ಲಿವರ್ ಮತ್ತು ಕಿಡ್ನಿಯ ಆರೋಗ್ಯ ಹಾಳು ಮಾಡೋ ಕೆಮಿಕಲ್ ಮಿಶ್ರಿತ ಕಲ್ಲಂಗಡಿ ಹಣ್ಣನ್ನು ಕಂಡುಹಿಡಿಯುವುದು ಹೇಗೆ?

0
2282

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

ಬೇಸಿಗೆಯಲ್ಲಿ ಸಿಗುವ ಅತ್ಯುತ್ತಮ ಹಣ್ಣು ಕಲ್ಲಂಗಡಿ, ಬೇಸಿಗೆಯಲ್ಲಿ ಮಾನವನ ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ಆರೋಗ್ಯವನ್ನು ಕಾಪಾಡುವಲ್ಲಿ ಕಲ್ಲಂಗಡಿ ಹಣ್ಣು ಪ್ರಮುಖ ಪಾತ್ರವನ್ನು ವಹಿಸುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಹಣ್ಣನ್ನು ಬಹುಬೇಗ ಸಪ್ಲೈ ಮಾಡಿ ಹಣ ಪಡೆಯುವ ಉದ್ದೇಶದಿಂದ ಈ ಹಣ್ಣುಗಳಿಗೆ ಕೆಂಪುಬಣ್ಣದ ಇಂಜೆಕ್ಷನ್ ಸಿಂಪಡನೆ ಮಾಡುತ್ತಾರೆ, ಅಂದರೆ ಕಲ್ಲಂಗಡಿ ಕೆಂಪು ಬಣ್ಣ ಬರುವಂತೆ ರಾಸಾಯನಿಕಗಳನ್ನು ಚುಚ್ಚುತ್ತಾರೆ ಇದರಿಂದ ಹಣ್ಣು ತುಂಬಾ ಕೆಂಪಾಗಿ ಕಾಣುತ್ತದೆ, ಹಾಗೂ ಈ ರೀತಿಯ ಹಣ್ಣುಗಳು ಆರೋಗ್ಯಕ್ಕೆ ಮಾರಕ ಪರಿಣಾಮಗಳನ್ನು ಬೀರುತ್ತವೆ.

ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ಹಣ್ಣಿನಲ್ಲಿ ಈ ರೀತಿಯ ಇಂಜೆಕ್ಷನ್ ಸಿಂಪಡಿಸಿ ಇರುತ್ತಾರೆ ಎನ್ನುವ ಹಾಗಿಲ್ಲ ಆದರೆ ಬಹಳಷ್ಟು ಹಣ್ಣಿಗೆ ಈ ರೀತಿ ಇಂಜೆಕ್ಷನ್ ಚುಚ್ಚಿರುತ್ತಾರೆ, ಇಂತಹ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಏನಾಗಬಹುದು, ಅದನ್ನು ಹೇಳುವ ಮುಂಚೆ ಈ ಹಣ್ಣಿನಲ್ಲಿ ಕೆಮಿಕಲ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಸುತ್ತೇವೆ, ಬಹುಬೇಗ ಹಣ್ಣಾಗಲು ಇದಕ್ಕೆ ರಸಾಯನಿಕಗಳನ್ನು ಬಳಸುವುದರಿಂದ ಅಂದರೆ ಕಾರ್ಬೈಡ್ ಹಾಕಿದಾಗ ಇಥೆನಾಲ್ ಗ್ಯಾಸ್ ಉತ್ಪತ್ತಿಯಾಗುತ್ತದೆ, ಇದರಿಂದ ಹಣ್ಣು ಬೇಗನೆ ಮಾಗುತ್ತದೆ, ಆಹಾರ ತಜ್ಞರು ಹೇಳುವಂತೆ ಬಣ್ಣದಿಂದ ಕೂಡಿರಲಿ ಎಂದು ಸುಡನ್ ರೆಡ್ ಹಾಗೂ ಮೇಥಾನಾಲ್ ಯೆಲ್ಲೋ, ಪಾದರಸ ಕ್ರೋಮೆಟ್ ಬಳಸುತ್ತಾರಂತೆ.

ಈ ರೀತಿಯ ಕೆಮಿಕಲ್ ಬಳಕೆ ಮಾಡಿದ್ದ ಹಣ್ಣುಗಳನ್ನು ತಿನ್ನುವುದರಿಂದ ಮಾನವ ದೇಹದಲ್ಲಿ ಪ್ರಮುಖವಾಗಿ ಲಿವರ್ ಹಾಗೂ ಕಿಡ್ನಿ ಆರೋಗ್ಯ ಹಾಳಾಗುತ್ತದೆ, ಅಷ್ಟೇ ಅಲ್ಲದೆ ಹೊಟ್ಟೆ ಸಮಸ್ಯೆ, ರಕ್ತ ಹೀನತೆ, ಮೆದುಳಿಗೆ ಹಾನಿ, ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುವುದು ಈ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ, ಬಹುಮುಖ್ಯವಾಗಿ ಈ ರೀತಿಯ ರಾಸಾಯನಿಕ ಬಳಸಿದ ಯಾವುದೇ ಹಣ್ಣುಗಳನ್ನು ತಿನ್ನುವುದರಿಂದ ಕ್ಯಾನ್ಸರ್ ರೋಗ ಕೂಡ ಬರಬಹುದು.

ಹಾಗಾದರೆ ಈ ರೀತಿಯ ಕೆಮಿಕಲ್ ಬೆರೆಸಿದ ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಗುರುತಿಸುವುದು ಹೇಗೆ, ಮೇಲ್ನೋಟಕ್ಕೆ ನೀವು ಹಣ್ಣುಗಳನ್ನು ಗಮನಿಸಿದರೆ ನಿಮಗೆ ಗೊತ್ತಾಗುವುದಿಲ್ಲ ಆದರೆ ಸೂಕ್ಷ್ಮವಾಗಿ ಗಮನಿಸಿ ಸೂಜಿಯಿಂದ ಚುಚ್ಚಿ ರುವ ಸಣ್ಣ ರಂದ್ರಗಳು ಹಣ್ಣುಗಳ ಮೇಲೆ ಇರುತ್ತದೆ ಆದರೆ ಇದನ್ನು ಹಣ್ಣಿನ ವ್ಯಾಪಾರಿ ಒಪ್ಪುವುದಿಲ್ಲ, ಹಣ್ಣು ಗಳ ಮೇಲೆ ಬಿಳಿಯ ಹುಡಿ ಇರುತ್ತದೆ, ಹಣ್ಣುಗಳನ್ನು ನೀವು ಮುಟ್ಟಿದಾಗ ಈ ಹುಡಿ ನಿಮ್ಮ ಕೈಗಳಿಗೆ ಅಂಟುತ್ತದೆ ಇಂತಹ ಹಣ್ಣುಗಳನ್ನು ಕೊಳ್ಳಬೇಡಿ.

ಹಣ್ಣುಗಳನ್ನು ಕತ್ತರಿಸಿ ನೋಡಿದಾಗ ಅದರ ಬೀಜಗಳೇ ಹೇಳುತ್ತದೆ, ಅಂದರೆ ರಾಸಾಯನಿಕ ಬಳಸದೆ ಹೆಣ್ಣಾಗಿದ್ದರೆ ಅದರ ಜೊತೆ ಬೀಜಗಳು ಸಹಜವಾಗಿ ದಪ್ಪದಾಗಿ ಹಾಗೂ ಕಪ್ಪಾಗಿರುತ್ತದೆ, ಬೀಜಗಳು ಸಣ್ಣ ಇದ್ದು ಹಣ್ಣು ಮಾತ್ರ ಮಾಗಿದ್ದಾರೆ ಖಂಡಿತ ಈ ಹಣ್ಣು ರಾಸಾಯನಿಕಗಳನ್ನು ಬಳಸಿ ಹಣ್ಣು ಮಾಡಲಾಗಿದೆ ಎಂಬುದನ್ನು ಖಚಿತ ಮಾಡಿಕೊಳ್ಳಿ.

ಜಾಹಿರಾತು : ಶ್ರೀ ಚೌಡಿ ಮಹಾ ಶಕ್ತಿ ಜ್ಯೋತಿಷ್ಯ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ದಾಮೋದರ್ ಗುರೂಜಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 900 8906 888 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here