ನವರಾತ್ರಿಯ ನಾಲ್ಕನೇ ದಿನ ದುರ್ಗಾಮಾತೆಯ ನಾಲ್ಕನೇ ಅವತಾರವಾದ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಭೂಮಿಯಲ್ಲಿನ ಅಂಧಕಾರವನ್ನು ಕಳೆದು ಬೆಳಕನ್ನು ನೀಡುವ ತಾಯಿಯನ್ನು ಪೂಜಿಸಿದರೆ ಆರೋಗ್ಯದ ಸಮಸ್ಯೆಗಳೆಲ್ಲಾ ಪರಿಹಾರವಾಗುವುದು. ಸದಾ ಮಂದಸ್ಮಿತೆಯಾಗಿರುವ ದುರ್ಗಾದೇವಿಯ ನಾಲ್ಕನೇ ಅವತಾರವೇ ಕೂಷ್ಮಾಂಡ. ಈಕೆಯ ಆರಾಧನೆಯಿಂದ ಮನದ ಕ್ಲೇಷ ಕಳೆದು ಜ್ಞಾನದ ಬೆಳಕು ಮೂಡುತ್ತದೆ. ಜ್ಞಾನದ ಹೊನಲು ಸಂತಸಕ್ಕೆ ಕಾರಣವಾಗುತ್ತದೆ. ಸಂಸ್ಕ್ರತದಲ್ಲಿ ಕೂಷ್ಮಾಂಡವೆಂದರೆ ಬೂದುಗುಂಬಳಕಾಯಿ ಎಂದರ್ಥ. ಆಯುರ್ವೇದ ಶಾಸ್ತ್ರದ ಪ್ರಕಾರ ಬೂದುಗುಂಬಳಕಾಯಿಯು ಜ್ಞಾನವರ್ಧಕ, ತೇಜೋ ವರ್ಧಕ.
ಸಕಲ ತಾಪವನ್ನು ನಿವಾರಣೆ ಮಾಡಿ ದೇಹಕ್ಕೆ ತಂಪೆರೆವ ಶಾಖಾಹಾರ. ಕೂಷ್ಮಾಂಡ ಪದದಲ್ಲಿ ಕು ಎಂದರೆ ಚಿಕ್ಕದು, ಉಷ್ಮ ಎಂದರೆ ಶಕ್ತಿ ಮತ್ತು ಅಂಡ ಎಂದರೆ ಭ್ರೂಣ ಎಂದರ್ಥ. ಸರಳವಾಗಿ ಹೇಳುವುದಾದರೆ ಇಡೀ ಬ್ರಹ್ಮಾಂಡವೆನ್ನುವ ಚೈತನ್ಯಶಕ್ತಿಯನ್ನೇ ತನ್ನ ಒಡಲಿನಲ್ಲಿ ಇಟ್ಟುಕೊಂಡವಳು ಎಂದರ್ಥ. ದುರ್ಗಾಸಪ್ತಶತಿಯ ಪ್ರಕಾರ ಕೂಷ್ಮಾಂಡ ದೇವಿಯೇ ಜಗದ ಸೃಷ್ಟಿಗೆ ಕಾರಣೀಭೂತಳಾಗಿದ್ದಾಳೆ. ಸೌರವ್ಯೂಹದ ಗ್ರಹಗಳ ಚಲನೆಯನ್ನು ನಿಯಂತ್ರಿಸುತ್ತಾಳೆ. ಆಕೆ ಇರುವಲ್ಲಿ ಬೆಳಕು ಹಾಗೂ ಜ್ಞಾನವಿದೆ. ಕೂಷ್ಮಾಂಡ ದೇವಿಯ ರೂಪ : ಕೂಷ್ಮಾಂಡ ದೇವಿಯು ತನ್ನ ಏಳೂ ಕೈಗಳಲ್ಲಿ ಕಮಂಡಲ, ಧನಸ್ಸು, ಬಾಣ, ತಾವರೆ ಹೂವು, ಚಕ್ರ, ಗದೆ ಹಾಗೂ ಜಪಮಾಲೆಯನ್ನು ಹಿಡಿದಿದ್ದಾಳೆ.
ಇನ್ನೊಂದು ಹಸ್ತವು ಅಭಯ ಮುದ್ರೆಯಲ್ಲಿದ್ದು ಸದಾ ತನ್ನ ಭಕ್ತರನ್ನು ಆಶೀರ್ವದಿಸುತ್ತಾಳೆ ಎನ್ನಲಾಗುತ್ತದೆ. ವ್ಯಾಘ್ರವಾಹಿನಿಯಾಗಿರುವ ಈಕೆ ಧರ್ಮದ ಪ್ರತೀಕವಾಗಿದ್ದಾಳೆ. ಎಂಟು ಭುಜಗಳಿರುವ ಕಾರಣ ಅಷ್ಟಭುಜಾದೇವಿ ಎಂದು ಕರೆಯಲಾಗುತ್ತದೆ. ಪುರಾಣ ಕಥೆ : ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ ‘ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿ- ಸ್ವರೂಪ ಶಕ್ತಿಯಾಗಿದ್ದಾಳೆ. ಈಕೆಯು ಸೂರ್ಯನ ಸ್ಥಾನದಲ್ಲಿ ನಿಲ್ಲುವ ಕಾರಣದಿಂದಾಗಿ ಭೂಮಿಯ ಮೇಲಿರುವ ಅಂಧಕಾರವನ್ನೆಲ್ಲಾ ನಿವಾರಣೆ ಮಾಡುತ್ತಾಳೆ ಎನ್ನಲಾಗುತ್ತದೆ.
ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳೂ ನಿವಾರಣೆಯಾಗುವವು. ಪೂಜಾ ವಿಧಿ : ಕೂಷ್ಮಾಂಡ ದೇವಿಯನ್ನು ಅರ್ಚಿಸಲು ಅತೀ ಪವಿತ್ರವಾದ ಹೂವೆಂದರೆ ಕೆಂಪು ಬಣ್ಣದ ಹೂಗಳು. ದೇವಿಯನ್ನು ಅರ್ಚಿಸಿ ನಂತರ ಷೋಡಶೋಪಚಾರ ಪೂಜೆ ಅಂದರೆ 16 ವಿಧದ ಪೂಜೆಯನ್ನು ಮಾಡಿ. ನಿಮ್ಮ ಕುಟುಂಬ ಶ್ರೇಯಸ್ಸಿಗಾಗಿ ಬೇಡಿಕೊಳ್ಳಿ, ಆರತಿಯೊಂದಿಗೆ ಪೂಜೆ ಮುಗಿಸಿ.
ಕೂಷ್ಮಾಂಡ ಮಂತ್ರ : ಓಂ ದೇವೀ ಕೂಷ್ಮಾಂಡೈ ನಮಃ ಓಂ ದೇವಿ ಕೂಷ್ಮಾಂಡದಾಯ್ಯೈ ನಮಃ ಸುರಸಂಪೂರ್ಣ ಕಲಶಂ ರುಧಿರಾಪ್ಲುತಾಮೇವ ಚ. ದಾಧನ ಹಸ್ತಪದ್ಮಾಭಯಂ ಕೂಷ್ಮಾಂಡ ಶುಭದಾಸ್ತು ಮೇ. ಕೂಷ್ಮಾಂಡ ಪ್ರಾರ್ಥನೆ : ಸುರಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ. ದಾಧನ ಹಸ್ತಪದ್ಮಾಭಯಂ ಕೂಷ್ಮಾಂಡ ಶುಭದಾಸ್ತು ಮೇ. ಕೂಷ್ಮಾಂಡ ದೇವಿ ಸ್ತುತಿ : ಯಾ ದೇವಿ ಸರ್ವಭೂತೇಷು ಮಾ ಕೂಷ್ಮಾಂಡಾ ರೂಪೇಣ ಸಂಸ್ಥಿತಾ. ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ.
ಧ್ಯಾನ ಮಂತ್ರ : ವಂದೇ ವಂಚಿತ ಕಾಮರ್ಥೇ ಚಂದ್ರಾರ್ಧಕೃತಶೇಖರಂ. ಸಿಂಹರೂಢ ಅಷ್ಟಭುಜಾ ಕೂಷ್ಮಾಂಡಾ ಯಶಾಸ್ವಿನೀಂ ಭಾಸ್ವರಾ ಭಾನು ನಿಭಾಂ ಅನಹತಾ ಸ್ಥಿತಿಂ ಚತುರ್ಥ ದುರ್ಗಾ ತ್ರಿನೇತ್ರಂ. ಕಮಂಡಲು, ಚಾಪಾ, ಬನ, ಪದ್ಮ, ಸುಧಾಕಲಶ, ಚಕ್ರ, ಗಧಾ, ಜಪವತಿಧರಂ. ಪತಂಬರಾ ಪರಿಧಾನಾಂ ಕಾಮನೀಯಂ ಮೃದುಹಾಸ್ಯ ನಾನಾಲಂಕಾರ ಭೂಷಿತಂ. ಮಂಜೀರಾ, ಹರಾ, ಕೀಯೂರಾ, ಕಿಂಕಿಣಿ, ರತ್ನಾಕುಂಡಲ, ಮಂದಿತಮ್. ಪ್ರಫುಲ್ಲ ವದನಂಚಾರು ಚಿಬುಕಾಂ ಕಾಂತ ಕಪೋಲಂ ತುಂಗಂ ಕುಚಂ. ಕೋಮಲಾಂಗಿ ಸ್ಮೇರಮುಖಿ ಶ್ರೀಕಾಂತಿ ನಿಮ್ನಾಭಿ ನಿತಂಬನಿಂ.
ಸ್ತೋತ್ರ : ದುರ್ಗತಿನಾಶಿನಿ ತುಮಹಿ ದರಿದ್ರಾದಿ ವಿನಾಶನಿಂ ಜಯಂದಾ ಧನದಾ ಕೂಷ್ಮಾಂಡಾ ಪ್ರಾಣಮಾಮ್ಯಹಂ ಜಗತಮಾತಾ ಜಗತಕಾತ್ರಿ ಜಗದಾಧರ ರೂಪಾನಿಂ ಚಾರಚರೇಶ್ವರಿ ಕೂಷ್ಮಾಂಡೇ ಪ್ರಣಮಾಮ್ಯಹಂ ತ್ರೈಲೋಕ್ಯಸುಂದರೀ ತ್ವಂಹಿ ದುಖಾ ಶೋಕ ನಿವಾರಿನಿಂ ಪರಮಾನಂದಮಯಿ ಕೂಷ್ಮಾಂಡೇ ಪ್ರಣಮಾಮ್ಯಹಂ. ಕೂಷ್ಮಾಂಡ ಕವಚ : ಹಂಸಾರೈ ಮೇನ್ ಶಿರ ಪಟು ಕೂಷ್ಮಾಂಡೇ ಭವನಾಶಿನಿಂ ಹಸಲಾಕರಿಂ ನೇತ್ರೇಚ, ಹಸರೌಶ್ಚಾ ಲಲಾಟಕಂ ಕೌಮಾರಿ ಪಟು ಸರ್ವಗಾತ್ರೇ, ವಾರಾಹಿ ಉತ್ತರೇ ತಥಾ ಪೂರ್ವೆ ಪಟು ವೈಷ್ಣವಿ ಇಂದ್ರಾಣಿ ದಕ್ಷಿಣೇ ಮಮಾ ದಿಗ್ವಿದಿಕ್ಷು ಸರ್ವತ್ರೇವಾ ಕುಂ ಬೀಜಂ ಸರ್ವದಾವತು.
ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡದೇವಿಯನ್ನು ಪೂಜಿಸುವುದರಿಂದ ಸರ್ವರೋಗಗಳು ನಿವಾರಣೆಯಾಗಿ, ಆರೋಗ್ಯ ವೃದ್ಧಿಯಾಗುವುದು. ವೈಯಕ್ತಿಕವಾಗಿ ತಂದೆ, ಸಹೋದರಿ ಸಹೋದರಿ, ಹಿರಿಯರೊಂದಿಗೆ ಹಾಗೂ ಉದ್ಯೋಗದ ಸ್ಥಳದಲ್ಲೂ ನಿಮ್ಮ ಸಂಬಂಧವನ್ನು ಉತ್ತಮಗೊಳಿಸುವುದು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯವನ್ನು ಹಂಚಿಕೊಳ್ಳುವುದು ಸಹ ಒಂದು ಪುಣ್ಯದ ಕೆಲಸವಿದೆ. ಹಾಗೂ ಮರೆಯದೆ ನಮ್ಮನ್ನು ಲೈಕ್ ಮಾಡಿ ಮತ್ತು ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.