ಚಾಣಾಕ್ಯ ಹೇಳಿರುವ ಈ ಅದ್ಬುತ ವಿಚಾರವನ್ನು ತಿಳಿಯದೆ ಇದ್ದರೆ ಖಂಡಿತವಾಗಿಯೂ ದೊಡ್ಡ ನಷ್ಟ..

0
5220

ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ನಾನು ಎಲ್ಲರೂ ಕಣ್ಣಿನ ಹುಬ್ಬು ಏರಿಸಿ ನೋಡುವ ರೀತಿಯಲ್ಲಿ ಚೆನ್ನಾಗಿ ಬಾಳಬೇಕು ಎಂಬುವ ಆಸೆಯನ್ನು ಇಟ್ಟುಕೊಂಡಿರುತ್ತಾನೆ, ಈ ಆಸೆಯನ್ನು ಜೀವಂತವಾಗಿಡಲು ಅಥವಾ ನಿಜ ಮಾಡಲು ಪ್ರತಿದಿನ ಕಷ್ಟ ಪಡುತ್ತಾನೆ, ಆದರೆ ಏನೇ ಮಾಡಿದರೂ ಯಶಸ್ಸು ಕಾಣುತ್ತಿರುವುದಲ್ಲ, ಎಷ್ಟೇ ಕಷ್ಟಪಟ್ಟರೂ ಹೇಗೆ ನನಗೆ ಯಶಸ್ಸು ಸಿಗುತ್ತಿಲ್ಲ ಎಂದು ಬಹಳ ಜನ ಯೋಚನೆ ಮಾಡುತ್ತಿರುತ್ತಾರೆ, ಜೀವನದಲ್ಲಿ ಉದ್ಧಾರ ಆಗಬೇಕು ಅಂದರೆ ಧನವನ್ನು ಗಳಿಸಬೇಕು ಅಂತ ಆಸೆ ಇದ್ದವರಿಗೆ ಈ 5 ಗುಣಲಕ್ಷಣಗಳು ಇರಲೇಬಾರದು ಎಂದು ಚಾಣಕ್ಯನ ನೀತಿ ಪುಸ್ತಕದಲ್ಲಿ ವಿವರಿಸಿ ಹೇಳುತ್ತಾರೆ, 5 ಗುಣಲಕ್ಷಣಗಳು ಯಾವುದು ಎಂಬುದು ಇಂದು ನಾವು ನಿಮಗೆ ತಿಳಿಸುತ್ತೇವೆ.

ಹಿಂದೆ ಮಾಡಿದ ತಪ್ಪನ್ನೇ ನೆನೆಸಿಕೊಂಡು ಕೊರಗುವುದು : ಮನುಷ್ಯ ತಪ್ಪು ಮಾಡುವುದು ಸಾಮಾನ್ಯ ಆದರೆ ಆ ತಪ್ಪಿನಿಂದ ಬುದ್ದಿ ಕಲಿಯಬೇಕು ಮತ್ತೆ ಆ ತಪ್ಪು ಮಾಡದಂತೆ ನೋಡಿಕೊಳ್ಳಬೇಕು, ಆದರೆ ಕೆಲವರ ಗುಣ ಅರಿತಿರುವುದಿಲ್ಲ ಮಾಡಿದ ತಪ್ಪನ್ನೇ ನೆನೆಸಿಕೊಂಡು ಮುಂದಿನ ಜೀವನವನ್ನು ಕಳೆಯುತ್ತಾರೆ, ಕೊರಗುತ್ತಾರೆ ತಮ್ಮನ್ನು ತಾವೇ ಬಲಹೀನರಾಗಿ ನೋಡಿಕೊಳ್ಳುತ್ತಾರೆ, ಈ ರೀತಿ ಮಾಡಿದರೆ ಯಾವುದೇ ಕಾರಣಕ್ಕೂ ಜೀವನದಲ್ಲಿ ಉದ್ಧಾರವಾಗಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳುತ್ತಾರೆ.

ಮೋಸ ಮಾಡುವುದು : ಹಣಗಳಿಸುವ ಉದ್ದೇಶವನ್ನು ಇಟ್ಟುಕೊಂಡು ಒಳ್ಳೆಯದು ಕೆಟ್ಟದ್ದು ಎಂಬುದನ್ನು ಮರೆತು, ಮೋಸ ಮಾಡಿ ಯಾರ ಬಳಿಯು ಹಣವನ್ನು ಪಡೆಯಬಾರದು, ಇದರಿಂದ ಸಮಾಜದಲ್ಲಿ ನಿಮ್ಮ ಹೆಸರನ್ನು ನೀವೇ ಕಳೆದುಕೊಳ್ಳುತ್ತೀರಿ, ಇದರಿಂದ ಯಾರು ನಂಬಿಕೆಗೂ ನೀವು ಪಾತ್ರ ಆಗುವುದಿಲ್ಲ, ನಂಬಿಕೆ ಕಳೆದುಕೊಂಡವನು ಜನರನ್ನು ಮತ್ತೆ ನಂಬಿಸಬೇಕು ಎಂದರೆ ಬಹಳ ಕಷ್ಟವಾಗುತ್ತದೆ, ಆನೆ ಬಾಲಕ್ಕೆ ಹೋದ ಮರ್ಯಾದೆ ಆನೆ ಕೊಟ್ಟರೂ ಬಾರದು ಎನ್ನುತ್ತಾರಲ್ಲ ಆ ರೀತಿ.

ಮಾತಾಡುವ ಮುನ್ನ ಎಚ್ಚರಾ : ಒಬ್ಬ ವ್ಯಕ್ತಿ ತಾನು ಮಾತಾಡುವ ಮಾತು ತನ್ನ ಮೇಲೆ ಮಾತ್ರವಲ್ಲದೆ ಬೇರೆಯವರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಮರೆಯಬಾರದು, ಅದೇ ಕಾರಣಕ್ಕಾಗಿ ನೀವು ಮಾತನಾಡುವ ಮಾತಿನ ಮೇಲೆ ನಿಯಂತ್ರಣ ಇರಬೇಕು, ನೀವು ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳುವ ಮುಂಚೆ ಅಥವಾ ಯಾವ ಕೆಲಸವನ್ನು ಮಾಡುವ ಮುಂಚೆ ತನಗೆ ತಾನು ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು, ನಾನು ಏನು ಮಾಡಬೇಕು ? ನಾನು ಏನನ್ನು ಮಾಡಿದರೆ ಏನಾಗುತ್ತೆ ? ನಾನು ಮಾಡುವ ಕೆಲಸಕ್ಕೆ ಎಷ್ಟು ಬೆಲೆ ಇದೆ ? ಎಂದು ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು.

ನಿಮ್ಮ ಸಮಸ್ಯೆ ಇನ್ನೊಬ್ಬರಿಗೆ ತಿಳಿಯಬಾರದು : ನೀವು ಆಡುವ ಮಾತುಗಳು ಮಾತ್ರ ನಿಮ್ಮ ಬಗ್ಗೆ ನಿಮ್ಮ ಮುಂದೆ ಇರುವವರಿಗೆ ತಿಳಿಸಿ ಹೇಳುತ್ತದೆ ಎಂದು ನೀವು ನಂಬಿದರೆ ಅದು ತಪ್ಪು ನಿಮ್ಮ ಮುಖವು ಕೂಡ ನಿಮ್ಮ ಅಂತರಂಗದಲ್ಲಿರುವ ನೋವು ಕಷ್ಟಗಳನ್ನು ಹಾಗೂ ಯಾವುದೇ ವಿಚಾರವಿದ್ದರೂ ಹೇಳಿಬಿಡುತ್ತದೆ, ಆದಕಾರಣ ಇದರ ಮೇಲೆ ಹೆಚ್ಚಿನ ಗಮನವಹಿಸಬೇಕು ತಮ್ಮನ್ನು ತಾವು ಕಂಟ್ರೋಲ್ ಮಾಡಿಕೊಳ್ಳಬೇಕು, ನಿಮಗೆ ತಿಳಿದಿರಲಿ ವಿಷ ಇಲ್ಲದ ಹಾಗೂ ಕೂಡ ವಿಷ ಇರುವ ರೀತಿ ನಡೆದುಕೊಳ್ಳುತ್ತದೆ ಇಲ್ಲವಾದರೆ ಉಳಿದ ಪ್ರಾಣಿಗಳು ಹಾವನ್ನು ಸಾಯಿಸಿ ಬಿಡುತ್ತವೆ, ಅದೇ ರೀತಿ ನಿಮ್ಮಲ್ಲಿ ನೋವಿದ್ದರೂ ನಾನು ತೋರಿಸಿಕೊಳ್ಳದ ರೀತಿಯಲ್ಲಿ ಬದುಕಬೇಕು.

ಬಲಹೀನರನ್ನು ನಿರ್ಲಕ್ಷ್ಯಮಾಡಬೇಡಿ : ನಿಮ್ಮ ಬಳಿ ಸ್ನೇಹಿತರನ್ನು ಇಟ್ಟುಕೊಳ್ಳುವುದಕ್ಕೆ ಇಂತ ಹೆಚ್ಚಾಗಿ ಶತ್ರುಗಳನ್ನು ಹತ್ತಿರ ಇಟ್ಟುಕೊಳ್ಳಬೇಕು, ಅದರಲ್ಲೂ ಬಲಹೀನರ ಹತ್ತಿರ ದ್ವೇಷ ಇಟ್ಟುಕೊಳ್ಳಬಾರದು, ಇದರ ಬಲಹೀನತೆ ಇವರನ್ನು ಯಾವ ಮಟ್ಟಕ್ಕೆ ಬೇಕಾದರೂ ಕರೆದುಕೊಂಡು ಹೋಗುತ್ತದೆ, ಉದಾಹರಣೆಗೆ ನೀವು ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದ ಮೇಲೆ ಆತನು ನಿಮ್ಮ ಮಟ್ಟಕ್ಕೆ ಬೆಳೆಯಲು ಆದರೆ ಇದ್ದಾಗ ಇಂದಿನಿಂದ ಕೆಟ್ಟ ಕೆಲಸಗಳನ್ನು ಮಾಡಲು ಶುರು ಮಾಡುತ್ತಾನೆ.

LEAVE A REPLY

Please enter your comment!
Please enter your name here