ನಿಂಬೆಹಣ್ಣಿನ ರಸವನ್ನು ಮೂಗಿಗೆ ಹಾಕುವ ಬಗ್ಗೆ ಕೇಳುತ್ತಿದ್ದೀರಿ. ಇದಕ್ಕೆ ಸ್ಪಷ್ಟ ಉತ್ತರ ಇಲ್ಲಿದೆ ನೋಡಿ.

0
13055

ನಮಸ್ಕಾರ ಪ್ರಿಯ ಮಿತ್ರರೇ. ಎಲ್ಲರ ಕ್ಷೇಮವನ್ನು ಬಯಸುತ್ತಾ ಇಂದಿನ ವಿಷಯವನ್ನು ತಿಳಿಯಲು ಪ್ರಾರಂಭ ಮಾಡೋಣ. ತುಂಬಾ ಜನ ನಿಂಬೆಹಣ್ಣಿನ ರಸವನ್ನು ಮೂಗಿಗೆ ಹಾಕುವ ಬಗ್ಗೆ ಕೇಳುತ್ತಿದ್ದೀರಿ. ಇಂದು ಇದಕ್ಕೆ ಸ್ಪಷ್ಟ ಉತ್ತರ ನೀಡುತ್ತೇನೆ. ಆದರೆ ಅದಕ್ಕೂ ಮೊದಲು ನೀವು ಮೂಗಿನಲ್ಲಿ ಔಷಧ ಹಾಕುವುದರ ಬಗ್ಗೆ ಕೆಲವು ಮೂಲಭೂತ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು ಎನ್ನುವುದು ಅನಿವಾರ್ಯ.

ಆಯುರ್ವೇದದಲ್ಲಿ ನಸ್ಯಕರ್ಮ ಎಂಬ ಮೂಗಿಗೆ ಔಷಧವನ್ನು ಹಾಕುವ ಚಿಕಿತ್ಸೆಯ ಮೂಲಕ ಹಲವಾರು ಖಾಯಿಲೆಗಳನ್ನು ಗುಣಪಡಿಸುವ ಬಗ್ಗೆ ವಿವರಣೆಯಿದೆ. ಪಂಚಕರ್ಮದ ಪ್ರಧಾನ ಚಿಕಿತ್ಸೆಗಳಲ್ಲಿ ಇದೂ ಒಂದು. ರೋಗಿಯ ಪ್ರಕೃತಿ, ವಿಕೃತಿ, ಸಮಸ್ಯೆಯ ತೀವ್ರತೆಗಳನ್ನು ನೋಡಿ ನಾವು ಯಾವ ಔಷಧವನ್ನು ಎಷ್ಟು ಪ್ರಮಾಣದಲ್ಲಿ ಮೂಗಿನಲ್ಲಿ ಹಾಕಬೇಕು ಅಥವಾ ರೋಗಿಗೆ ಮನೆಯಲ್ಲಿ ಹಾಕಿಕೊಳ್ಳುವಂತೆ ಸಲಹೆ ಕೊಡಬೇಕು ಎಂಬುದನ್ನು ನಿರ್ಧರಿಸುತ್ತೇವೆ.

ಇಲ್ಲಿ ಇನ್ನೊಂದು ಅಚ್ಚರಿ ತರುವ ವಿಷಯ ಏನೆಂದರೆ, ಮೂಗಿನಲ್ಲಿ ಔಷಧ ಹಾಕುವುದರಿಂದ ಕಫ ಬರುವುದು ಮತ್ತು ಆ ಚಾನಲ್ ಕ್ಲೀನ್ ಆಗುವುದು ಮಾತ್ರ ಎಂದುಕೊಂಡರೆ ಅದು ಖಂಡಿತ ತಪ್ಪು. ಇದು ಕತ್ತು ಮತ್ತು ಅದರ ಮೇಲಿನ ಎಲ್ಲಾ ಭಾಗಗಳ ಮೇಲೂ ಪರಿಣಾಮವನ್ನು ಬೀರುತ್ತದೆ. ಹಾಗಾಗಿಯೇ ನಾನು ಕತ್ತು ನೋವು, ಕಣ್ಣಿನ ಸಮಸ್ಯೆ, ಮೆದುಳಿನ ಸಮಸ್ಯೆ, ಕೈ ಜುಮ್ಮೆನ್ನುವ ತೊಂದರೆಗಳು ಇರುವವರಿಗೆ ಅವರ ಸಮಸ್ಯೆಗೆ ಅನುಗುಣವಾಗಿ ಮೂಗಿನಲ್ಲಿ ಹಾಕಿಕೊಳ್ಳಲು ಔಷಧ ಕೊಡುತ್ತೇನೆ.

ಈಗ ನಿಂಬೆಹಣ್ಣಿನ ವಿಷಯಕ್ಕೆ ಬರೋಣ. ನಿಂಬೆಹಣ್ಣಿನ ಬಗ್ಗೆ ಹೇಳುವಾಗ “ಧನ್ವಂತರಿ ನಿಘಂಟು” ಎಂಬ ಗ್ರಂಥದಲ್ಲಿ ಕಫೋತ್ಕ್ಲೇಶ ಎಂದು ವಿವರಿಸಿದ್ದಾರೆ. ಅಂದರೆ ಕಫವನ್ನು ಹೊರಗೆ ಹಾಕುತ್ತದೆ ಎಂದರ್ಥ. ಆದರೆ ನನಗೆ ತಿಳಿದಂತೆ ಆಯುರ್ವೇದದಲ್ಲಿ ಎಲ್ಲೂ ಅದರ ರಸವನ್ನು ಮೂಗಿಗೆ ಹಾಕುವ ಬಗ್ಗೆ ಹೇಳಿಲ್ಲ. ಜೊತೆಗೆ, ಮೂಗಿನಲ್ಲಿ ನಿಂಬೆರಸ ಹಿಂಡುವುದರಿಂದ ಹಾಳಾಗಿರುವ ಶ್ವಾಸಕೋಶವನ್ನು ಪುನಃ ಮೊದಲಿನಂತೆ ಮಾಡಲು ಸಾಧ್ಯವಿಲ್ಲ.

ಆದರೂ ಮೂಗಿನಲ್ಲಿ ನಿಂಬೆರಸ ಹಾಕುವುದರಿಂದ ಕಫದ ವಾಂತಿಯಾದರೆ ಸ್ವಲ್ಪ ಮಟ್ಟಿಗೆ ಉಸಿರಾಡಲು ಅನುಕೂಲವಾಗುತ್ತದೆಯೇ ಹೊರತು ಸಮಸ್ಯೆಯಿಂದ ರೋಗಿ ಹೊರಬರುತ್ತಾನೆ ಎನ್ನಲು ಸಾಧ್ಯವೇ ಇಲ್ಲ. ಕೊನೆಯದಾಗಿ, ಯಾವುದೇ ಕಾರಣಕ್ಕೂ ಕೊರೋನಾಕ್ಕೆ ಹೆದರಿ ನಿತ್ಯವೂ ಮೂಗಿಗೆ ನಿಂಬೆರಸ ಬಿಟ್ಟುಕೊಳ್ಳಲು ಪ್ರಾರಂಭಿಸಬೇಡಿ.

ಅದರ ಉಷ್ಣ, ತೀಕ್ಷ್ಣ, ಅಮ್ಲ ಗುಣವು ನಿಮ್ಮ ಮೂಗಿನ ಒಳಪದರ, ಕಣ್ಣುಗಳು, ಕೂದಲು ಮತ್ತು ಮೆದುಳಿಗೆ ಸಮಸ್ಯೆ ಮಾಡುತ್ತವೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

ಜಾಹಿರಾತು : ಶಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠಂ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಕಾಳಿಕಾ ದೇವಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ (ಕಾಲ್/ವಾಟ್ಸಪ್ 95388 66755) ಗುರೂಜಿಯವರಿಂದ ನೇರ ಪರಿಹಾರಗಳು ಮತ್ತು ಸಲಹಾ ಸೂತ್ರಗಳು ಪಡೆಯಿರಿ. ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಪರಿಪೂರ್ಣ ಪರಿಹಾರವಾಗಲಿದೆ 95388 66755 ಜೀವನದ ಅತ್ಯಮೂಲ್ಯ ಮೌಲ್ಯಗಳಿಗಾಗಿ ನಿರಾಶರಾಗಿದ್ದರೆ ಒ'ತ್ತಡ ಮನಸ್ತಾಪ, ಪ್ರೀತಿಯಲ್ಲಿ ಮೋಸ , ಮಾನಸಿಕ ಕಿರಿಕಿರಿ ವಾ'ಮಾಚಾರದಿಂದ ಸಂಪೂರ್ಣ ಜೀವನ ಅನರ್ಥವಾಗಿದ್ದರೆ , ಎಷ್ಟು ದುಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು ನಂಬಿದ ವ್ಯಕ್ತಿಗಳಿಂದ ದ್ರೋಹ ಮದುವೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದ್ದರೆ ಸ್ತ್ರೀ ಪುರುಷಾ ಪ್ರೇಮ ವಿಚಾರ ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಅತ್ತೆ-ಸೊಸೆ ಕಿರಿಕಿರಿ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಕೋರ್ಟ್ ವಿಚಾರ ಸಾಲದ ಬಾಧೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ಅನಾರೋಗ್ಯ ಇನ್ನೂ ಅನೇಕ ಸಮಸ್ಯೆಗಳಿಗೆ ಕೇರಳ ಮತ್ತು ಕೊಳ್ಳೇಗಾಲದ ಸರ್ವಾಭಿಷ್ಟ ಸಿದ್ದಿ ಪೂಜಾ ಅಷ್ಟದಿಗ್ಬಂದನ ಪೂಜೆ ಅಮಾವಾಸ್ಯೆ ಹುಣ್ಣಿಮೆ ಜೊತೆಗೆ ಗ್ರಹಣಕಾಲದ ಬಲಿಷ್ಠ ಅಥರ್ವಣವೇದದ ಕಾಳಿಕಾ ಉಪಾಸನಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಪಂಡಿತ್ ಶ್ರೀ ರಾಘವೇಂದ್ರ ಭಟ್ 95388 66755

LEAVE A REPLY

Please enter your comment!
Please enter your name here