ಅಕ್ಷಯ ತೃತೀಯದ ಬಗ್ಗೆ ಜನರಿಗೆ ಇರುವ ತಪ್ಪು ತಿಳುವಳಿಕೆ ಏನು. ಅಕ್ಷಯ ತೃತೀಯದ ಮಹತ್ವ ತಿಳಿಯಿರಿ.

0
2036

ಅಕ್ಷಯ ತೃತೀಯ ಮಹತ್ವ. ಅಕ್ಷಯ ತೃತೀಯದ ಬಗ್ಗೆ ಜನರಿಗೆ ಇರುವ ತಪ್ಪು ತಿಳುವಳಿಕೆ ಏನು. ಅಕ್ಷಯ ತೃತೀಯ ಅಂದರೆ ನಮ್ಮ ಮನಸ್ಸಿಗೆ ಬರುವುದು ಚಿನ್ನದ ಅಂಗಡಿಗಳಲ್ಲಿ ಕಂಡುಬರುವ ಆಭರಣಗಳ ಜಾಹೀರಾತುಗಳು. ಚಿನ್ನದ ಮೇಲಿನ ಕಡಿತಗಳು ಚಿನ್ನ ಬೆಳ್ಳಿಯನ್ನು ಕೊಂಡುಕೊಂಡರೆ, ವರ್ಷ ಪೂರ್ತಿ ನೀವು ಚಿನ್ನವನ್ನು ತೆಗೆದು ಕೊಳ್ಳುತ್ತೀರಿ ಎನ್ನುವಂತಹ ಅವರ ಭಾಷಣಗಳು.

ಚಿನ್ನ ತೆಗೆದುಕೊಳ್ಳಲೇಬೇಕೆಂಬ ಹಠದಲ್ಲಿ ಸಾಲವನ್ನಾದರೂ ಮಾಡಿ ತೆಗೆದುಕೊಳ್ಳುವ ಎಷ್ಟೋ, ಮಂದಿಗೆ ನಿಜವಾದ ಅಕ್ಷಯ ತೃತೀಯದ ಬಗ್ಗೆ ಗೊತ್ತೇ ಇರುವುದಿಲ್ಲ. ಶ್ರೀಮಂತರ ಆದಿಯಾಗಿ ಕೂಲಿ ಮಾಡುವವರಿಗೂ ಕೂಡ ಅಂದು ಚಿನ್ನ ತೆಗೆದುಕೊಳ್ಳಲೇಬೇಕೆಂಬ ಹಠ ಎಲ್ಲರ ಮನಸ್ಸಿಗೂ ಚಾಪು ಒತ್ತಿದಂತೆ ಮಾಡಿರುವುದು ಚಿನ್ನದ ಅಂಗಡಿಯವರು. ನಿಜವಾದ ಅಕ್ಷಯ ತೃತೀಯ ಬಗ್ಗೆ ತಿಳಿದುಕೊಳ್ಳೋಣ..

ಅಕ್ಷಯ ತೃತೀಯದ ಆಚರಣೆಗಳ ಬಗ್ಗೆ ಎಲ್ಲಿ ಉಲ್ಲೇಖವಿದೆ. ಭವಿಷ್ಯತ್ ಪುರಾಣದಲ್ಲಿ ಶ್ರೀಕೃಷ್ಣಪರಮಾತ್ಮನೇ ಅಕ್ಷಯತೃತೀಯದ ಅಸಾಧಾರಣ ಮಹಿಮೆಯನ್ನು ವರ್ಣಿಸಿರುವುದಾಗಿ ಉಲ್ಲೇಖವಿದೆ. ಶ್ಲೋಕ : ಬಹುನಾತ್ರ ಕಿಮುಕ್ತೇನ ಕಿಂ ಬಹ್ವಕ್ಷರಮಾಲಯಾ | ವೈಶಾಖಸ್ಯ ಸಿತಾಮೇಕಾಂ ತೃತೀಯಾಮಕ್ಷಯಾಂ ಶೃಣು ||

ಗಂಗಾಸ್ನಾನಕ್ಕೆ ಮತ್ತು ಶ್ರೀಕೃಷ್ಣನನ್ನು ಧೂಪ, ದೀಪ, ಪುಷ್ಪ ಮತ್ತು ವಿಶೇಷವಾಗಿ ಚಂದನ ಲೇಪದಿಂದ ಅರ್ಚನೆ ಮಾಡುವುದಕ್ಕೆ ಈ ದಿನವನ್ನು ಅತಿ ಪ್ರಶಸ್ತವನ್ನಾಗಿ ಹೇಳಿದೆ. ಅಕ್ಷಯ ತೃತೀಯದ ಅರ್ಥ ಏನು. ಶ್ಲೋಕ | ಸ್ನಾತ್ವಾ ಹುತ್ವಾ ಚ ಜಪ್ತ್ವಾ ಚ ದತ್ತ್ವಾನಂತಫಲಂ ಲಭೇತ್ ||

ಈ ಹಬ್ಬದಲ್ಲಿ ಆಚರಿಸುವ ಸ್ನಾನ, ಜಪ, ತಪಸ್ಸು , ಅಧ್ಯಯನ, ತರ್ಪಣ, ದಾನಾದಿಗಳೆಲ್ಲವೂ ಅಕ್ಷಯವಾದ ಫಲವನ್ನು ನೀಡುವುದರಿಂದ ಇದನ್ನು ಅಕ್ಷಯ ತೃತೀಯ ಎಂದು ಕರೆಯಲಾಗಿದೆ ಎಂದು ವ್ರತರಾಜದಲ್ಲಿ ಉಲ್ಲೇಖಿಸಿದೆ. ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗಿರುವುದರಿಂದಲೂ ಇದಕ್ಕೆ ಈ ಹೆಸರು ಹೊಂದಾಣಿಕೆಯಾಗುತ್ತದೆ.

ಅಕ್ಷಯ ತೃತೀಯದ ಹಿಂದೂ ಪಂಚಾಂಗದ ಪ್ರಕಾರ ಯಾವಾಗ ಬರುತ್ತದೆ. ಶ್ಲೋಕ | ಪೂರ್ವಾಹ್ಣೇ ತು ಸದಾ ಕಾರ್ಯಾಃ ಶುಕ್ಲೇ ಮನುಯುಗಾದಯಃ | ದೈವ್ಯೇ ಕರ್ಮಣಿ ಪಿತ್ಯ್ರೇ ಚ ಕೃಷ್ಣೇ ಚೈವಾಪರಾಹ್ಣಿಕಾಃ || ವೈಶಾಖಸ್ಯ ತೃತೀಯಾಂ ಚ ಪೂರ್ವವಿದ್ಧಾಂ ಕರೋತಿ ವೈ | ಹವ್ಯಂ ದೇವಾ ನ ಗೃಹ್ಣನ್ತಿ ಕವ್ಯಂ ಚ ಪಿತರಸ್ತಥಾ ||

ವೈಶಾಖ ಮಾಸ ಶುಕ್ಲಪಕ್ಷ ತೃತೀಯ ಅಥವಾ ತದಿಗೆ ದಿನ ರೋಹಿಣಿ/ಮೃಗಶಿರಾ ನಕ್ಷತ್ರವು ಇದ್ದರೆ ಅಂದು ಮೂರುವರೆಗಳಿಗೆ ಮುಹೂರ್ತದಲ್ಲಿ ಬರುವ ತಿಥಿ ಅಕ್ಷಯ ತೃತೀಯ. ಅಕ್ಷಯ ತೃತೀಯದ ಮುಹೂರ್ತದ ಮಹತ್ವ ? ಗೃಹ ಪ್ರವೇಶ, ಮದುವೆ, ಹೊಸ ಉದ್ಯಮಗಳು, ಹೂಡಿಕೆಗಳನ್ನು ಪ್ರಾರಂಭಿಸಲು ಅಕ್ಷಯ ತೃತೀಯ ಅತ್ಯುತ್ತಮ ದಿನ.

ಅಕ್ಷಯತೃತೀಯಾ ದಿನ ಪಿತೃ ತರ್ಪಣ ಕೊಡಬಹುದೇ ? ದೇವತೆಗಳ ಪೂಜೆಗೆ ಮಾತ್ರವಲ್ಲದೆ ಪಿತೃಗಳ ಪೂಜೆಗೂ ಪ್ರಶಸ್ತವೆನಿಸಿರುವ ತಿಥಿ ಅಕ್ಷಯ ತೃತೀಯಾ. ಪಿತೃಗಳನ್ನು ಕುರಿತು ತರ್ಪಣ ಮಾಡಿ ಪಿಂಡಪ್ರದಾನವನ್ನು ಮಾಡಬಹುದು ಎಂದು ಧರ್ಮಸಿಂಧುವಿನಲ್ಲಿ ಉಲ್ಲೇಖಿಸಿದೆ. ‌ಪಿತೃಗಳನ್ನು ಸಂತೋಷಗೊಳಿಸಲು ಅಕ್ಷಯ ತೃತೀಯ ಹಬ್ಬವನ್ನು ಆಚರಿಸುವುದು ಶುಭವೆಂದು ಪರಿಗಣಿಸಲಾಗಿದೆ.

ಈ ದಿನ, ಪಿಂಡದಾನ ಮಾಡುವುದರಿಂದ ಪೂರ್ವಜರ ಆಶೀರ್ವಾದವನ್ನು ನೀಡುತ್ತದೆ. ಪೂರ್ವಜರ ಆಶೀರ್ವಾದವು ಜೀವನದ ತೊಂದರೆಗಳನ್ನು ತೊಡೆದುಹಾಕುತ್ತದೆ. ಸತ್ಯಯುಗ ಮತ್ತು ತ್ರೇತಾಯುಗದ ಆರಂಭವು ಅಕ್ಷಯ ತೃತೀಯದಿಂದ ಆರಂಭವಾಗಿದೆ ಎನ್ನುವ ನಂಬಿಕೆಯಿದೆ. ಇದರೊಂದಿಗೆ, ದ್ವಾಪರ ಯುಗವು ಈ ದಿನಾಂಕದಂದು ಕೊನೆಗೊಂಡಿತು ಎನ್ನುವ ನಂಬಿಕೆಯಿದೆ.

ಅಕ್ಷಯ ತೃತೀಯದ ಬಗ್ಗೆ ಮಹಾಭಾರತದಲ್ಲಿ ಉಲ್ಲೇಖ ಇದೆಯಾ ? ಹಾಗಾದರೆ ಯಾವ ಸಂದರ್ಭದಲ್ಲಿ ? ಮಹಾಭಾರತದಲ್ಲಿ ದ್ರೌಪದಿಗೆ ಶ್ರೀಕೃಷ್ಣನು ಅಕ್ಷಯ ಪಾತ್ರೆಯನ್ನು ಕೊಟ್ಟು ಅದರಿಂದ ಅವನು ಊಟ ಕೇಳಿದಾಗ, ಮುಗಿದು ಹೋಗಿದೆ ಎಂದು ಹೇಳಲು ಸಂಕೋಚ ಪಡುತ್ತಿದ್ದ ಅಂತಹ ದ್ರೌಪದಿಗೆ ಪಾತ್ರೆಯ ಕೊನೆಯ ಭಾಗದಲ್ಲಿ ಇರುವಂತಹ ಒಂದೇ ಒಂದು ಅಗುಳು ಅನ್ನವನ್ನೇ ಅಕ್ಷಯವನ್ನಾಗಿ ಮಾಡಿದಂತಹ ಘಟನೆ ನಿಮಗೆ ಗೊತ್ತಿರಬಹುದು.

ಅಕ್ಷಯ ತೃತೀಯವನ್ನು ಹಿಂದೂಗಳು ಮತ್ತು ಜೈನರು ಅತ್ಯಂತ ಪವಿತ್ರ ದಿನವನ್ನಾಗಿ ಆಚರಿಸುತ್ತಾರೆ. ವಿಷ್ಣು ಮತ್ತು ಲಕ್ಷ್ಮಿಯನ್ನು ಅಕ್ಷಯ ತೃತೀಯದಲ್ಲಿ ಪೂಜಿಸಲಾಗುತ್ತದೆ. ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಅಕ್ಷಯ ತೃತೀಯದಂದು ಪೂಜಿಸಲಾಗುತ್ತದೆ. ಪೂಜೆಯು ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ ಎನ್ನುವ ನಂಬಿಕೆಯಿದೆ.

ಇದರೊಂದಿಗೆ, ಎಲ್ಲಾ ರೀತಿಯ ಆಸೆಗಳನ್ನು ಈಡೇರಿಸಲಾಗುತ್ತದೆ. ಭಗವಾನ್ ಪರಶುರಾಮನ ಜಯಂತಿಯನ್ನು ಅಕ್ಷಯ ತೃತೀಯ ದಿನದಂದು ಆಚರಿಸಲಾಗುತ್ತದೆ. ಪರಶುರಾಮನು ಈ ದಿನ ಜನಿಸಿದನು ಎನ್ನುವ ನಂಬಿಕೆಯಿದೆ. ಪರಶುರಾಮನನ್ನು ವಿಷ್ಣುವಿನ ಆರನೇ ಅವತಾರವೆಂದು ಪರಿಗಣಿಸಲಾಗುತ್ತದೆ.
‌ ‌ ‌ ‌ ಪುರಾಣಗಳಲ್ಲಿ ಅಕ್ಷಯ ತೃತೀಯ ದಿನದ ಮಹತ್ವ? ವಿಷ್ಣುವಿನ ಅವತಾರವಾದ ಪರಶುರಾಮ ಅವತಾರ ಅಕ್ಷಯ ತೃತೀಯದ ದಿನವೇ ಆಗಿತ್ತು. ಶ್ರೀ ಕೃಷ್ಣ ಪರಮಾತ್ಮನ ಸ್ನೇಹಿತನಾದ ಕುಚೇಲನು ತನ್ನಲ್ಲಿರುವ ಸ್ವಲ್ಪವೇ ಅವಲಕ್ಕಿಯನ್ನು ತನ್ನ ಪ್ರೀತಿ ಪಾತ್ರ ಸ್ನೇಹಿತನಿಗಾಗಿ ತೆಗೆದುಕೊಂಡು ಹೋಗಿ ಸಮರ್ಪಿಸಿದ ದಿನ ಅಂದು ಶ್ರೀಕೃಷ್ಣ ಪರಮಾತ್ಮ ಕುಚೇಲನಿಗೆ, ನೀಡಿದ ಅಕ್ಷಯವಾದಂತಹ ಐಶ್ವರ್ಯ ಪ್ರಾಪ್ತಿಗಳು.

ದ್ವಾಪರಯುಗದ ಸಂದರ್ಭದಲ್ಲಿ ನಮ್ಮ ಮಹಾಭಾರತ ಪುರಾಣವನ್ನು ವ್ಯಾಸರು ರಚಿಸಿದ ಸುಮುಹೂರ್ತವೇ ಅಕ್ಷಯ ತೃತೀಯ. ಭಗೀರಥನ ಪ್ರಯತ್ನದಿಂದ ಈಶ್ವರನ ಜಟೆಯಲ್ಲಿ ಇದ್ದಂತಹ ಗಂಗೆಯು ಭೂಮಿಗೆ ಅವತರಿಸಿದ ದಿನವೂ ಅಕ್ಷಯ ತೃತಿಯ. ಈ ದಿನವು ತ್ರೇತ ಯುಗದ ಆರಂಭವನ್ನು ಸೂಚಿಸುತ್ತದೆ.

ಪಾಂಡವರು ಈ ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದದ್ದು, ದಾನಶೂರ ಕರ್ಣನು ಜನಿಸಿದ್ದು, ಆದಿ ಶಂಕರಾಚಾರ್ಯರು ಕನಕಧಾರ ಸ್ತೋತ್ರವನ್ನು ಸಂಯೋಜಿಸಲಾರಂಭಿಸಿದ್ದು. ಕಾಯಕ ಯೋಗಿ ಬಸವಣ್ಣನವರು ಜನಿಸಿದ್ದು. ಮಹಾಲಕ್ಷ್ಮಿಯನ್ನು ಆರಾಧಿಸಿ ಕುಬೇರನು ಅಷ್ಟೈಶ್ವರ್ಯ ಪ್ರಾಪ್ತಿ ಪಡೆದದ್ದು.

ಅಕ್ಷಯ ತೃತೀಯದ ಹೇಗೆ ಆಚರಿಸಬೇಕು ? ಹಾಗೂ ಅದರ ಫಲಗಳೇನು ? ಸಾಲವನ್ನು ಮಾಡಿಯಾದರೂ ಚಿನ್ನವನ್ನು ತೆಗೆದುಕೊಳ್ಳಬೇಕೆಂಬ ಮನಸ್ಥಿತಿಯನ್ನು ನಾವುಗಳು ಮೊದಲು ಬಿಟ್ಟು ಅಂದು ಏನೆಲ್ಲಾ ಒಳ್ಳೆಯ ಕೆಲಸವನ್ನು ಮಾಡಬೇಕು ಎಂಬುದು ತಿಳಿದುಕೊಳ್ಳಬೇಕಾಗಿದೆ.

ಶುಚಿರ್ಭೂತರಾಗಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಬಹುದು ನಾವು ಕೊಟ್ಟಷ್ಟು ನಮಗೆ ತಿರುಗಿ ಬರುತ್ತದೆ ಎಂಬುದಕ್ಕೆ ಉದಾಹರಣೆ ಅಕ್ಷಯ ತೃತೀಯ ಅಂದು ದಾನ ಧರ್ಮಗಳನ್ನು ಪುಣ್ಯ ಕಾರ್ಯ ಗಳನ್ನು ದೇವರ ದರ್ಶನವನ್ನು ಮಾಡಿದಷ್ಟು ನಮಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಅಕ್ಷಯ ತೃತೀಯ ದಿನದಂದು ಪುಣ್ಯ ಪ್ರಾಪ್ತಿಗಾಗಿ ದಾನ.

‌ ‌ ‌

ಮಣ್ಣಿನ ಮಡಕೆಯಲ್ಲಿ ಉದಕ (ನೀರು) ದಾನ, ಮಾಡಿದರೆ ಮೃತ್ಯು ಭಯದಿಂದ ದೂರ ಆಗಬಹುದು. ಬಡವರಿಗೆ, ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರವಾಗುತ್ತದೆ. ಹಣ್ಣು ಹಂಪಲುಗಳನ್ನು ದಾನ ಮಾಡಿದರೆ, ನಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೇವೆ ಎನ್ನುವ ನಂಬಿಕೆ.

ಅಕ್ಕಿ, ಬೇಳೆ, ಗೋಧಿ, ಬೆಲ್ಲ ದಾನ ಮಾಡಿದರೆ ಅಕಾಲ ಮೃತ್ಯುವಿನ ಭಯದಿಂದ ಪಾರಾಗಬಹುದು. ಮಜ್ಜಿಗೆ ಮೊಸರು ದಾನ ಮಾಡಿದರೆ ಮಾಡಿದ ಪಾಪಕರ್ಮಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆ. ಬೆಳಿಗ್ಗೆ ಗೋ ಮಾತೆಗೆ ಪೂಜೆ ಪುನಸ್ಕಾರಗಳನ್ನು ಮಾಡಿ ಗೋಧಿ ಬೆಲ್ಲ ಬಾಳೆಹಣ್ಣು ತಿನ್ನಿಸುವುದರಿಂದ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಪಾತ್ರವಾಗುತ್ತದೆ. ‌ ‌

ಪಂಚಾಂಗ, ಧಾರ್ಮಿಕ ಪುಸ್ತಕಗಳನ್ನು ಮತ್ತು ಫಲ ತಾಂಬೂಲಗಳನ್ನು ದಾನ ಮಾಡುವುದರಿಂದ ಅಧಿಕ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here