ಆಭರಣಗಳು ಮನುಷ್ಯನ ವೈಯಕ್ತಿಕ ಬದುಕಿನ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರುತ್ತದೆ ಎಂದು ತಿಳಿದರೆ ನೀವು ಬೆರಗಾಗುತ್ತೀರ.

0
4872

ಆಭರಣಗಳು ಮನುಷ್ಯನ ವೈಯಕ್ತಿಕ ಬದುಕಿನ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರುತ್ತದೆ ಎಂದು ತಿಳಿದರೆ ನೀವು ಬೆರಗಾಗುತ್ತೀರ. ಬೆಳ್ಳಿ ಧರಿಸಿದರೆ ನಿಮ್ಮ ಬಾಳು ಬಂಗಾರವಾಗುವುದು. ಆಭರಣ ಎನ್ನುವುದು ಸೌಂದರ್ಯ ಪ್ರತಿಬಿಂಬಿಸುವ ವಸ್ತು. ಹಾಗಾಗಿಯೇ ನಾಗರೀಕತೆ ಬೆಳೆದು ಬಂದಾಗಿನಿಂದಲೂ ಪುರುಷರು ಮತ್ತು ಮಹಿಳೆಯರು ವಿವಿಧ ಲೋಹಗಳ ಆಭರಣಗಳನ್ನು ಹಾಗೂ ಆಯುಧಗಳನ್ನು ಬಳಸುವುದು ರೂಢಿಯಲ್ಲಿವೆ. ಧಾರ್ಮಿಕ ವಿಚಾರದಲ್ಲಿ ವ್ಯಕ್ತಿ ಧರಿಸುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಅವನ ವೈಯಕ್ತಿಕ ಬದುಕಿನ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ.

ಅವು ದುಬಾರಿ ಬೆಲೆಯ ಆಭರಣಗಳಾಗಿರುವುದರಿಂದ ಆರ್ಥಿಕವಾಗಿಯೂ ಅನುಕೂಲವನ್ನು ಉಂಟುಮಾಡುವುದು. ಧಾರ್ಮಿಕವಾಗಿಯೂ ಸ್ಥಾನ ಪಡೆದಿರುವ ಬೆಳ್ಳಿ. ಚಿನ್ನ-ಬೆಳ್ಳಿಯ ಎರಡು ಲೋಹಗಳು ಆರ್ಥಿಕ ಸ್ಥಿತಿಯನ್ನು ಪ್ರತಿಬಿಂಬಿಸುವುದರ ಜೊತೆಗೆ ಧಾರ್ಮಿಕವಾಗಿಯೂ ಮಹತ್ತರದ ಅಂಶಗಳನ್ನು ಪಡೆದುಕೊಂಡಿವೆ. ಹಾಗಾಗಿಯೇ ಇಂದಿಗೂ ಸ್ತ್ರೀ ಆದವಳು ಬೆಳ್ಳಿ ಕಾಲುಂಗುರ, ಓಲೆ, ಕಾಲ್ಗೆಜ್ಜೆ, ಸೊಂಟದ ದಾಬು, ತೋಳ ಬಳೆ ಸೇರಿದಂತೆ ಇನ್ನಿತರ ಆಭರಣಗಳನ್ನು ನಿತ್ಯವೂ ಧರಿಸಬೇಕು ಎಂದು ಹೇಳಲಾಗುವುದು.

ಚಂದ್ರನಿಗೂ ಬೆಳ್ಳಿಗೂ ನಂಟು : ಬೆಳ್ಳಿಯು ಚಂದ್ರನನ್ನು ಪ್ರತಿಬಿಂಬಿಸುತ್ತದೆ. ನಿತ್ಯವೂ ಬೆಳ್ಳಿಯನ್ನು ಧರಿಸಿದರೆ ನಮ್ಮ ಬದುಕಲ್ಲಿ ಇರುವ ಸಾಕಷ್ಟು ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಹಾಗಾಗಿ ಕುಂಡಲಿಯಲ್ಲಿ ಇರುವ ಕೆಲವು ದೋಷಗಳನ್ನು ನಿವಾರಿಸಿಕೊಳ್ಳಲು ಸಹ ನಿತ್ಯವೂ ಬೆಳ್ಳಿಯ ಆಭರಣವನ್ನು ಧರಿಸಬೇಕು ಎಂದು ಹೇಳಲಾಗುವುದು. ಚಿನ್ನವು ಬೆಳ್ಳಿಗಿಂತಲೂ ಬೆಲೆ ಬಾಳುವ ಲೋಹ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯು ಚಿನ್ನಕ್ಕಿಂತ ಹೆಚ್ಚು ಪವಿತ್ರತೆಯನ್ನು ಹಾಗೂ ಪ್ರಾಧಾನ್ಯತೆಯನ್ನು ಪಡೆದುಕೊಂಡಿದೆ ಎಂದು ಹೇಳಲಾಗುವುದು.

ಬೆಳ್ಳಿಯು ಪ್ರಯೋಜನಕಾರಿ : ಬೆಳ್ಳಿಯು ಧಾರ್ಮಿಕವಾಗಿ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುವುದು. ಕಾಲಿನಲ್ಲಿ ಧರಿಸುವ ಬೆಳ್ಳಿಯ ಕಾಲುಂಗುರ, ಕಾಲ್ಗೆಜ್ಜೆ, ಕೈ ಬಳೆ, ಸೇರಿದಂತೆ ಇನ್ನಿತರ ಆಭರಣಗಳು ಧಾರ್ಮಿಕ ಹಿನ್ನೆಲೆಯೊಂದಿಗೆ ವೈಜ್ಞಾನಿವಾಗಿಯೂ ಮಹತ್ವವನ್ನು ಪಡೆದುಕೊಂಡಿವೆ. ನಮ್ಮ ದೇಹದಲ್ಲಿ ಬೆಳ್ಳಿಯ ಆಭರಣಗಳನ್ನು ಇರಿಸಿಕೊಳ್ಳುವುದು ಮತ್ತು ಬೆಳ್ಳಿ ಲೋಟದಲ್ಲಿ ಹಾಲನ್ನು ಕುಡಿಯುವುದು ಮಾಡಿದರೆ ಜೀವನದಲ್ಲಿ ಸಾಕಷ್ಟು ಪ್ರಯೋಜನಗಳನ್ನು ಹಾಗೂ ಪ್ರಗತಿಯನ್ನು ಕಾಣುವರು ಎಂದು ಹೇಳಲಾಗುವುದು.

ಬಾಂಧವ್ಯ ಬೆಸೆಯಲು ಬೆಳ್ಳಿಯ ಸಹಾಯ : ಸಂಗಾತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಾಮಾನ್ಯ. ಅಂತಹ ಭಿನ್ನಾಭಿಪ್ರಾಯಗಳು ಅತಿಯಾದಾಗ ಅದು ಘರ್ಷಣೆ ಹಾಗೂ ಮನಃಸ್ತಾಪಗಳಿಗೆ ಕಾರಣವಾಗುತ್ತವೆ. ಇಂತಹ ಸಮಸ್ಯೆಗಳನ್ನು ಬೆಳ್ಳಿ ಎನ್ನುವ ಲೋಹ ಅಥವಾ ಆಭರಣವು ನಿವಾರಣೆ ಮಾಡುವುದು. ಮಲಗುವ ಕೋಣೆಯಲ್ಲಿ ಹಾಸಿಗೆಯ ತಲೆ ದಿಂಬಿನ ಕೆಳಗೆ ಬೆಳ್ಳಿಯ ಆಭರಣ ಅಥವಾ ಬೆಳ್ಳಿಯ ವಸ್ತುವನ್ನು ಇಡುವುದರಿಂದ ಸಂಗಾತಿಗಳ ನಡುವೆ ಸಂಘರ್ಷ ನಡೆಯದು.

ದಾಂಪತ್ಯದ ನಡುವೆ ನಡೆಯುವ ಸಂಘರ್ಷವನ್ನು ತಪ್ಪಿಸಲು ಆಲದ ಎಲೆಯಲ್ಲಿ ಬೆಳ್ಳಿಯ ವಸ್ತು, ಹೂವು ಮತ್ತು ಹಾಲನ್ನು ಒಂದು ದೊಣ್ಣೆ ಅಥವಾ ದೋಣಿಕಾಯಾರದಲ್ಲಿ ಇರಿಸಿ. ಅದನ್ನು ಆಲದ ಮರದ ಬಳಿ ಇಟ್ಟು ದೀಪವನ್ನು ಬೆಳಗಿ. ಇಲ್ಲವೇ ನೀರಿನಲ್ಲಿ ಬಿಡಿ. ಈ ಪರಿಹಾರ ಕ್ರಮವನ್ನು 43 ದಿನಗಳವರೆಗೆ ಮುಂದುವರಿಸಿದರೆ ಸಮಸ್ಯೆ ನಿವಾರಣೆಯಾಗುವುದು. ಈ ಕ್ರಮವನ್ನು ಪ್ರತಿ ಶನಿವಾರ ಸಹ ಮಾಡಬಹುದು ಎಂದು ಹೇಳಲಾಗುವುದು.

ಬೆಳ್ಳಿಯ ಉಂಗುರ : ವ್ಯಕ್ತಿ ಕಿರಿಕಿರಿಯನ್ನು ಅನುಭವಿಸುತ್ತಿದ್ದರೆ ಬೆಳ್ಳಿಯ ಉಂಗುರವನ್ನು ಧರಿಸಬೇಕು. ಈ ಉಂಗುರವನ್ನು ಹೆಬ್ಬೆರಳಿನಲ್ಲಿ ಧರಿಸಬೇಕು. ಹೊಟ್ಟೆ ನೋವನ್ನು ಅನುಭವಿಸುವ ಮಹಿಳೆಯರು ಕಾಲಿನ ಹೆಬ್ಬೆರಳಿನಲ್ಲಿ ಉಂಗುರವನ್ನು ಧರಿಸಬೇಕು. ಇದ್ದಕ್ಕಿದ್ದಂತೆ ಮಲಬದ್ಧತೆಯನ್ನು ಹೊಂದಿದ್ದರೆ ಹೆಬ್ಬೆರಳಿನಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಬೇಕು. ಬಹುಬೇಗ ಸಮಸ್ಯೆ ನಿವಾರಣೆಯಾಗುವುದು.

ಅದೃಷ್ಟವನ್ನು ಹೆಚ್ಚಿಸಿಕೊಳ್ಳಲು : ಅದೃಷ್ಟಕ್ಕೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಬೆಳ್ಳಿಯ ಬಳೆ, ಉಂಗುರ, ಕಂಕಣ ಅಥವಾ ಹಾರವನ್ನು ಧರಿಸಬಹುದು. ಬೆಳ್ಳಿಯ ಅಭರಣವನ್ನು ಧರಿಸುವಾಗ ಸೋಮವಾರ ಧರಿಸಬೇಕು. ಆಗ ವ್ಯಕ್ತಿಯ ಅದೃಷ್ಟವು ಉತ್ತಮಗೊಳ್ಳುವುದು. ಸಮಸ್ಯೆ ನಿವಾರಣೆಯಾಗುವುದು. ಜೊತೆಗೆ ವ್ಯಕ್ತಿಯಲ್ಲಿ ಇರುವ ಕೋಪದ ಸಂವೇದನೆಯು ಕಡಿಮೆಯಾಗುತ್ತದೆ.

ವೈಜ್ಞಾನಿಕ ಸಂಗತಿ : ಬೆಳ್ಳಿಯಲ್ಲಿ ಬಲವಾದ ಆಂಟಿಮೈಕ್ರೊಬಿಯಲ್ ಏಜೆಂಟ್ ಆಗಿದೆ. ಇದು ಸೋಂಕುಗಳ ವಿರುದ್ಧ ಹೋರಾಡುವುದು. ಶೀತ ಮತ್ತು ಜ್ವರದಂತಹ ಅನೇಕ ಅನಾರೋಗ್ಯದ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು. ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ವ್ಯಕ್ತಿಯ ಸೌಂದರ್ಯ ಹೆಚ್ಚಾಗುತ್ತದೆ. ಇದರ ಪ್ರಭಾವದಿಂದ ಮುಖ ಮತ್ತು ದೇಹದ ಮೇಲಿರುವ ಕಪ್ಪು ಕಲೆಗಳನ್ನು ಮತ್ತು ಮೊಡವೆಗಳನ್ನು ಸಹ ಕಡಿಮೆ ಮಾಡುತ್ತದೆ.

ಕೋಪವನ್ನು ಕಡಿಮೆ ಮಾಡುವುದು : ತಮ್ಮ ಭಾವನೆಗಳ ಮೇಲೆ ಹತೋಟಿಯನ್ನು ಕಳೆದುಕೊಳ್ಳುತ್ತಿದ್ದೀರಿ, ಆಕ್ರಮಣಕಾರಿ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದಾದರೆ ಬೆಳ್ಳಿಯ ಉಂಗುರವನ್ನು ಕೈ ಬೆರಳುಗಳಲ್ಲಿ ಧರಿಸಿ. ಇದರಿಂದ ವ್ಯಕ್ತಿಯ ಮನಸ್ಸು ತಂಪಗಾಗುವುದು. ಶಾಂತವಾದ ಪ್ರವೃತ್ತಿಯನ್ನು ಹೊಂದುವನು. ಜೊತೆಗೆ ಕೋಪವೂ ಕಡಿಮೆಯಾಗುತ್ತದೆ.

ಮೆದುಳು ತೀಕ್ಷ್ಣವಾಗುವುದು : ಬೆಳ್ಳಿಯ ತಟ್ಟೆಯಲ್ಲಿ ಊಟ ಮಾಡುವುದು, ಬೆಳ್ಳಿ ಲೋಟದಲ್ಲಿ ಹಾಲು ಕುಡಿಯುವುದು ಹಾಗೂ ಬೆಳ್ಳಿಯ ಆಭರಣವನ್ನು ಧರಿಸುವುದು ಮಾಡಿದರೆ ವ್ಯಕ್ತಿಯ ಮಾನಸಿಕ ಸಾಮರ್ಥ್ಯ ಹೆಚ್ಚಾಗುವುದು. ಬುದ್ಧಿವಂತಿಕೆಯು ಹೆಚ್ಚುವುದು. ಮೆದುಳನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ.

ಕೀಲು ಸಂಬಂಧಿ ಸಮಸ್ಯೆ ನಿವಾರಣೆಯಾಗುವುದು : ಬೆಳ್ಳಿಯು ಧಾರ್ಮಿಕವಾಗಿ ಉತ್ತಮ ಪ್ರಭಾವ ನೀಡುವುದರ ಜೊತೆಗೆ ವೈಜ್ಞಾನಿಕವಾಗಿಯೂ ಸಾಕಷ್ಟು ಸಹಾಯ ಮಾಡುವುದು. ಬೆಳ್ಳಿ ಆಭರಣ ಧರಿಸುವುದರಿಂದ ಅಥವಾ ಬೆಳ್ಳಿ ಉಂಗುರವನ್ನು ಧರಿಸುವುದರಿಂದ ಕೀಲು ನೋವು, ಕೆಮ್ಮು, ಶೀತ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಿಸುವುದು. ಬೆಳ್ಳಿಯ ಸರ ಅಥವಾ ಹಾರವನ್ನು ಕತ್ತಿನಲ್ಲಿ ಧರಿಸುವುದರಿಂದ ದಿಗ್ಭ್ರಮೆಯ ಸಮಸ್ಯೆಯು ನಿವಾರಣೆಯಾಗುವುದು.

ಬೆಳ್ಳಿಯ ಬಣ್ಣ ಬದಲಾಗುವುದು : ಬೆಳ್ಳಿಯು ಜೀವಾಣುಗಳೊಂದಿಗೆ ಪ್ರತಿಕ್ರಿಯಿಸಿದಾಗ ಅದರ ಬಣ್ಣವು ಬದಲಾಗುತ್ತದೆ. ಹಾಗಾಗಿಯೇ ದೇಹದಲ್ಲಿ ಸೋಡಿಯಂ ಮಟ್ಟ ಹೆಚ್ಚಾದರೆ ಧರಿಸಿದ ಉಂಗುರ ಅಥವಾ ಬೆಳ್ಳಿಯ ಆಭರಣವು ತನ್ನ ಬಣ್ಣವನ್ನು ಕಳೆದುಕೊಳ್ಳುತ್ತವೆ. ಒಟ್ಟಾರೆಯಾಗಿ ಬೆಳ್ಳಿಯ ಉಂಗುರ ಧರಿಸುವುದರಿಂದ ದೇಹ ಮತ್ತು ಮನಸ್ಸು ಉತ್ತಮ ಸ್ವಾಸ್ತ್ಯವನ್ನು ಪಡೆದುಕೊಳ್ಳುತ್ತದೆ. ಅನೇಕ ರೋಗಗಳಿಂದ ದೇಹವನ್ನು ದೂರ ಇರಿಸುವುದು. ಹಾಗಾಗಿ ಜ್ಯೋತಿಷ್ಯ ಶಾಸ್ತ್ರವು ವ್ಯಕ್ತಿಗೆ ಬೆಳ್ಳಿಯ ಉಂಗುರ ಮತ್ತು ಒಡವೆಯನ್ನು ಧರಿಸಲು ಸಲಹೆ ನೀಡುವುದು.

LEAVE A REPLY

Please enter your comment!
Please enter your name here