೀಯ ಮೊರೆ ಹೋಗುತ್ತೆವೆ. ದೇಹಕ್ಕೆ ಅದರದೇ ಆದ ರೀತಿಯಲ್ಲಿ ಕೆಲಸ ಮಾಡಲು ಬೀಡುವುದಿಲ್ಲ. ಪ್ರಕೃತಿಯಲ್ಲಿ ಯಾವ ಪ್ರಾಣಿಗಳು ಆಸ್ಪತ್ರೆಗಳಿಗೆ ಹೋಗುವುದಿಲ್ಲ. ಇತ್ತೀಚಿಗೆ ನಾವು ಅವುಗಳನ್ನು ನಮ್ಮಂತೆ ರೋಗಗ್ರಸ್ತ ಮಾಡಿˌ ಆಸ್ಪತ್ರೆಗೆ ಕರೆದುಕೊಂಡು ಹೋರಟ್ಟಿದ್ದೆವೆ.
ಭಯವೆಂಬ ರಸಾಯನ ˌ ದೇಹದಲ್ಲಿಯ ಎಲ್ಲ ರೋಗಳಿಗು ಮೂಲ. ಅದು ನಿಮ್ಮೊಳಗಿನ ರೋಗ ನಿರೋಧಕ ಶಕ್ತಿಯನ್ನು ಕೊಂದು ಹಾಕುತ್ತದೆ. ಭಯದಿಂದ ರೋಗ ಆವರಿಸಿಕೊಳ್ಳುತ್ತದೆ. ಹಾಗೇ ಮನೆಯಲ್ಲಿ ಸದಾ ಸುಮ್ಮನೆ ಕುಳಿತ್ತು ಟಿ.ವಿ. ನೋಡುತ್ತ ˌಕರೋನಾ ಸುದ್ದಿಗಳನ್ನೆ ನೋಡುತ್ತ ˌ ಸಾವುಗಳ ಬಗ್ಗೆ ಆಲೋಚಿಸುತ್ತ ರೋಗದ ತೀವ್ರತೆ ಬಗ್ಗೆ ಆಲೋಚಿಸುತ್ತ ಕುಳಿತ್ತರೆˌ ಆಗ ನಿಮ್ಮೊಳಗೆ ಉತ್ಪಾದಿತವಾಗುವ ಭಯˌನಿಮ್ಮನ್ನು ಆವರಿಸಿಕೊಳ್ಳುತ್ತದೆ.
ಭಯದಿಂದ ಚಲಿಸುವ ಪ್ರತಿ ಆಲೋಚನೆಗಳು ನಿಮ್ಮ ನಂಬಿಕೆˌ ಮನೋದೈರ್ಯವನ್ನು ಕುಗ್ಗಿಸುತ್ತವೆ. ಸುಲಭವಾಗಿ ರೋಗಕ್ಕೆ ಬಲಿಯಾಗುವಿರಿ. ಪ್ರತಿ ಆಲೋಚನೆಯ ತರಂಗಗಳುˌ ಪ್ರತಿ ತರಂಗಳಲ್ಲಿಯು ಶಬ್ದವಿದೆ. ಆ ಶಬ್ದಗಳನ್ನು ವಿಶ್ವಶಕ್ತಿ ಅಥವ ಬ್ರಹ್ಮಾಂಡ ಶಕ್ತಿ ತಲುಪುತ್ತದೆ. ಅದರಿಂದ “ತಥಾಸ್ತು” . ತಥಾಸ್ತು ಆದ ನಂತರ ಅದೇ ರೀತಿಯ ಕಾರ್ಯ ಮತ್ತು ಫಲ ಅನುಭವಿಸಬೇಕಾಗುತ್ತದೆ.
ಪ್ರತಿ ರೋಗವನ್ನು ಎದುರಿಸಲು ಬೇಕಾಗಿರುವುದು ನಂಬಿಕೆ. ಅದು ನಿಮ್ಮ ಮೇಲೆ ನಿಮ್ಮ ನಂಬಿಕೆ ಪ್ರಬಲವಾಗಿದ್ದಲ್ಲಿ . ಜಗತ್ತಿನ ಯಾವ ಶಕ್ತಿಯು ನಿಮ್ಮನ್ನು ಅಲುಗಾಡಿಸಲಾರವು. ಯಾವ ರೋಗವು ನಿಮ್ಮ ಸಮೀಪ ಸುಳಿಯಲಾರವು. ಭಯ ಬಿಟ್ಟು ನಿಮ್ಮ ಮೇಲೆ ನಂಬಿಕೆ ಬೆಳೆಯಿಸಿಕೊಳ್ಳಿ “ನನಗೇನು ಆಗಿಲ್ಲ ˌ ಏನೂ ಆಗುವುದಿಲ್ಲ..” ಎಂಬ ನಂಬಿಕೆ ಬೆಳೆಸಿಕೊಳ್ಳಿ . ಯಾವ ರೋಗವು ನಿಮ್ಮ ಸುಳಿಯಲಾರವು. ಭಯದ ಜಾಗದಲ್ಲಿ ನಂಬಿಕೆಯನ್ನು ನೆಡಿ.
ನೀವು ಗಮನಿಸಿ ನೋಡಿˌ ರೋಗಗಳು ಬಹುತೇಕ ಬುದ್ದಿವಂತರುˌ ಶ್ರೀಮಂತರ ಪಾಲೆ ಹೆಚ್ಚು. ದೈಹಿಕ ಶ್ರಮದ ಮೇಲೆ ನಂಬಿಕೆ ಇರಿಸಿದವರಿಗೆˌ ದೇಹವನ್ನು ಸದಾ ದಣಿಸುವವರಿಗೆ ರೋಗಗಳು ಕಡಿಮೆ. ನೀವು ದೇಹವನ್ನು ದಣಿಸಿˌದುಡಿಸಿˌದಂಡಿಸಿˌಉಪಯೋಗಿಸಿ. ದೇಹದ ಮಾಲಿಕತ್ವವನ್ನು ಬುದ್ದಿಗೆ ನೀಡಬೇಡಿ. ಆಗ ದೇಹ ಅತ್ಯದ್ಬುತವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವದು..