ಪೈಲ್ವಾನ್ ಸಿನಿಮಾ ಕಲೆಕ್ಷನ್ ಬಗ್ಗೆ ನಿರ್ಮಾಪಕಿ ಸ್ವಪ್ನ ಕೃಷ್ಣ ಹೇಳಿದ್ದೇನು ಗೊತ್ತಾ?

0
1870

ಕಿಚ್ಚ ಸುದೀಪ್ ಅಭಿನಯದ ಕನ್ನಡದ ಬಹು ನಿರೀಕ್ಷಿತ ಸಿನಿಮಾ ಬಿಡುಗಡೆಯಾದ ದಿನದಿಂದಲೂ ಉತ್ತಮ ಪ್ರದರ್ಶನವನ್ನೇ ಕಾಣುತ್ತಿದೆ, ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾ ಈಗ ಚೀನಾದೇಶದ ವರೆಗೂ ಬಿಡುವಿಲ್ಲದೆ ಸಾಗಿದೆ, ಇಂತಹ ಪೈಲ್ವಾನ್ ಸಿನಿಮಾದ ನಿರ್ಮಾಪಕಿ ಯಾದ ಸ್ವಪ್ನ ಕೃಷ್ಣ ಅವರು ಈ ಚಿತ್ರದ ಬಗ್ಗೆ ಮಾಧ್ಯಮವೊಂದರಲ್ಲಿ ಸಂತೋಷವನ್ನು ಹಂಚಿಕೊಂಡಿದ್ದಾರೆ, ಹಾಗೂ ಚಿತ್ರದ ಪೈರಸಿ ಬಗ್ಗೆ ಕೂಡ ಮಾತನಾಡಿದ್ದಾರೆ.

ಪೈಲ್ವಾನ್ ಸಿನಿಮಾ ಎಲ್ಲಾ ಕಷ್ಟಗಳನ್ನು ಮೀರಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ, ಇಂದಿಗೂ ನನಗೆ ಹಲವರು ಮೆಸೇಜ್ ಮಾಡಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂದು ಪ್ರಶಂಸೆ ನೀಡುತ್ತಿದ್ದಾರೆ, ಪೈರಸಿಯನ್ನು ವ ದೊಡ್ಡ ಸಮಸ್ಯೆಗೆ ಸಿನಿಮಾ ಸಿಲುಕಿದ್ದರು ನಮ್ಮ ಕನ್ನಡದ ಅಭಿಮಾನಿಗಳು ಪೈಲ್ವಾನ್ ಚಿತ್ರದ ಕೈ ಬಿಡಲಿಲ್ಲ, ಬಿಡುಗಡೆಯಾದ ಮುಖ್ಯ ಚಿತ್ರಮಂದಿರಗಳಲ್ಲಿ ಇಂದಿಗೂ ಸಿನಿಮಾ ಭರ್ಜರಿ ಪ್ರದರ್ಶನವನ್ನೇ ಕಾಣುತ್ತಿದೆ, ಸಿನಿಮಾ ಪೈರಸಿಯ ಬಗ್ಗೆ ನಾವು ನಿಜವಾಗಿಯೂ ಯೋಚನೆ ಮಾಡಬೇಕು ನಮ್ಮ ಸಿನಿಮಾ ಮಾತ್ರವಲ್ಲದೆ ಯಾವುದೇ ಸಿನಿಮಾಗಳಿಗೂ ತೊಂದರೆ ಆಗಬಾರದು ಎಂದರು.

ಇನ್ನು ಪೈಲ್ವಾನ್ ಸಿನಿಮಾದ ಕಲೆಕ್ಷನ್ ಎಷ್ಟು ಎಂಬ ಪ್ರಶ್ನೆಗೆ ಸ್ವಪ್ನಕೃಷ್ಣ ಅವರು ಉತ್ತರ ಕೊಡಲು ನಿರಾಕರಿಸಿದ್ದಾರೆ, ನಾನು ಯಾವುದೇ ಕಾರಣಕ್ಕೂ ಸಿನಿಮಾದ ಗಳಿಗೆಯ ಬಗ್ಗೆ ಹಂಚಿಕೊಳ್ಳುವುದಿಲ್ಲ, ಈ ಸಿನಿಮಾ ಮಾತ್ರವಲ್ಲದೆ ಮುಂದೆ ಬಿಡುಗಡೆಯಾಗುವ ನನ್ನ ಯಾವುದೇ ಸಿನಿಮಾದ ಕಲೆಕ್ಷನ್ ಬಗ್ಗೆಯೂ ನಾನು ಮಾತನಾಡುವುದಿಲ್ಲ ಎಂದು ನೇರವಾಗಿಯೇ ಉತ್ತರಿಸಿದ್ದಾರೆ, ಪೈಲ್ವಾನ್ 2 ಸಿನಿಮಾ ಶುರು ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಪ್ನ ಕೃಷ್ಣ ಉತ್ತರ ನೀಡುತ್ತಾ ಹೌದು ಪೈಲ್ವಾನ್ ಯಶಸ್ಸಿನ ನಂತರ ಪೈಲ್ವಾನ್ ಎರಡನೇ ಅವತರಣಿಕೆ ಕಥೆಯ ಸಿದ್ಧತೆ ನಡೆಯುತ್ತಿದೆ, ಆದರೆ ಸುದೀಪ್ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಅಲ್ಲಿ ಬ್ಯುಸಿಯಾಗಿರುವುದರಿಂದ ಈ ಬಗ್ಗೆ ಅವರೊಟ್ಟಿಗೆ ಮಾತನಾಡಿದ್ದು ಎಲ್ಲವೂ ಅಂದುಕೊಂಡ ಹಾಗೆ ನಡೆದರೆ ಪೈಲ್ವಾನ್ ಸಿನಿಮಾದ ಎರಡನೇ ಅವತರಣೆ ಸಿದ್ಧವಾಗುವುದು ಎಂದರು.

LEAVE A REPLY

Please enter your comment!
Please enter your name here