ಕನ್ನಡದ ಸೂಪರ್ ಹಿಟ್ ಸಿನಿಮಾ ಮುಂಗಾರುಮಳೆ ಬಗ್ಗೆ ನಿಮಗೆ ಗೊತ್ತಿರದ ಹಲವು ವಿಚಾರಗಳು..!

0
1815

ಮುಂಗಾರು ಮಳೆ 2006ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಗಣೇಶ್, ಸಂಜನಾ ಗಾಂಧಿ ಮತ್ತು ಅನಂತ್ ನಾಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ 500 ದಿನಗಳ ನಂತರ ಗಲ್ಲಾಪೆಟ್ಟಿಗೆಯಲ್ಲಿ 125 ಕೋಟಿ ಗಳಿಕೆ ಚಿತ್ರವು ಎಲ್ಲಾ ಅಪೇಕ್ಷೆಗಳನ್ನೂ ಮೀರಿ ಯಶಸ್ಸುಗಳಿಸಿದ್ದಕ್ಕೆ ಸಾಕ್ಷಿ. ಮುಂಗಾರು ಮಳೆ ಚಿತ್ರವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ್ದಲ್ಲದೇ ಶತದಿನೋತ್ಸವವನ್ನು ದಾಟಿ ರಜತ ಮಹೋತ್ಸವವನ್ನು ಆಚರಿಸಿಕೊಂಡಿದೆ. ಬೆಂಗಳೂರಿನ ಪಿವಿಆರ್ ಸಿನೆಮಾಸ್ ಚಿತ್ರಮಂದಿರದಲ್ಲಿ ಸತತವಾಗಿ ಒಂದು ವರ್ಷ ಪ್ರದರ್ಶಿಸಲ್ಪಟ್ಟಿದ್ದು ಭಾರತದಲ್ಲಿ ಒಂದು ದಾಖಲೆ.

ಚಿತ್ರವನ್ನು ತೆಲುಗಿನಲ್ಲಿ ವಾನ ಮತ್ತು ಬೆಂಗಾಲಿಯಲ್ಲಿ ಪ್ರೇಮೆರ್ ಕಹಿನಿ ಎಂದು ಮರು-ನಿರ್ಮಾಣ ಮಾಡಲಾಯಿತು.

ನಿರ್ದೇಶಕ ಯೋಗರಾಜ್ ಭಟ್ ಅವರು ಮಯೂರ್, ರಾಧಿಕಾ ನಟಿಸಿದ ಮಣಿ ಮತ್ತು ಸುದೀಪ್, ರಮ್ಯಾ ನಟಿಸಿದ ರಂಗ (ಎಸ್.ಎಸ್.ಎಲ್.ಸಿ) ಚಿತ್ರಗಳನ್ನ ನಿರ್ದೇಶಿಸಿದ್ದರು. ಎರಡೂ ಚಿತ್ರಗಳು ಹೆಚ್ಚಿನ ಯಶಸ್ಸು ಕಾಣಲಿಲ್ಲ. ನಂತರ ಯುವ ಲೇಖಕ ಪ್ರೀತಂ ಗುಬ್ಬಿ ಜೊತೆಗೂಡಿ ಮುಂಗಾರು ಮಳೆ ಚಿತ್ರದ ಕಥೆ ಬರೆದರು. ಯೋಗರಾಜ್ ಭಟ್ ಅವರು ಚಿತ್ರದ ಕಥೆಯನ್ನು ಪುನೀತ್ ರಾಜ್‌ಕುಮಾರ್ ಅವರಿಗಾಗಿ ನಿರೂಪಿಸಿದ್ದರು. ಆದರೆ ಪುನೀತ್ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರು. ಕಾಮಿಡಿ ಟೈಮ್ ಗಣೇಶ್ ಅವರು ಮುಂಗಾರು ಮಳೆ ಚಿತ್ರದ ಕಥೆ ನಿರ್ಮಾಣದ ಹಂತದಲ್ಲೇ ಯೋಗರಾಜ್ ಅವರೊಡನೆ ಕೆಲಸ ಮಾಡಿದ್ದರಿಂದ ಚಿತ್ರದಲ್ಲಿ ನಟಿಸುವ ಬಯಕೆ ತೋಡಿಕೊಂಡರು. ಯೋಗರಾಜ್ ಅವರನ್ನು ನಿರ್ಮಾಪಕ ಈ. ಕೃಷ್ಣಪ್ಪ ಅವರಿಗೆ ಭೇಟಿ ಮಾಡಿಸಿದ್ದೂ ಗಣೇಶ್ ಅವರೇ. ಕೃಷ್ಣಪ್ಪ ಮತ್ತು ಗಣೇಶ್ ಒಂದೆ ಊರಿನವರಾದ್ದರಿಂದ (ನೆಲಮಂಗಲದ ಅಡಕಮಾರನಹಳ್ಳಿ), ಕೃಷ್ಣಪ್ಪನವರು ಚಿತ್ರದ ಕಥೆ ಕೇಳಿ, ಮೆಚ್ಚಿಕೊಂಡು, ಚಿತ್ರ ನಿರ್ಮಿಸಲು ಒಪ್ಪಿದರು. ಕನ್ನಡದ ಯಾವುದೇ ಹೆಸರಾಂತ ನಟಿ ಸಿಗದ ಕಾರಣ, ಯೋಗರಾಜ್ ಅವರು ಉತ್ತರ ಭಾರತದ ಸಂಜನಾ ಗಾಂಧಿ ಅವರನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿದರು. ಇದು ಇಂದಿನವರೆಗೂ ಯೋಗರಾಜ್ ರ ಅತಿ ಯಶಸ್ವಿ ಚಿತ್ರ.

LEAVE A REPLY

Please enter your comment!
Please enter your name here