ಪೂಜೆ ಸಮಯದಲ್ಲಿ ಅರ್ಚಕರನ್ನು ಮುಟ್ಟಬಾರದು ಏಕೆ.

0
2479

ಪೂಜಾ ವಿಧಿಗಳಲ್ಲಿ ತೊಡಗಿರುವ ಅರ್ಚಕರನ್ನು ಮುಟ್ಟಬಾರದು ಎಂದು ಹೇಳಲು ಕಾರಣವೇನು. ದೇವರ ಪೂಜೆಯನ್ನು ಮಾಡುವವರಿಗೆ ಬರೀ ಮನಸ್ಸಿನಲ್ಲಿ ಭಕ್ತಿ ಶ್ರದ್ಧೆ ಇದ್ದರೆ ಮಾತ್ರ ಸಾಲದು. ಅವರ ದೇಹ ಹಾಗೂ ಮನಸ್ಸು ಶುದ್ಧವಾಗಿರಬೇಕು. ದೇವರ ಕೃಪೆಗೆ ಪಾತ್ರರಾಗಲು ನಮ್ಮ ಪೂರ್ವಜರು ಹಲವಾರು ಶಿಸ್ತುಬದ್ಧ ನಿಯಮಗಳನ್ನು ರೂಢಿಯಲ್ಲಿ ಇಟ್ಟುಕೊಂಡಿದ್ದಾರೆ. ಪೂಜೆಯಲ್ಲಿ ನಿರತರಾಗಿರುವಾಗ ಯಾವುದೇ ವ್ಯಕ್ತಿಯನ್ನು ಮುಟ್ಟುವುದು ಸೂಕ್ತವಲ್ಲ. ಪೂಜೆಯ ವಿಧಿಗಳಲ್ಲಿ ತೊಡಗಿರುವಾಗ ಶ್ರದ್ಧೆ ಮುಖ್ಯ.

ಅವರನ್ನು ಸ್ಪರ್ಶಿಸಿದರೆ ಅವರ ಏಕಾಗ್ರತೆಯನ್ನು ನಾವು ಕೆಡಿಸಿದಂತಾಗುತ್ತದೆ. ಪೂಜಾ ವಿಧಿಗಳಲ್ಲಿ ನಿರತರಾಗಿರುವ ಅರ್ಚಕರನ್ನು ಮುಟ್ಟುವುದು ಸರಿಯೇ. ಏಕೆ ಮುಟ್ಟಬಾರದು ಎಂಬ ಪ್ರಶ್ನೆ ಎಲ್ಲರಲ್ಲೂ ಇರುತ್ತದೆ. ಮನುಷ್ಯನ ಸುತ್ತಲೂ ಒಂದು ಶಕ್ತಿ ತಿರುಗಾಡುತ್ತಿರುತ್ತದೆ. ಹೀಗಾಗಿ ಆಯಾ ಸಮಯ ಸಂದರ್ಭಗಳಿಗೆ ಅನುಗುಣವಾಗಿ ಭಾವನೆಗಳು, ಕಾಮನೆಗಳು ನಮ್ಮ ಮನಸ್ಸಿನಲ್ಲಿ ಉತ್ಪತ್ತಿ ಆಗುತ್ತಿರುತ್ತದೆ. ಜೀವನದಲ್ಲಿ ನವರಸಗಳು ಬಹಳ ಮುಖ್ಯ. ಆಧ್ಯಾತ್ಮ ಎನ್ನುವುದು ಭಕ್ತಿರಸ ಎನ್ನುವ ವಿಷಯದ ಅಡಿಯಲ್ಲಿ ಬರುತ್ತದೆ.

ಆಧ್ಯಾತ್ಮಿಕತೆ ಎನ್ನುವುದು ನಮ್ಮ ಮನಸ್ಸಿನಲ್ಲಿ ಹೊಕ್ಕಿದ ನಂತರ ಇಡೀ ದೇಹವನ್ನು ಆವರಿಸಿಕೊಂಡು ಭಾವನೆಗಳು ಪವಿತ್ರವಾಗಿರುತ್ತದೆ. ಅಂತಹ ಸಮಯದಲ್ಲಿ ಅರ್ಚಕರು ದೇವಾಲಯಗಳಲ್ಲಿ ಮಂತ್ರಪಠಣ ಪೂಜಾವಿಧಿಗಳಲ್ಲಿ ನಿರತರಾಗಿರುತ್ತಾರೆ. ಹೀಗಾಗಿ ಮನಸ್ಸು ದೇಹದಲ್ಲಿ ಆಧ್ಯಾತ್ಮಿಕತೆ ತುಂಬಿರುತ್ತದೆ. ಬೇರೆ ವ್ಯಕ್ತಿಗಳು ಬಂದು ತಕ್ಷಣ ಅರ್ಚಕರನ್ನು ತಾಕುವುದರಿಂದ ಆಧ್ಯಾತ್ಮ ಭಾವದ ತೀಕ್ಷ್ಣತೆ ಕಡಿಮೆಯಾಗುತ್ತದೆ. ಅಂತಹ ದಿವ್ಯಶಕ್ತಿ ಆಧ್ಯಾತ್ಮಿಕತೆಯಲ್ಲಿ ಇರುತ್ತದೆ. ದೇಹದಲ್ಲಿ ತರಂಗಗಳು ಹರಿದಾಡುವುದು. ಆದ್ದರಿಂದ ಒಬ್ಬರ ದೇಹವು ಇನ್ನೊಬ್ಬರನ್ನು ಬಂದು ತಾಕುವುದಕ್ಕೆ ಒಂದು ಬಾರಿ ಯೋಚನೆ ಮಾಡುವುದು ಸೂಕ್ತ. ಈ ರೀತಿ ಮಾಡುವುದರಿಂದ ಶಕ್ತಿ ಕಡಿಮೆಯಾಗುತ್ತದೆ.

ವಾಸ್ತವಿಕತೆಯಿಂದ ಯೋಚಿಸುವುದಾದರೆ ನಮ್ಮ ಆಧ್ಯಾತ್ಮಿಕ ಪರಂಪರೆಯಲ್ಲಿ ಬರುವ ಅನೇಕ ಹೆಸರುಗಳಲ್ಲಿ ಮೀರಾಬಾಯಿ, ಕನಕದಾಸ, ಪುರಂದರದಾಸ ಮುಂತಾದ ವ್ಯಕ್ತಿಗಳು ಸಾಮಾನ್ಯವಾಗಿ ಜನಿಸಿ ಅಸಾಮಾನ್ಯರಾಗಿ ಬೆಳೆದು ಬಂದ ದಾರಿ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಹೀಗೆ ಅಂತಹ ವ್ಯಕ್ತಿ ಪುಣ್ಯ ಪುರುಷರಿಗೆ ತೊಂದರೆ ಕೊಡಬಾರದು. ಅವರನ್ನು ಸ್ಪರ್ಶಿಸುವ ಗೋಜಿಗೆ ಹೋಗಬಾರದು. ವೈಚಾರಿಕತೆಯಿಂದ ನೋಡುವುದಾದರೆ ಪ್ರತಿಯೊಬ್ಬ ಮನುಷ್ಯ ತನ್ನದೇ ಆದಂತಹ ಶಕ್ತಿ ಮತ್ತು ಆ’ಕರ್ಷಕ ವಲಯ ಹೊಂದಿರುತ್ತಾನೆ.

ಸ್ಪರ್ಶ ಸಹ ಒಬ್ಬ ವ್ಯಕ್ತಿ ದೇಹಕ್ಕೆ ಹೊಂದಿಕೊಂಡಂತೆ ಬೇರೆ ವ್ಯಕ್ತಿಗಳ ಶರೀರಕ್ಕೆ ಒಗ್ಗಿಕೊಳ್ಳುವುದಿಲ್ಲ. ಹೀಗಾಗಿ ನಾವು ಏಕಾಏಕಿ ಒಬ್ಬ ವ್ಯಕ್ತಿಯ ಸನಿಹ ಹೋಗಿ ಮುಟ್ಟಬಾರದು. ಆ ರೀತಿ ಮಾಡುವುದರಿಂದ ಅವರ ಶಕ್ತಿ ಕಡಿಮೆಯಾಗುತ್ತದೆ. ಆ ವ್ಯಕ್ತಿಯ ದಿವ್ಯ ಚೇತನದಲ್ಲಿ ಮಾರ್ಪಾಡು ಮಾಡುವುದು ಸರಿಯಲ್ಲ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here