ಕೊವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಇವೆರಡರ ನಡುವೆ ಗೊಂದಲಗಳು ಬೇಡ. ತಜ್ಞರಿಂದ ಕೆಲವು ಸಲಹೆ ಸೂಚನೆಗಳು ಇಲ್ಲಿವೆ.

0
7058

ಕೊವ್ಯಾಕ್ಸಿನ್ ಹಾಗೂ ಕೋವಿಶಿಲ್ಡ್ ಇವೆರಡರ ನಡುವೆ ನಮ್ಮೆಲ್ಲರಿಗೂ ಗೊಂದಲಗಳು ಇರುವುದು ಸಾಮಾನ್ಯ. ತಜ್ಞರಿಂದ ಕೆಲವು ಸಲಹೆ ಸೂಚನೆಗಳು ಇಲ್ಲಿವೆ. ಜನಗಳು ಆಡುವ ಯಾವ ಗಾಸಿಪ್ ಗಳಿಗೂ ಕಿವಿ ಕೊಡಬೇಡಿ. ಇದರ ಬಗ್ಗೆ ಗೊಂದಲ ಬೇಡ. ಇದನ್ನು ಪೂರ್ತಿ ಓದಿದರೆ ನಿಮಗೆ ಎಲ್ಲಾ ಗೊಂದಲಗಳೂ ದೂರವಾಗುತ್ತದೆ.

ನಾವೆಲ್ಲರೂ ಕಡ್ಡಾಯವಾಗಿ ಕರೊನಾ ಲಸಿಕೆ ಹಾಕಿಸಿಕೊಳ್ಳೋಣ. ಹೀಗೆಂದು ಡಾ॥ ವಿ. ರವಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹೇಳುತ್ತಿದ್ದಾರೆ. ಇವರು ನಮಗೆ ಮತ್ತಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದೇನೆಂದು ನೋಡೋಣ ಬನ್ನಿ.

1. ಲಸಿಕೆ ಪಡೆದರೆ ಲಾಭವೇನು. ಲಸಿಕೆ ಹಾಕಿಸಿಕೊಂಡರೆ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಸೋಂಕಿನಿಂದ ರಕ್ಷಣೆ ಪಡೆದುಕೊಳ್ಳುವುದರ ಜೊತೆಗೆ ಸೋಂಕು ಹರಡುವುದನ್ನು ನಿಯಂತ್ರಿಸಬಹುದು.

2. ಲಸಿಕೆ ಪಡೆದ ಎಷ್ಟು ದಿನಗಳ ನಂತರ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ಪಡೆದ ಎರಡು ವಾರಗಳ ಬಳಿಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

3. ಕೋವ್ಯಾಕ್ಸಿನ್, ಕೋವಿಶೀಲ್ಡ್ ಪರಿಣಾಮವೇನು. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆ ನೀಡಲಾಗುತ್ತಿದೆ. ಕಂಪನಿ ಮಾತ್ರ ಬೇರೆ ಬೇರೆ ಇದೆ. ಈ ಎರಡೂ ಲಸಿಕೆಗಳ ಪರಿಣಾಮ ಒಂದೇ ಆಗಿದೆ. ಯಾವ ವಿಯಾಕ್ಸಿನ್ ತೆಗೆದುಕೊಳ್ಳಬೇಕು ಎಂಬ ಗೊಂದಲಬೇಡ. ಬದಲಿಗೆ ಎರಡರಲ್ಲಿ ಯಾವುದನ್ನು ಬೇಕಾದರೂ ತೆಗೆದುಕೊಳ್ಳಬಹುದು.

4. ಲಸಿಕೆ ಪಡೆದರೆ ಸೋಂಕು ಬರುವುದಿಲ್ಲವೆ. ಕೋವಿಡ್ ಲಸಿಕೆ ಹಾಕಿಸಿಕೊಂಡ ಕೂಡಲೆ ಸೋಂಕು ಹರಡುವುದಿಲ್ಲ ಎಂದಲ್ಲ. ಸೋಂಕು ತಗುಲಿದರೂ ಅದರ ತೀವ್ರತೆ ಕಡಿಮೆ ಇರುತ್ತದೆ. ಲಸಿಕೆ ಪಡೆದರೂ ಇನ್ನೂ ಒಂದು ವರ್ಷ ಮಾಸ್ಕ್ ಧರಿಸುವುದು ಸೇರಿ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

5. ಮೊದಲ ಡೋಸ್ ಕೋವ್ಯಾಕ್ಸಿನ್ ನಂತರದ ಡೋಸ್ ಕೋವಿಶೀಲ್ಡ್ ಪಡೆಯಬಹುದೆ. ಮೊದಲ ಡೋಸ್ ಯಾವುದನ್ನು ಪಡೆದಿರುತ್ತೀರೊ ನಂತರದ ಡೋಸ್ ಕೂಡ ಅದೇ ಪಡೆಯಬೇಕು. ಮೊದಲ ಡೋಸ್ ಕೊಟ್ಟ ಸಮಯದಲ್ಲೆ ಇಲಾಖೆಯ ಆ್ಯಪ್ ನಲ್ಲಿ ಸಂಪೂರ್ಣ ಮಾಹಿತಿ ದಾಖಲಾಗಿರುತ್ತದೆ. ಎರಡನೆ ಡೋಸ್ ಪಡೆಯಲು ಹೋದಾಗ ಆ್ಯಪ್ ಮಾಹಿತಿ ಆಧರಿಸಿ ಲಸಿಕೆ ಕೊಡಲಾಗುತ್ತದೆ ಇದರ ಬಗ್ಗೆ ಗೊಂದಲಬೇಡ.

6. ಲಸಿಕೆ ಪಡೆದವರಲ್ಲಿ ಎಷ್ಟು ಜನರಿಗೆ ಸೋಂಕು ಬಂದಿದೆ, ಮೃತಪಟ್ಟಿದ್ದಾರೆಯೇ. ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ ಶೇ. 1.03. ಮಂದಿಗೆ ಮಾತ್ರ ಸೋಂಕು ಬಂದಿದೆ. ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಶೇ. 1.04 ಜನರಿಗೆ ಸೋಂಕು ತಗುಲಿದೆ. ಇನ್ನು ಲಸಿಕೆ ಪಡೆದ ನಂತರವೂ ಸೋಂಕು ತಗುಲಿ ಯಾರೊಬ್ಬರೂ ಈವರೆಗೆ ಮೃತಪಟ್ಟಿಲ್ಲ. ಸಾವಿನ ಪ್ರಮಾಣ ಶೇ. 0 ಇದೆ.

7. ಕೋವಿಡ್ ವ್ಯಾಕ್ಸಿನ್ ನಮ್ಮ ದೇಶದ ಪ್ರತಿಷ್ಠಿತ ವೈದ್ಯ ಇಲಾಖೆಯಿಂದ ಸತತ ಪರೀಕ್ಷೆಗೆ ಒಳಪಟ್ಟು ವಿಶ್ವ ಆರೋಗ್ಯ ಸಂಸ್ಥೆಯಿಂದಾನು ಅನುಮತಿಸಿ ವಿವಿಧ ದೇಶಗಳ ವೈದ್ಯರಿಂದಲೂ ಪ್ರಾಮಾಣಿಕರಿಸಿದ್ದು ಯಾವುದೆ ಅಧುಮಾನ ಬೇಡ. ಊಹಾಪೋಹಗಳಿಗೆ ಕಿವಿಗೊಡಬೇಡಿ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here