10ನೇ ತರಗತಿಯು ಪಾಸಾಗದ ಎರಡು ಮಕ್ಕಳ ತಾಯಿ ಐಪಿಎಸ್ ಅಧಿಕಾರಿಯಾದ ಕಥೆ!

0
4927

ಈ ಭೂಮಿಯ ಮೇಲೆ ಮನುಷ್ಯನಾಗಿ ಹುಟ್ಟಿದ ಮೇಲೆ ಏನಾದರೂ ಸಾಧಿಸಲೇಬೇಕು ಎಂದು ಹೇಳುವುದು ಸುಲಭ ಆದರೆ ಸಾಧನೆಯ ಹಾದಿ ಅಷ್ಟು ಸುಲಭವಲ್ಲ, ಅದಕ್ಕೆ ಮುಕ್ತ ಮನಸ್ಸು ಚಲ ಅತಿ ಮುಖ್ಯವಾಗುತ್ತದೆ, ಅಂತಹದೇ ಒಂದು ಅದ್ಭುತವಾದ ಸತ್ಯ ಘಟನೆಯ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ ಅದೇನೆಂದರೆ ಒಂದು ಸಣ್ಣ ಹಳ್ಳಿಯಲ್ಲಿ ಕಾನ್ಸ್ಟೇಬಲ್ ಪತ್ನಿಯಾಗಿದ್ದ ಅಂಬಿಕ ಎನ್ನುವ ಗೃಹಿಣಿ ದಕ್ಷ ಐಪಿಎಸ್ ಅಧಿಕಾರಿ ಆದ ರೋಚಕ ಕಥೆ.

ಅಂಬಿಕಾ ಅವರ ಜನನ ತಮಿಳುನಾಡಿನ ತಿಂಡಿಕಲ್ ಎನ್ನುವ ಒಂದು ಸಣ್ಣ ಗ್ರಾಮದಲ್ಲಿ ಆಗುತ್ತದೆ, ಇವರದು ಮಧ್ಯಮ ವರ್ಗದ ಕುಟುಂಬ, ಇನ್ನು ಅಂಬಿಕಾ ಅವರು ಸಣ್ಣ ವಯಸ್ಸಿನಲ್ಲಿ ಇರುವಾಗಲೇ ಮದುವೆ ಮಾಡಿಸುತ್ತಾರೆ, ಇವರ ಪತಿ ಅದೇ ಊರಿನಲ್ಲಿ ಕಾನ್ಸ್ಟೇಬಲ್, ಇವರ ಕುಟುಂಬ ಸಂತೋಷವಾಗಿ ಇರುತ್ತದೆ ಕಾಲ ಕಳೆಯುತ್ತಿದ್ದಂತೆ ಹೀಗೆ ಎರಡು ಮಕ್ಕಳು ಸಹ ಆಗುತ್ತದೆ, ಹೀಗೆ ಜೀವನ ಸಾಗುತ್ತಿರುವಾಗ ಪ್ರತಿದಿನ ಮಧ್ಯಾಹ್ನ ಊಟಕ್ಕೆ ಬರುತ್ತಿದ್ದ ಪತಿ ಅಂದು ಬಂದಿರುವುದಿಲ್ಲ ಹಾಗಾಗಿ ಈಕೆಯೇ ಊಟವನ್ನು ಕಟ್ಟಿಕೊಂಡು ತನ್ನ ಪತಿಯ ಸ್ಟೇಷನ್ ಗೆ ಹೋಗುತ್ತಾರೆ.

ಇಲ್ಲಿ ತಮ್ಮ ಪತಿಯ ಜೊತೆ ಹಲವು ಕಾನ್ಸ್ಟೇಬಲ್ ಗಳು ಪರೇಡ್ ಮಾಡುವುದನ್ನು ನೋಡುತ್ತಾರೆ ಹಾಗೂ ಸ್ಟೇಜ್ ಮೇಲೆ ನಿಂತಿದ್ದ ಮತ್ತೊಬ್ಬ ಅಧಿಕಾರಿಗೆ ಎಲ್ಲರೂ ಸಲ್ಯೂಟ್ ಮಾಡುವುದನ್ನು ಗಮನಿಸುತ್ತಾರೆ, ಅಂಬಿಕಾ ಅವರ ಪತಿಯು ಸಹ ಅವರಿಗೆ ಸಲ್ಯೂಟ್ ಮಾಡುವುದನ್ನು ನೋಡಿ ಇವರಿಗೆ ಅಷ್ಟು ಇಷ್ಟವಾಗುವುದಿಲ್ಲ, ಈ ಒಂದು ಘಟನೆ ಇವರ ಮನಸ್ಸಿನಲ್ಲಿ ತುಂಬಾ ಕಾಡುತ್ತದೆ, ರಾತ್ರಿ ನಿದ್ರೆಯಲ್ಲೂ ಸಹ ಇದೇ ಸನ್ನಿವೇಶ ಕನಸಿನಲ್ಲಿ ಬರುತ್ತದೆ, ಮರುದಿನ ಬೆಳಗ್ಗೆ ಎದ್ದ ತಕ್ಷಣ ತಮ್ಮ ಪತಿಗೆ ನೀವು ಏಕೆ ಈ ರೀತಿ ಸಲ್ಯೂಟ್ ಮಾಡುತ್ತಿದ್ದೀರಿ ಎಂದು ಕೇಳಿದಾಗ ಅವರು ನಮ್ಮ ಹಿರಿಯ ಅಧಿಕಾರಿಗಳು ಅವರಿಗೆ ಗೌರವ ಸೂಚಿಸುವ ಸಲುವಾಗಿ ಆ ರೀತಿ ಸಲ್ಯೂಟ್ ಮಾಡುತ್ತಿದ್ದೆವು ಎಂದು ತಿಳಿಹೇಳುತ್ತಾರೆ.

ಇದನ್ನು ಕೇಳಿದ ಅಂಬಿಕ ಅವರ ಮನಸ್ಸಿನಲ್ಲಿ ತಾವು ಕೂಡ ಐಪಿಎಸ್ ಅಧಿಕಾರಿ ಆಗಬೇಕು ಎಂಬ ಆಸೆ ಹುಟ್ಟಿ ಅದನ್ನು ತಮ್ಮ ಗಂಡನ ಜೊತೆ ಹೇಳಿಕೊಳ್ಳುತ್ತಾರೆ, ಅದಕ್ಕೆ ಅವರು ಖಂಡಿತ ಆಗಬಹುದು ಆದರೆ ಅದಕ್ಕೆ ನೀನು ಬಹಳಷ್ಟು ಪದವಿಗಳನ್ನು ಪಡೆಯಬೇಕಾಗುತ್ತದೆ ನೀನು 10ನೇ ತರಗತಿ ಸಹ ಫೇಲ್ ಆಗಿದ್ದೀಯಾ, ಎಂದು ಹೇಳಿದಾಗ ಅಂಬಿಕಾ ಅವರು ಇಲ್ಲ ನಾನು ನನ್ನ ಹತ್ತನೇ ತರಗತಿ ಉತ್ತೀರ್ಣ ಮಾಡಿ ಇದಕ್ಕೆ ಸಂಬಂಧಪಟ್ಟ ಎಲ್ಲಾ ಪರೀಕ್ಷೆಗಳನ್ನು ಬರೆಯುತ್ತೇನೆ ಎಂದು ಗಂಡನಿಗೆ ಹೇಳಿ ಅದರಂತೆ ಹಲವು ಪರೀಕ್ಷೆಗಳನ್ನು ಬರೆಯುತ್ತಾರೆ, ಆದರೆ ಕೆಲವು ಪರೀಕ್ಷೆಗಳಲ್ಲಿ ಆಕೆ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ ಆದರೂ ಛಲಬಿಡದೆ ಮತ್ತೆ ಪರೀಕ್ಷೆ ಬರೆದು ಉತ್ತೀರ್ಣರಾಗುತ್ತಾರೆ.

ಇಂದು ಅಂಬಿಕಾ ಅವರು ಪ್ರಸ್ತುತ ದೆಹಲಿಯ ಐಪಿಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ, ಅಷ್ಟೇ ಅಲ್ಲ ಸ್ನೇಹಿತರೆ ಅರ್ಧಕ್ಕೆ ಓದುವುದನ್ನು ಬಿಟ್ಟ ಮಕ್ಕಳಿಗೆ ಮತ್ತೆ ಓದಲು ಸಹಾಯವನ್ನು ಮಾಡುತ್ತಿದ್ದಾರೆ, ನೋಡಿ ಸಾಧನೆ ಮಾಡಲು ಯಾವುದೇ ವಯಸ್ಸು ಇರುವುದಿಲ್ಲ ಮೊದಲಿಗೆ ಸಾಧನೆ ಮಾಡಬೇಕು ಎಂಬುವ ಮನಸ್ಸು ಇರಬೇಕು ಅಷ್ಟೇ ಅಲ್ಲವೇ, ಇನ್ನು ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ಖಂಡಿತ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here